ಧಾರವಾಡ: ಲೋಕಸಭಾ ಚುನಾವಣೆ ಸ್ಪರ್ಧೆಯಿಂದ ಸಮಾಜ ಪರಿವರ್ತನ ಸಮಾಜದ ಮುಖ್ಯಸ್ಥ ಎಸ್.ಆರ್. ಹಿರೇಮಠ ಹಿಂದೆ ಸರಿದಿದ್ದಾರೆ. ನಾನು ಈ ಹಿಂದೆ 2019ರ ಲೊಸಕಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದ್ದೆ. ಆದರೆ ಈಗ ಆ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಲೋಕಸಭಾ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದ ಎಸ್.ಆರ್.ಹಿರೇಮಠ - ಎಸ್ ಆರ್ ಹಿರೇಮಠ
ಲೋಕಸಭಾ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದ ಸಮಾಜ ಪರಿವರ್ತನ ಸಮಾಜದ ಮುಖ್ಯಸ್ಥ ಎಸ್.ಆರ್. ಹಿರೇಮಠ. ಕಳೆದ ವಿಧಾನಸಭೆ ಚುನಾವಣೆಯಲ್ಲಿಯೇ ನಮಗೆ ಸ್ಪರ್ಧೆ ಸರಿಯಲ್ಲ ಅಂತಾ ಅನಿಸಿದೆ. ಜನಾಂದೋಲನ ಮಹಾಮೈತ್ರಿಯಿಂದ ವಿಧಾನಸಭೆಗೆ ಅಭ್ಯರ್ಥಿಗಳನ್ನು ಹಾಕಿದಾಗ ಸೋತಿದ್ದೇವೆ ಎಂದ ಹಿರೇಮಠ.
ಸಮಾಜ ಪರಿವರ್ತನ ಸಮಾಜದ ಮುಖ್ಯಸ್ಥ ಎಸ್ ಆರ್ ಹಿರೇಮಠ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿಯೇ ನಮಗೆ ಸ್ಪರ್ಧೆ ಸರಿಯಲ್ಲ ಅಂತಾ ಅನಿಸಿದೆ. ಜನಾಂದೋಲನ ಮಹಾಮೈತ್ರಿಯಿಂದ ವಿಧಾನಸಭೆಗೆ ಅಭ್ಯರ್ಥಿಗಳನ್ನು ಹಾಕಿದಾಗ ಸೋತಿದ್ದೇವೆ. ರಾಜಕಾರಣಿಗಳು ಜನರನ್ನು ತುಂಬಾ ಭ್ರಷ್ಟ ಮಾಡಿದ್ದಾರೆ ಎಂದು ದೂರಿದರು.
ಭ್ರಷ್ಟತೆ ಜನರೊಳಗೆ ಆಳವಾಗಿ ಬೇರೂರಿದೆ. ಇಂತಹ ಸಮಯದಲ್ಲಿ ನಾವು ಚುನಾವಣೆಗೆ ನಿಂತು ಅವರ ಮಾನಸಿಕತೆ ಬದಲಿಸುವುದಕ್ಕೆ ಆಗುವುದಿಲ್ಲ. ಹೀಗಾಗಿ ಚುನಾವಣೆಗೆ ಸ್ಪರ್ಧೆ ಮಾಡುವುದು ಸೂಕ್ತವಲ್ಲ ಅಂತಾ ನಿರ್ಧಾರ ಮಾಡಿರುವೆ ಎಂದು ಹೇಳಿದರು.