ಹುಬ್ಬಳ್ಳಿ:ಆಸ್ತಿ ವಿವಾದ ಹಿನ್ನೆಲೆಯಲ್ಲಿ ಶಾಸಕರ ಸಹೋದರನ ಪುತ್ರನ ಕಾರಿನ ಮೇಲೆ ಸಹೋದರ ಸಂಬಂಧಿಗಳೇ ಕಲ್ಲು ತೂರಾಟ ಮಾಡಿರುವ ಘಟನೆ ಕಲಘಟಗಿ ತಾಲೂಕಿನ ಸಂಗೆದೇವರಕೊಪ್ಪ ಗ್ರಾಮದಲ್ಲಿ ನಡೆದಿದೆ.
ಕಲಘಟಗಿ ಶಾಸಕ ಸಿ.ಎಂ. ನಿಂಬಣ್ಣನವರ್ ಸಹೋದರನ ಪುತ್ರ ನಾಗರಾಜ್ ನಿಂಬಣ್ಣನವರ್ ಕಾರಿನ ಮೇಲೆ ಸಂಬಂಧಿಗಳು ಕಲ್ಲು ತೂರಿ ಹಲ್ಲೆಗೆ ಯತ್ನಿಸಿದ್ದಾರೆ. ನಾಗರಾಜ್ ಅವರು ಸಂಗೆದೇವರಕೊಪ್ಪ ಹೊಲದಿಂದ ಮನೆಗೆ ಹಿಂದಿರುಗಿ ಬರುವಾಗ ಕಾರಿಗೆ ಅಡ್ಡಗಟ್ಟಿ ಕಲ್ಲಿನಿಂದ ಕಾರಿನ ಗ್ಲಾಸ್ ಒಡೆದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.