ಕರ್ನಾಟಕ

karnataka

ETV Bharat / state

ಧಾರವಾಡ: ಕೆಇಎ ಪರೀಕ್ಷೆ ಅಕ್ರಮದ ಬಗ್ಗೆ ಸರ್ಕಾರಕ್ಕೆ ಮೊದಲೇ ದೂರು ನೀಡಿದ್ದ ಅಭ್ಯರ್ಥಿ ಹೇಳಿದ್ದೇನು?

ಕೆಇಎ ಪರೀಕ್ಷೆಯಲ್ಲಿ ಅಕ್ರಮ ನಡೆಯುತ್ತೆ ಎಂಬುದನ್ನು ಸರ್ಕಾರಕ್ಕೆ ಪತ್ರ ಬರೆದು ಸ್ಪರ್ಧಾತ್ಮಕ ಪರೀಕ್ಷೆ ಅಭ್ಯರ್ಥಿ ರವಿಶಂಕರ್ ದೂರು ನೀಡಿದ್ದರು.

By ETV Bharat Karnataka Team

Published : Oct 29, 2023, 3:26 PM IST

ಕೆಇಎ ಪರೀಕ್ಷೆ ಅಕ್ರಮ
ಕೆಇಎ ಪರೀಕ್ಷೆ ಅಕ್ರಮ

ಸರ್ಕಾರಕ್ಕೆ ದೂರು ನೀಡಿದ್ದ ಸ್ಪರ್ಧಾತ್ಮಕ ಪರೀಕ್ಷೆ ಅಭ್ಯರ್ಥಿ

ಧಾರವಾಡ : ರಾಜ್ಯದ ನಿಗಮ ಮಂಡಳಿಗಳಲ್ಲಿ ಖಾಲಿ ಇರುವ 750 ಹುದ್ದೆಗಳಿಗೆ ಕೆಇಎ ನಡೆಸಿದ ಪರೀಕ್ಷೆಯಲ್ಲಿ ಬ್ಲೂಟೂತ್ ಡಿವೈಸ್ ಮುಖಾಂತರ ಅಕ್ರಮ ಎಸಗಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಈ ಪ್ರಕರಣ ಸಂಬಂಧ ಸರ್ಕಾರಕ್ಕೆ ದೂರು ನೀಡಿದ್ದ ಸ್ಪರ್ಧಾತ್ಮಕ ಪರೀಕ್ಷೆ ಅಭ್ಯರ್ಥಿ ರವಿಶಂಕರ್ ಅವರು ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ.

ಎಫ್​ಡಿಎ, ಎಸ್​ಡಿಎ ಪರೀಕ್ಷೆಯಲ್ಲಿ ಅಕ್ರಮವಾಗುತ್ತದೆ ಎಂದು ಅಕ್ಟೋಬರ್ 13ರಂದು ಸಚಿವ ಪ್ರಿಯಾಂಕ್ ಖರ್ಗೆ ಅವರ ಮುಖಾಂತರ ಸರ್ಕಾರಕ್ಕೆ ಪತ್ರ ಬರೆದು ದೂರು ನೀಡಿದ್ದೆವು. ಈ ಹಿಂದೆ ಮಾಡಿದ ಪಿಎಸ್​ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಮಾಡಿದವರೇ ಈಗಲೂ ಆಕ್ರಮವೆಸಗುತ್ತಿದ್ದಾರೆ ಎಂದು ಪತ್ರದಲ್ಲಿ ವಿವರಿಸಿದ್ದೆವು. ಅಲ್ಲದೆ, ಬೆಳಗಾವಿಯಲ್ಲಿ ಒಎಂಆರ್ ತಿದ್ದುಪಡಿ ಮಾಡುವ ಟೀಂ ಇದೆ. ಆ ಟೀಂ ಬಗ್ಗೆಯೂ ಸರ್ಕಾರಕ್ಕೆ ದೂರು ಕೊಟ್ಟಿದ್ದೆವು ಎಂದು ರವಿಶಂಕರ್​ ಹೇಳಿದರು.

