ಹುಬ್ಬಳ್ಳಿ:ಸರ್ಕಾರ ಅಸ್ಥಿರಗೊಳ್ಳುವ ಪ್ರಶ್ನೆಯೇ ಇಲ್ಲ. ಯಾವುದೋ ಉದ್ವೇಗದಲ್ಲಿ ರಮೇಶ ಜಾರಕಿಹೊಳಿ ರಾಜೀನಾಮೆ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದರು.
ರಮೇಶ ಜಾರಕಿಹೊಳಿ ಮತ್ತೆ ಬಾಂಬೆ, ದೆಹಲಿ ಪ್ರವಾಸ ವಿವಾದಕ್ಕೆ ಪ್ರತಿಕ್ರಿಯಿಸಿ, ಅವೆಲ್ಲವೂ ಶೀಘ್ರದಲ್ಲೇ ಬಗೆಹರಿಯಲಿದೆ. ಹಿಂದೆಯೂ ನಾವು ಅವರ ಜೊತೆಗಿದ್ದೆವು, ಮುಂದೆಯೂ ಇರುತ್ತೇವೆ. ಸಿಡಿ ಪ್ರಕರಣದ ಬಗ್ಗೆ SIT ತನಿಖೆ ನಡೆಯುತ್ತಿದೆ. ಅಲ್ಲೇನು ತೀರ್ಮಾನ ಆಗುತ್ತೋ ನೋಡೋಣ ಎಂದರು.
ಹು-ಧಾ ಅವಳಿ ನಗರ ಸ್ಮಾರ್ಟ್ ಸಿಟಿ ಕಾಮಗಾರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಶೇ 25 ರಿಂದ ಶೇ 30ರಷ್ಟು ಕಾಮಗಾರಿ ಇನ್ನೂ ಹಾಗೆಯೇ ಬಾಕಿ ಉಳಿದಿದೆ. ಈಗಾಗಲೇ ಅಧಿಕಾರಿಗಳಿಗೆ 1 ತಿಂಗಳ ಗಡುವು ನೀಡಿದ್ದೇನೆ. ಎಲ್ಲೆಲ್ಲಿ ಕೆಲಸ ನಿಧಾನಗತಿಯಲ್ಲಿ ಸಾಗುತ್ತಿದೆಯೋ ಅಲ್ಲಿ ಹೆಚ್ಚು ಕಾರ್ಮಿಕರ ಬಳಕೆಗೆ ಸೂಚನೆ ನೀಡಲಾಗಿದೆ. ಪಾಲಿಕೆಯಿಂದ 240 ಕೋಟಿ ರೂ ಪ್ರಸ್ತಾವನೆಯನ್ನೂ ಸಹ ಈಗಾಗಲೇ ಕೊಟ್ಟಿದ್ದಾರೆ. ನಾನು ಇದನ್ನು ಸಿಎಂ ಜೊತೆ ಚರ್ಚೆ ಮಾಡಿ ಹಣ ಬಿಡುಗಡೆಗೆ ಪ್ರಯತ್ನ ಮಾಡುತ್ತೇನೆ. ಹು-ಧಾ ನಗರಗಳು ರಾಜ್ಯದ ಅತ್ಯುತ್ತಮ ನಗರಗಳಾಗಿ ಹೊರಹೊಮ್ಮಲಿವೆ ಎಂದು ಹೇಳಿದರು.
ಇದನ್ನೂ ಓದಿ: ನಾಯಕತ್ವ ಬದಲಾವಣೆ, ಸಂಪುಟ ವಿಸ್ತರಣೆ ಸಂಕಷ್ಟ: ಬಿಜೆಪಿಯಲ್ಲಿ ಮುಗಿಯದ ಗೊಂದಲ