ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ-ಡಿಕೆಶಿಗೆ ರಾಹುಲ್ ಗಾಂಧಿ ಕೊಟ್ಟ ಬೂಸ್ಟರ್ ಡೋಸ್ ಫೇಲ್ ಆಗಿದೆ: ಶ್ರೀರಾಮುಲು - ಈಟಿವಿ ಭಾರತ ಕನ್ನಡ

ರಾಹುಲ್ ಗಾಂಧಿ, ಸಿದ್ಧರಾಮಯ್ಯ ಹಾಗೂ ಡಿಕೆಶಿ ಅವರನ್ನ ಜೋಡಿಸುವ ವಿಚಾರದಲ್ಲಿ ಕೊಟ್ಟಂತಹ ಬೂಸ್ಟರ್​ ಡೋಸ್​ ಫೇಲ್​​ ಆಗಿದೆ ಎಂದು ಸಚಿವ ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.

KN_DWD
ಶ್ರೀರಾಮುಲು

By

Published : Oct 29, 2022, 8:58 PM IST

ಧಾರವಾಡ: ಕರ್ನಾಟಕಕ್ಕೆ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಕೊಟ್ಟಂತಹ ಬೂಸ್ಟರ್ ಡೋಸ್ ಫೇಲ್ ಆಗಿದೆ ಎಂದು ಸಚಿವ ಶ್ರೀರಾಮುಲು ವ್ಯಂಗ್ಯವಾಡಿದರು.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ, ಸಿದ್ಧರಾಮಯ್ಯ ಹಾಗೂ ಡಿಕೆಶಿ ಅವರನ್ನು ಜೋಡಿಸುವ ವಿಚಾರದಲ್ಲಿ ಕೊಟ್ಟಂತಹ ಬೂಸ್ಟರ್​ ಡೋಸ್​ ಫೇಲ್​​ ಆಗಿದೆ. ಈಗ ಅವರಲ್ಲಿ ಕದನಗಳು ಆರಂಭವಾಗಿವೆ. ಹಾಗಾಗಿ ಅದಕ್ಕೆ ಸಂಧಾನ ಮಾಡಲು ಹಲವು ನಾಯಕರು ಬರುತ್ತಿದ್ದಾರೆ ಎಂದು ಟೀಕಿಸಿದರು.

ಬಳಿಕ ಮೀಸಲಾತಿ ವಿಚಾರವಾಗಿ ಮಾತನಾಡಿ, ನಮ್ಮ ಸರ್ಕಾರ ಎಸ್ಸಿ ಎಸ್ಟಿ ಸಮುದಾಯಕ್ಕೆ ಮೀಸಲಾತಿ ಕೊಟ್ಟ ವಿಚಾರದಲ್ಲಿ ಕಾಂಗ್ರೆಸ್​ನವರಿಗೆ ಇದ್ದದ್ದು ಗೊಂದಲ ಮತ್ತು ಸ್ವಾರ್ಥ ರಾಜಕಾರಣ. ಸಿಎಂ ಕುರ್ಚಿವಾಗಿ ಡಿಕೆಶಿ ಹಾಗೂ ಸಿದ್ಧರಾಮಯ್ಯ ನೋಡುತ್ತಿದ್ದಾರೆ. ನಮ್ಮ ಸರ್ಕಾರ ಮೀಸಲಾತಿ ಕೊಡುವ ಕೆಲಸ ಮಾಡಿದೆ‌. ಈ ಕುರಿತು ನವೆಂಬರ್ 20ಕ್ಕೆ ಬೃಹತ್ ಸಮಾವೇಶ ಮಾಡುವ ಉದ್ದೇಶದಿಂದ ಆಹ್ವಾನ ಕೊಡಲು ನಾನು ಬಂದಿದ್ದೇನೆ. ನಾಲ್ಕು ದಶಕದ ನಮ್ಮ ಬೇಡಿಕೆಯನ್ನು ಪ್ರಧಾನಿ ಹಾಗೂ ಸಿಎಂ ಈಡೇರಿಸಿದ್ದಾರೆ. ಅವರಿಗೆ ಕೃತಜ್ಞತೆ ಹೇಳಬೇಕು ಎಂದರು.