ಶನಿವಾರ ಸಚಿವ ಪ್ರಿಯಾಂಕ್ ಖರ್ಗೆ ಅವರ ಮಾರ್ಗದರ್ಶನದಲ್ಲಿ ರೇಡ್ ಆಗಿದೆ. ಪತ್ರದ ಮುಖಾಂತರ ಮಾಹಿತಿ ಪ್ರಕಾರ ಇನ್ನೂ ಆನೇಕ ಅಭ್ಯರ್ಥಿಗಳು ಅರೆಸ್ಟ್ ಆಗಬೇಕಿತ್ತು. ಆದರೇ, ಇನ್ನೂ ಬಂಧನ ಆಗಿಲ್ಲ. ಯಾದಗಿರಿಯಲ್ಲಿ 9 ಜನರು ಹಾಗೂ ಕಲಬುರಗಿಯಲ್ಲಿ 9 ಜನ ಅರೆಸ್ಟ್ ಆಗಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ 300ಕ್ಕು ಅಧಿಕ ಅಭ್ಯರ್ಥಿಗಳು ಭಾಗಿಯಾಗಿದ್ದಾರೆ. ಈ ಮರು ಪರೀಕ್ಷೆ ಮಾಡಬೇಕು ಎಂದು ಸರ್ಕಾರಕ್ಕೆ ರವಿಶಂಕರ್​ ಒತ್ತಾಯಿಸಿದ್ದಾರೆ.

ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು ಬಯಲಿಗೆ ಬಂದಿದೆ. ಪ್ರಶ್ನೆ ಪತ್ರಿಕೆ ಔಟ್ ಆಗಿದೆ. ಈ ಕುರಿತು ಸರ್ಕಾರಕ್ಕೆ ಮನವಿ ಮಾಡಿದರೂ ಸಹ ಅಭ್ಯರ್ಥಿಗಳ ಜೀವನ ಏನು? ಮಧ್ಯವರ್ತಿಗಳಿಗೆ ದುಡ್ಡು ಕೊಟ್ಟು ನಾವು ಅಪ್ಲಿಕೇಶನ್ ಹಾಕಬೇಕು ಎನ್ನುವ ಸ್ಥಿತಿ ಆಗಿದೆ. ಇನ್ನು ಮುಂದೆ ಕೆಪಿಎಸ್​ಸಿಗೆ ಅರ್ಜಿ ಹಾಕುವುದಿಲ್ಲ. ಇನ್ನಾದರೂ ಸರ್ಕಾರ ಇಂತಹ ಆಕ್ರಮಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ರವಿಶಂಕರ್​​ ಆಗ್ರಹಿಸಿದರು.

ಪ್ರಕರಣ ಹಿನ್ನೆಲೆ :ಶನಿವಾರ ನಡೆದ ಪರೀಕ್ಷೆಯಲ್ಲಿ ಕಲಬುರಗಿ ನಗರದ ಶ್ರೀಶರಣಬಸವೇಶ್ವರ ವಿವಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದ ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ಅಭ್ಯರ್ಥಿ ತ್ರಿಮೂರ್ತಿ ಎಂಬಾತನನ್ನು ಪೊಲೀಸರು ರೆಡ್ ಹ್ಯಾಂಡ್​ ಆಗಿ ಹಿಡಿದಿದ್ದರು. ಕನ್ನಡ ಇಂಗ್ಲಿಷ್ ಕಮ್ಯುನಿಕೇಷನ್ ಪರೀಕ್ಷೆ ನಡೆಯುವ ವೇಳೆ ಈತ ಬ್ಲೂಟೂತ್ ಸಹಾಯದಿಂದ ಹೊರಗಿನವರಿಂದ ಕೀ ಉತ್ತರ ಪಡೆದು ಅಕ್ರಮ ಎಸಗುತ್ತಿದ್ದ. ಬಂಧನದ ಬಳಿಕ ಆರೋಪಿ ತ್ರಿಮೂರ್ತಿಯನ್ನು ಇಎನ್​ಟಿ ವೈದ್ಯರ ಬಳಿ ಕರೆದೊಯ್ದು ತಪಾಸಣೆ ಕೂಡಾ ನಡೆಸಲಾಗಿತ್ತು. ಇನ್ನೋರ್ವ ಅಭ್ಯರ್ಥಿ ಅಭಿಷೇಕ್​ ಎಂಬಾತನನ್ನು ಕೂಡಾ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ :ಕೆಇಎ ಪರೀಕ್ಷೆ ಅಕ್ರಮದಲ್ಲಿ ಮತ್ತೆ ಮುನ್ನೆಲೆಗೆ ಬಂದ ಆರ್ ಡಿ‌ ಪಾಟೀಲ್ ಹೆಸರು

ABOUT THE AUTHOR

...view details