ಹುಬ್ಬಳ್ಳಿ :ಎಪಿಎಂಸಿ ಸೆಸ್ ಗೊಂದಲವನ್ನು ರಾಜ್ಯ ಸರ್ಕಾರ ನಿವಾರಣೆ ಮಾಡುವಂತೆ ಒತ್ತಾಯಿಸಿ ಜುಲೈ 27ರಿಂದ ರಾಜ್ಯಾದ್ಯಂತ ಅನಿರ್ದಿಷ್ಟ ಅವಧಿಯವರೆಗೆ 162 ಎಪಿಎಂಸಿ ಬಂದ್ ಮಾಡಲಾಗುತ್ತದೆ ಎಂದು ಚೇಂಬರ್ ಆಫ್ ಕಾಮರ್ಸ್ ಗೌರವ ಕಾರ್ಯದರ್ಶಿ ಶಂಕರಣ್ಣ ಮುನವಳ್ಳಿ ಹೇಳಿದರು.
ಜುಲೈ27 ರಿಂದ ರಾಜ್ಯಾದ್ಯಂತ ಎಪಿಎಂಸಿ ಬಂದ್ಗೆ ನಿರ್ಧಾರ.. ಶಂಕರಣ್ಣ ಮುನವಳ್ಳಿ
ಎಪಿಎಂಸಿಯಲ್ಲಿ ಸಂಗ್ರಹಿಸುತ್ತಿರುವ ಶೇ.1% ಸೆಸ್ ಸಂಗ್ರಹ ಕೈ ಬಿಡುವಂತೆ ರಾಜ್ಯದ ವಿವಿಧ ಮೂಲೆಗಳಿಂದ ಬಂದಿರುವ ಎಪಿಎಂಸಿ ವರ್ತಕರು ಒಪ್ಪಿಗೆ ಸೂಚಿಸಿದ ಹಿನ್ನೆಲೆ ಬಂದ್ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ..
ನಗರದಲ್ಲಿಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಪದಾಧಿಕಾರಿಗಳ ಹಾಗೂ ವರ್ತಕರ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವೂ ಕೇಂದ್ರ ಸರ್ಕಾರ ನೀಡಿರುವ ಒಂದು ದೇಶ ಒಂದು ದರ ನಿರ್ದೇಶನವನ್ನು ಜಾರಿಗೊಳಿಸಿದರೆ ಯಾವುದೇ ಗೊಂದಲಗಳು ಸೃಷ್ಟಿಯಾಗುವುದಿಲ್ಲ. ಅಲ್ಲದೇ ಎಪಿಎಂಸಿಯಲ್ಲಿ ಸಂಗ್ರಹಿಸುತ್ತಿರುವ ಶೇ.1% ಸೆಸ್ ಸಂಗ್ರಹ ಕೈ ಬಿಡುವಂತೆ ರಾಜ್ಯದ ವಿವಿಧ ಮೂಲೆಗಳಿಂದ ಬಂದಿರುವ ಎಪಿಎಂಸಿ ವರ್ತಕರು ಒಪ್ಪಿಗೆ ಸೂಚಿಸಿದ ಹಿನ್ನೆಲೆ ಬಂದ್ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಈಗಾಗಲೇ ಗದಗ, ಹಾವೇರಿ, ರಾಣೇಬೆನ್ನೂರು, ವಿಜಯಪುರ ಸೇರಿ ರಾಜ್ಯದ ಎಲ್ಲಾ ಎಪಿಎಂಸಿ ವರ್ತಕರ ನೇತೃತ್ವದಲ್ಲಿ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗಿದೆ ಎಂದ ಅವರು, ರೈತರು ಹತ್ತಿ, ಶೇಂಗಾ ಹಾಗೂ ಒಣ ಪದಾರ್ಥ ಉತ್ಪನ್ನಗಳನ್ನು ಎಪಿಎಂಸಿಗೆ ತೆಗೆದುಕೊಂಡು ಬರಬಾರದು ಎಂದು ಮನವಿ ಮಾಡಿದರು.