ಎಸ್ಸಿ ಎಸ್ಟಿ ಮೀಸಲಾತಿ ಬಗ್ಗೆ ಶ್ರೀರಾಮುಲು ಪ್ರತಿಕ್ರಿಯೆ

ಇನ್ನು, ಮಾಜಿ ಸಚಿವರಾದ ರಮೇಶ್​ ಜಾರಕಿಹೊಳಿ, ಶಿವನಗೌಡ ನಾಯಕ್​ ಸೇರಿ ಹಲವಾರು ನಾಯಕರು ಈ ತಂಡದಲ್ಲಿ ಇದ್ದಾರೆ. ಮುಂದೆ ಬೇರೆ ಬೇರೆ ಕಡೆ ಅವರೆಲ್ಲ ನಮ್ಮ ಜೊತೆ ಸೇರ್ತಾರೆ ಎಂದರು. ಸಚಿವ ಸಂಪುಟ ವಿಸ್ತರಣೆಯಲ್ಲಿ ರಮೇಶ್​ ಜಾರಕಿಹೊಳಿಗೆ ಮತ್ತೆ ಸ್ಥಾನ ಕುರಿತು ಪ್ರತಿಕ್ರಿಯಿಸಿ, ನಮ್ಮ ಸಮುದಾಯಕ್ಕೆ ಪಕ್ಷ ಆದ್ಯತೆ ಕೊಡುತ್ತ ಬಂದಿದೆ. ಯಾರೇ ಮಂತ್ರಿ ಆಗಬೇಕು ಅಂದರೆ ಪಕ್ಷ ತೀರ್ಮಾನ ತಗೊಬೇಕು.‌ ಪಕ್ಷ ಏನು ತಿರ್ಮಾನ ತೆಗೆದುಕೊಳ್ಳುತ್ತೆ ಅನ್ನೋದನ್ನು ಕಾದು ನೋಡಬೇಕಿದೆ ಎಂದು ಹೇಳಿದರು.

ಇನ್ನು, ಕಾಂಗ್ರೆಸ್​ನವರು ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣು ಇಟ್ಟು ಯಾತ್ರೆ ಮಾಡುತ್ತಿದ್ದಾರೆ. ಆ ಸಿಎಂ ಕುರ್ಚಿ ಖಾಲಿ ಇಲ್ಲಾ, ಈಗ ಸಿಎಂ ಬೊಮ್ಮಾಯಿ ಇದ್ದಾರೆ. ಮುಂದೆ ಕೂಡಾ ಅವರೇ ಸಿಎಂ ಇರ್ತಾರೆ. ಜನರು ಜಾಗೃತರಾಗಿದ್ದಾರೆ, ಮುಂದೆಯೂ ಬಿಜೆಪಿ ಅಧಿಕಾರಕ್ಕೆ ಬರುತ್ತೆ, ಕಾಂಗ್ರೆಸ್ ನೆಲಸಮ ಆಗಲಿದೆ ಎಂದು ಸಚಿವ ಶ್ರೀರಾಮುಲು ಭವಿಷ್ಯ ನುಡಿದರು.

ಇದನ್ನೂ ಓದಿ:ನಾಳೆ ಕಲಬುರಗಿಯಲ್ಲಿ ಬಿಜೆಪಿ ಒಬಿಸಿ ಸಮಾವೇಶ: ಮಧ್ಯಪ್ರದೇಶ, ಕರ್ನಾಟಕ ಸಿಎಂ ಸೇರಿ ಅನೇಕ ನಾಯಕರು ಭಾಗಿ

ABOUT THE AUTHOR

...view details