ಕರ್ನಾಟಕ

karnataka

ETV Bharat / state

ಜೂನ್ 14 ರಿಂದ ಹಂತ ಹಂತವಾಗಿ ಅನ್​ಲಾಕ್​: ಶಾಸಕ ಅರವಿಂದ ಬೆಲ್ಲದ - ಜೂನ್ 14 ರಿಂದ ಹಂತ ಹಂತವಾಗಿ ಅನ್​ಲಾಕ್

ಅನ್​ಲಾಕ್​ ಮಾಡಿದ ಕೂಡಲೇ ಮತ್ತೆ ಕೊರೊನಾ ಹೆಚ್ಚಾಗುವ ಸಾಧ್ಯತೆಯಿದ್ದು, ಈ ಹಿನ್ನೆಲೆ ಆಯಾ ಜಿಲ್ಲೆಯ ಸ್ಥಳೀಯ ಆಡಳಿತದವರು ಕಟ್ಟುನಿಟ್ಟಿನ ನಿಯಮಗಳ‌ ಮೂಲಕ ಜನರನ್ನು ನಿಯಂತ್ರಣ ಮಾಡಬೇಕು. ಇದರ ಜೊತೆಗೆ ಜನರ ಸಹಕಾರವೂ ತುಂಬಾ ಮುಖ್ಯ. ಇಂತಹ ಸಂದಿಗ್ಧ ವೇಳೆಯಲ್ಲಿ ತಮ್ಮ ಜವಾಬ್ದಾರಿ ಅರಿತುಕೊಂಡು ನಡೆದುಕೊಳ್ಳಬೇಕು ಎಂದು ಶಾಸಕ ಅರವಿಂದ ಬೆಲ್ಲದ ತಿಳಿಸಿದ್ದಾರೆ.

MLA Arvind Bellad
ಶಾಸಕ ಅರವಿಂದ ಬೆಲ್ಲದ್

By

Published : Jun 9, 2021, 5:19 PM IST

ಹುಬ್ಬಳ್ಳಿ:ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಕಡಿಮೆ ಆಗುತ್ತಿದ್ದು, ಜೂನ್ 14 ರಿಂದ ಹಂತ ಹಂತವಾಗಿ ಅನ್​ಲಾಕ್​ ಮಾಡಲಾಗುವುದು. ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಶೇ 7 ರಷ್ಟಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಡಿಮೆಯಾಗಲಿದೆ. ಆದರೆ ಕೊರೊನಾ ಸಂಪೂರ್ಣವಾಗಿ ಹೋಗಿದೆ ಅಂತಲ್ಲಾ. ಇದನ್ನು ಜನರು ಅರ್ಥ ಮಾಡಿಕೊಂಡು ತಮ್ಮ ಆರೋಗ್ಯದ ಕಾಳಜಿ ಮಾಡಿಕೊಂಡು ದೇಶದ ರಕ್ಷಣೆ ಮಾಡಬೇಕು ಎಂದು ಶಾಸಕ ಅರವಿಂದ ಬೆಲ್ಲದ ತಿಳಿಸಿದ್ದಾರೆ.

ಶಾಸಕ ಅರವಿಂದ ಬೆಲ್ಲದ ಮಾತನಾಡಿದರು

ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಅನ್​ಲಾಕ್​ ಮಾಡಿದ ಕೂಡಲೇ ಮತ್ತೆ ಕೊರೊನಾ ಹೆಚ್ಚಾಗುವ ಸಾಧ್ಯತೆಯಿದ್ದು, ಈ ಹಿನ್ನೆಲೆ ಆಯಾ ಜಿಲ್ಲೆಯ ಸ್ಥಳೀಯ ಆಡಳಿತದವರು ಕಟ್ಟುನಿಟ್ಟಿನ ನಿಯಮಗಳ‌ ಮೂಲಕ ಜನರನ್ನು ನಿಯಂತ್ರಣ ಮಾಡಬೇಕು. ಇದರ ಜೊತೆಗೆ ಜನರ ಸಹಕಾರವೂ ತುಂಬಾ ಮುಖ್ಯ. ಇಂತಹ ಸಂದಿಗ್ಧ ವೇಳೆಯಲ್ಲಿ ತಮ್ಮ ಜವಾಬ್ದಾರಿ ಅರಿತುಕೊಂಡು ನಡೆದುಕೊಳ್ಳಬೇಕು ಎಂದರು.

ಓದಿ:ಕರುನಾಡ ಅನ್‌ಲಾಕ್​ಗೆ ಸಿದ್ಧತೆ : ಯಾವೆಲ್ಲ ವಲಯಗಳಿಗೆ ಸಿಗಲಿದೆ ವಿನಾಯಿತಿ?

ABOUT THE AUTHOR

...view details