ಹುಬ್ಬಳ್ಳಿ:ಕೊರೊನಾ 3ನೇ ಅಲೆ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಪ್ರಸಿದ್ಧ ಸಿದ್ಧಾರೂಢ ಸ್ವಾಮಿಗಳ 92 ಪುಣ್ಯಾರಾಧನೆಯ ತೆಪ್ಪೋತ್ಸವ ರದ್ದು ಮಾಡಲಾಗಿದೆ. ಆಗಸ್ಟ್ 23ರಂದು ತೆಪ್ಪೋತ್ಸವ ನಡೆಯಬೇಕಿತ್ತು.
ಕೊರೊನಾ 3ನೇ ಅಲೆ ಭೀತಿ: ಸಿದ್ಧಾರೂಢ ಸ್ವಾಮಿಯ 92 ಪುಣ್ಯಾರಾಧನೆ ತೆಪ್ಪೋತ್ಸವ ರದ್ದು - ಶ್ರೀ ಸಿದ್ಧಾರೂಢ ಸ್ವಾಮಿ 92 ಪುಣ್ಯಾರಾಧನೆಯ ತೆಪೋತ್ಸವ ರದ್ದು
ಕೊರೊನಾ 3ನೇ ಅಲೆ ಭೀತಿಯ ನಡುವೆ ಹಲವು ದೇವಾಲಯಗಳಿಗೆ ಭಕ್ತರ ಪ್ರವೇಶ ನಿಷೇಧಗೊಂಡಿದೆ. ಇದೀಗ ಹುಬ್ಬಳ್ಳಿಯ ಪ್ರಸಿದ್ಧ ಸಿದ್ಧಾರೂಢ ಸ್ವಾಮಿಗಳ 92 ಪುಣ್ಯಾರಾಧನೆಯ ತೆಪ್ಪೋತ್ಸವ ರದ್ದಾಗಿದೆ.
ಶ್ರೀ ಸಿದ್ಧಾರೂಢ ಸ್ವಾಮಿ 92 ಪುಣ್ಯಾರಾಧನೆಯ ತೆಪೋತ್ಸವ ರದ್ದು
ಭಕ್ತರ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕೊರೊನಾದಿಂದಾಗಿ ಕಳೆದ ವರ್ಷವೂ ಸಹ ತೆಪ್ಪೋತ್ಸವ ರದ್ದಾಗಿದ್ದು, ಈ ವರ್ಷವೂ ವಿಶೇಷ ಪೂಜೆ ರದ್ದಾಗಿದೆ.
ಇದನ್ನೂ ಓದಿ:ಜನರಿಂದ ತಿರಸ್ಕೃತಗೊಂಡ ಸರ್ಕಾರದಿಂದ ಸದನಕ್ಕೆ ಅಡ್ಡಿ: ಭಗವಂತ ಖೂಬಾ