ಕರ್ನಾಟಕ

karnataka

By

Published : Jun 17, 2020, 5:26 PM IST

ETV Bharat / state

ಗಡಿಯಲ್ಲಿ ಚೀನಾ ಉದ್ಧಟತನ ತೋರಿದ್ರೆ ಸೇನೆ ಸುಮ್ಮನೆ ಬಿಡುವುದಿಲ್ಲ: ಮುತಾಲಿಕ್​ ಎಚ್ಚರಿಕೆ

ಲಡಾಕ್​ನಲ್ಲಿ ಚೀನಾ ಕ್ಯಾತೆ ತೆಗೆದಿದ್ದು ಭಾರತೀಯ ಸೇನೆಯು ಸೈನಿಕರನ್ನು ಕಳೆದುಕೊಂಡಿದೆ. ವೀರ ಮರಣವನ್ನಪ್ಪಿದ ಸೈನಿಕರಿಗೆ ಶ್ರೀರಾಮಸೇನಾ ಕಾರ್ಯಕರ್ತರು ಧಾರವಾಡದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು.

Dharwad
ಮುತಾಲಿಕ್​

ಧಾರವಾಡ: ಲಡಾಕ್​ನಲ್ಲಿ ನಡೆದ ಘರ್ಷಣೆಯಲ್ಲಿ ವೀರ ಮರಣ ಹೊಂದಿದ ಭಾರತಿಯ ಸೈನಿಕರಿಗೆ‌ ಶ್ರೀರಾಮಸೇನಾ ಕಾರ್ಯಕರ್ತರು ಶ್ರದ್ಧಾಂಜಲಿ ಸಲ್ಲಿಸಿದರು.

ಚೀನಾ ನಡೆ ಖಂಡಿಸಿ ಪ್ರತಿಭಟನೆ ಶ್ರೀರಾಮಸೇನೆ ಪ್ರತಿಭಟನೆ

ಧಾರವಾಡದ ಜಿಲ್ಲಾಧಿಕಾರಿ ಕಚೇರಿ‌ ಬಳಿ ಇರುವ ಕಾರ್ಗಿಲ್ ಸ್ಥೂಪಕ್ಕೆ ಆಗಮಿಸಿದ ಶ್ರೀರಾಮಸೇನಾ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಹಲವು ಸಂಘಟನೆಗಳ ಸಹಯೋಗದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಳಿಕ ಕಾರ್ಗಿಲ್ ಸ್ಥೂಪದ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಿ, ಚೀನಾ ಅಧ್ಯಕ್ಷರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು. ಶ್ರೀರಾಮಸೇನೆ, ಕರ್ನಾಟಕ ರಕ್ಷಣಾ ವೇದಿಕೆ, ಭಜರಂಗ ದಳ ಕಾರ್ಯಕರ್ತರು ಚೀನಾ ವಿರುದ್ಧ ಗುಡುಗಿದರು.

ಬಳಿಕ ಶ್ರೀರಾಮಸೇನಾ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸುದ್ದಿಗಾರರೊಂದಿಗೆ ಮಾತನಾಡಿ, ಚೀನಾದ ಉದ್ಧಟತನದಿಂದ ನಮ್ಮ 20 ಯೋಧರು ಹುತಾತ್ಮರಾಗಿದ್ದಾರೆ. 20ಕ್ಕೆ ಡಬಲ್ 43 ಜನರನ್ನು ಹೊಡೆದು ಚೀನಾಗೆ ನಮ್ಮ ಯೋಧರು ಉತ್ತರ ಕೊಟ್ಟಿದ್ದಾರೆ.‌ ಇದು ಕಾಂಗ್ರೆಸ್, ನೆಹರು, ರಾಹುಲ್ ಸರ್ಕಾರ ಅಲ್ಲ. ನರೇಂದ್ರ ಮೋದಿಯ 56 ಇಂಚಿನ ಛಾತಿ ಇರುವ ಸರ್ಕಾರ ಇದೆ ಎಂದು ಚೀನಾ ವಿರುದ್ಧ ಹರಿಹಾಯ್ದರು.

ಚೀನಾ ಏನಾದರೂ ಉದ್ಧಟತನ ತೋರಿಸಿದ್ರೆ ಬಿಡುವುದಿಲ್ಲ. ಗಡಿ ದಾಟಿ ಬರುವ ಪ್ರಯತ್ನ ಮಾಡಿದರೆ ತಕ್ಕ ಉತ್ತರ ಕೊಡುತ್ತಾರೆ ಎಂದರು.

ABOUT THE AUTHOR

...view details