ಕರ್ನಾಟಕ

karnataka

ETV Bharat / state

ಧಾರವಾಡದಲ್ಲಿ ತಯಾರಾಗಲಿದೆ ಸ್ಪುಟ್ನಿಕ್ ವ್ಯಾಕ್ಸಿನ್: ವಿದ್ಯಾಕಾಶಿಗೆ ಮತ್ತೊಂದು ಗರಿ - Sputnik vaccine prepare in Dharwad

ಸ್ಪುಟ್ನಿಕ್ ವ್ಯಾಕ್ಸಿನ್ ತಯಾರಿಕೆಗೆ ಶಿಲ್ಪಾ ಮೆಡಿಕೇರ್ ಒಪ್ಪಂದ ಮಾಡಿಕೊಂಡಿದೆ. ಈ ಕಂಪನಿಯಲ್ಲಿ ಒಟ್ಟು ಐನೂರು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂರು ಶಿಫ್ಟ್‌ನಲ್ಲಿ ಸಮರೋಪಾದಿಯಲ್ಲಿ ವ್ಯಾಕ್ಸಿನ್ ತಯಾರಿ ಕಾರ್ಯ ನಡೆಯುತ್ತಿದೆ.

 Sputnik vaccine prepare in Dharwad
Sputnik vaccine prepare in Dharwad

By

Published : May 18, 2021, 9:48 PM IST

ಧಾರವಾಡ: ರಷ್ಯಾ ಮೂಲದ ಸ್ಪುಟ್ನಿಕ್ ವ್ಯಾಕ್ಸಿನ್ ಧಾರವಾಡದಲ್ಲಿ ತಯಾರಾಗಲಿದ್ದು, ವಿದ್ಯಾಕಾಶಿ ಧಾರವಾಡಕ್ಕೆ ಮತ್ತೊಂದು ಗರಿ ಬಂದಂತಾಗಿದೆ.

ಧಾರವಾಡದ ಬೇಲೂರ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಶಿಲ್ಪಾ ಬಯೋಲಾಜಿಕಲ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಲಸಿಕೆ ತಯಾರಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಧಾರವಾಡದಲ್ಲಿ ತಯಾರಿ ಆಗಲಿರುವ ವ್ಯಾಕ್ಸಿನ್ ಗೆ ಬೇಡಿಕೆ ಹೆಚ್ಚಾಗಲಿದೆ.

ಸ್ಪುಟ್ನಿಕ್ ವ್ಯಾಕ್ಸಿನ್ ತಯಾರಿಕೆಗೆ ಶಿಲ್ಪಾ ಮೆಡಿಕೇರ್ ಒಪ್ಪಂದ ಮಾಡಿಕೊಂಡಿದೆ. ಈ ಕಂಪನಿಯಲ್ಲಿ ಒಟ್ಟು ಐನೂರು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂರು ಶಿಫ್ಟ್‌ನಲ್ಲಿ ಸಮರೋಪಾದಿಯಲ್ಲಿ ವ್ಯಾಕ್ಸಿನ್ ತಯಾರಿ ಕಾರ್ಯ ನಡೆಯುತ್ತಿದೆ.

ಇದರಿಂದ ಇನ್ನು ಮುಂದೆ ರಾಜ್ಯದಲ್ಲಿ ಕೊವೀಡ್ ಲಸಿಕೆ ಉತ್ಪಾದನೆ ಹೆಚ್ಚಿನ ಪ್ರಮಾಣದಲ್ಲಿ ನಡೆಯಲಿದೆ. ಹೈದರಾಬಾದ್​ನ ಡಾ. ರೆಡ್ಡಿ ಸ್ ಲ್ಯಾಬೋರೇಟರಿಸ್ ಜೊತೆ ಮಾತುಕತೆ ನಡೆಸಿ ಈ ಲಸಿಕೆ ನಿರ್ಮಾಣ ಕಾರ್ಯ ಮಾಡುತ್ತಿದೆ.‌ ಡಾ. ರೆಡ್ಡೀಸ್ ಲ್ಯಾಬ್ ಲಸಿಕೆ ಭಾರತೀಯ ಮಾರುಕಟ್ಟೆ ಭಾಗೀದಾರ ಕಂಪನಿಯಾಗಿದೆ.

ABOUT THE AUTHOR

...view details