ಹುಬ್ಬಳ್ಳಿ:ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುತ್ತಿರೋದು ಸ್ವಾಗತಾರ್ಹ. ಈ ಕಾಯ್ದೆ ಯಶಸ್ಸಿಗಾಗಿ ಶ್ರೀರಾಮ ಸೇನೆಯಿಂದ ಟಾಸ್ಕ್ ಪೋರ್ಸ್ ತಂಡ ರಚನೆ ಮಾಡಲಾಗುವುದು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಸೂದೆ ಯಶಸ್ಸಿಗೆ ಹತ್ತು ಜನರು ಈ ತಂಡದಲ್ಲಿರುತ್ತಾರೆ. ಗೋಹತ್ಯೆ ನಿಷೇದ ಕಾಯ್ದೆ ಬಂದರೂ ಹಸುಗಳ ಹತ್ಯೆ ನಡೆಯುತ್ತಿದೆ. ಅದರಂತೆ ಮತಾಂತರ ಕಾಯ್ದೆ ಕೂಡ ಪೇಪರ್ನಲ್ಲಿ ಉಳಿಯಬಾರದೆಂಬ ಕಾರಣಕ್ಕೆ ಟಾಸ್ಕ್ ಪೋರ್ಸ್ ತಂಡ ರಚನೆ ಮಾಡಲಾಗುತ್ತದೆ.