ಧಾರವಾಡ :ಇಂದು ಪ್ರೇಮಿಗಳ ದಿನಾಚರಣೆ ವಿರೋಧಿಸಿ ಶ್ರೀರಾಮಸೇನಾ ಕಾರ್ಯಕರ್ತರು ನಗರದ ದುರ್ಗಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಹಿರಿಯರ ಪಾದಪೂಜೆ ಮಾಡಿದರು.
ದುರ್ಗಾಗುಡಿ ದೇವಿಯ ದೇವಸ್ಥಾನದಲ್ಲಿ ಜಮಾಯಿಸಿದ ಶ್ರೀರಾಮಸೇನಾ ಕಾರ್ಯಕರ್ತರು, ಪ್ರೇಮಿಗಳ ದಿನಕ್ಕೆ ವಿರೋಧ ವ್ಯಕ್ತಪಡಿಸಿ, ಘೋಷಣೆ ಕೂಗಿದರು.
ತಾಯಿಯಂದಿರ ಪಾದಪೂಜೆ ಮಾಡಿದ ಶ್ರೀರಾಮಸೇನಾ ಕಾರ್ಯಕರ್ತರು.. ಪ್ರೇಮಿಗಳ ದಿನಾಚರಣೆ ಬದಲಾಗಿ ಮಾತಾ-ಪಿತೃ ದಿನಾಚರಣೆ ಮಾಡಬೇಕು. ಇದು ನಮ್ಮ ಸಂಸ್ಕೃತಿ ಅಲ್ಲ, ಪ್ರೀತಿ-ಪ್ರೇಮಕ್ಕೆ ಯಾವುದೇ ವಿರೋಧವಿಲ್ಲ. ಆದ್ರೆ, ಅದು ಒಂದು ದಿನಕ್ಕೆ ಸೀಮಿತವಾಗಿರಬಾರದು ಎಂದು ಅವರು ಹೇಳಿದರು.
ಓದಿ:ಜಮೀರ್ ಹೇಳಿಕೆ ಒಪ್ಪುವುದಿಲ್ಲ, ಅವರು ಕ್ಷಮೆ ಕೋರಬೇಕು: ಡಿಕೆಶಿ