ಕರ್ನಾಟಕ

karnataka

ETV Bharat / state

ಕಾಂಗ್ರೆಸ್​ ಟಿಕೆಟ್​ ಹಂಚಿಕೆಯಲ್ಲಿ ಮುಂದುವರೆದ ಗೊಂದಲ : ನಿಗೂಢತೆಗೆ ಕಾರಣ ಏನಿರಬಹುದು? - etv bharat

ಗಂಡು ಮೆಟ್ಟಿದ ನಾಡು ಉತ್ತರ ಕರ್ನಾಟಕದ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್​ ಹಂಚಿಕೆಯ ಗೊಂದಲ ಇನ್ನೂ ಮುಂದುವರೆದಿದೆ. ಟಿಕೆಟ್ ನೀಡುವಂತೆ ಜಿಲ್ಲಾ ಮುಖಂಡರು ಪಕ್ಷದ ವರಿಷ್ಠರ ದುಂಬಾಲು ಬಿದ್ದಿದ್ದಾರೆ. ಆದರೆ, ಹೈಕಮಾಂಡ್ ಯಾರಿಗೆ ಮಣೆ ಹಾಕಲಿದೆ ಎನ್ನುವುದೇ ಇನ್ನೂ ನಿಗೂಢ.

ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್​ ಹಂಚಿಕೆಯ ಗೊಂದಲ ಇನ್ನೂ ನಿಗೂಢ

By

Published : Apr 2, 2019, 12:37 PM IST

ಹುಬ್ಬಳ್ಳಿ:ಬಿಜೆಪಿ ಭದ್ರಕೋಟೆಯಾಗಿರುವ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಪಾಳೆಯದಲ್ಲಿ ಟಿಕೆಟ್​ಗಾಗಿ ಇದೀಗ​ ಭಾರಿ‌ ಲಾಬಿ ಶುರುವಾಗಿದೆ. ಹೇಗಾದರೂ ಮಾಡಿ ಟಿಕೆಟ್​ ಪಡೆಯಲೇಬೇಕು ಎಂದು ಜಿಲ್ಲೆಯ ಟಿಕೆಟ್​ ಆಕಾಂಕ್ಷಿಗಳು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುಂಬಾಲು ಬಿದ್ದಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ನಗರದ ಡೆನಿಸಸ್​ ಹೋಟೆಲ್​ನಲ್ಲಿ ನಿನ್ನೆ ರಾತ್ರಿ ವಾಸ್ತವ್ಯ ಹೂಡಿದ್ದ ಸಿದ್ದರಾಮಯ್ಯ ಅವರನ್ನು ಟಿಕೆಟ್​ ಆಕಾಂಕ್ಷಿಗಳಾದ ಶಾಕೀರ್ ಸನದಿ, ವಿನಯ್ ಕುಲಕರ್ಣಿ, ಸೀಮಾ ಸಾದಿಕ್ ಅವರು ಪರೇಡ್​ ನಡೆಸಿದರು.

ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್​ ಹಂಚಿಕೆಯ ಗೊಂದಲ ಇನ್ನೂ ನಿಗೂಢ

ಮಾಜಿ ಸಚಿವ ವಿನಯ ಕುಲಕರ್ಣಿ ಅವರು ರಾತ್ರಿಯೇ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ನನಗೆ ಟಿಕೆಟ್​ ನೀಡಬೇಕು ಎಂದು ‌ಒತ್ತಡ ಹಾಕಿದರು ಎನ್ನಲಾಗಿದೆ. ಇನ್ನು ಇವರ ಬೆನ್ನಲ್ಲೆ ಶಾಕೀರ್ ಸನಿದಿ ಹಾಗೂ ಸೀಮಾ ಸಾದೀಕ್ ಸಹ ಇಂದು ಬೆಳಗ್ಗೆ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ತಮಗೆ ಟಿಕೆಟ್ ನೀಡುವಂತೆ ಮನವಿ‌ ಮಾಡಿದರು.

ಈ‌ ಸಂಬಂಧ ಸಿದ್ದರಾಮಯ್ಯ, ಸಿಎಂ ಇಬ್ರಾಹಿಮ್ ಸೇರಿದಂತೆ ಸ್ಥಳೀಯ ನಾಯಕರ ಜೊತೆ ಚರ್ಚೆ ನಡೆಸಿದರು. ಆದರೆ, ಟಿಕೆಟ್​ ಯಾರಿಗೆ ನೀಡಬೇಕು ಎಂಬುದರ ಬಗ್ಗೆ ವಿಶ್ವಾಸ ಬರದ ಹಿನ್ನೆಲೆ ಕ್ಷೇತ್ರದಲ್ಲಿ ಹೈಕಮಾಂಡ್​ ಸೂಕ್ತವಾದ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ. ಎಲ್ಲರೂ ಒಗ್ಗಟ್ಟಾಗಿ‌‌‌ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡಿ ಎಂದು ಕಿವಿ‌ ಮಾತು ಹೇಳಿ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗುತ್ತಿದೆ.

ABOUT THE AUTHOR

...view details