ಹುಬ್ಬಳ್ಳಿ:ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ 26ನೇ ರಾಷ್ಟ್ರೀಯ ಯುವಜನೋತ್ಸವ ಪ್ರಯುಕ್ತ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ-ಧಾರವಾಡ ನಿಲ್ದಾಣಗಳ ನಡುವೆ ಸೀಟುಗಳನ್ನು ಕಾಯ್ದಿರಿಸದ ವಿಶೇಷ ರೈಲುಗಳನ್ನು ಓಡಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ. ಇದರಿಂದ ನಗರದಲ್ಲಿ ಖಾಸಗಿ ವಾಹನಗಳ ಸಂಚಾರದ ದಟ್ಟಣೆ ಇರದೇ, ಯುವಜನೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವ ಯುವಕರು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲಕರ ದರದಲ್ಲಿ ಪ್ರಯಾಣದ ಸೌಲಭ್ಯ ದೊರೆಯುವುದು ಎಂದು ಇಲಾಖೆ ತಿಳಿಸಿದೆ.
ರೈಲ್ವೆ ಸೇವೆಗಳ ವಿವರ:
- ರೈಲು ಸಂಖ್ಯೆ 07369/07370 ಧಾರವಾಡ – ಎಸ್.ಎಸ್.ಎಸ್ ಹುಬ್ಬಳ್ಳಿ – ಧಾರವಾಡ. (ಒಂದು ಟ್ರಿಪ್) ಜನವರಿ 11 ರಂದು ಧಾರವಾಡ - ಎಸ್.ಎಸ್.ಎಸ್ ಹುಬ್ಬಳ್ಳಿ (07369 ) ವಿಶೇಷ ರೈಲು ಮಧ್ಯಾಹ್ನ 12:30 ಕ್ಕೆ ಧಾರವಾಡದಿಂದ ಹೊರಟು ಅದೇ ದಿನ ಮಧ್ಯಾಹ್ನ 01:05 ಗಂಟೆಗೆ ಎಸ್.ಎಸ್.ಎಸ್ ಹುಬ್ಬಳ್ಳಿ ತಲುಪಲಿದೆ. ಅದೇ ರೀತಿ ಮರಳಿ ಎಸ್.ಎಸ್.ಎಸ್ ಹುಬ್ಬಳ್ಳಿ - ಧಾರವಾಡ (07370) ವಿಶೇಷ ರೈಲು ಹುಬ್ಬಳ್ಳಿಯಿಂದ ಸಂಜೆ 4 ಗಂಟೆಗೆ ಹೊರಟು ಸಂಜೆ 04:28 ಗಂಟೆಗೆ ಧಾರವಾಡ ತಲುಪಲಿದೆ.
- ರೈಲು ಸಂಖ್ಯೆ 07371/07372 ಧಾರವಾಡ – ಎಸ್.ಎಸ್.ಎಸ್ ಹುಬ್ಬಳ್ಳಿ – ಧಾರವಾಡ (ಒಂದು ಟ್ರಿಪ್) ಜನವರಿ 12 ರಂದು ಧಾರವಾಡ - ಎಸ್ಎಸ್ಎಸ್ ಹುಬ್ಬಳ್ಳಿ (07371) ವಿಶೇಷ ರೈಲು ಮಧ್ಯಾಹ್ನ 12 ಗಂಟೆಗೆ ಧಾರವಾಡದಿಂದ ಹೊರಟು 12:30 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿ ತಲುಪಲಿದೆ. ಅದೇ ರೀತಿ ಮರಳಿ, ರೈಲು ಸಂಖ್ಯೆ 07372 ಎಸ್ಎಸ್ಎಸ್ ಹುಬ್ಬಳ್ಳಿ-ಧಾರವಾಡ ವಿಶೇಷ ರೈಲು ಸಂಜೆ 6 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊರಟು ಸಂಜೆ 06:30 ಕ್ಕೆ ಧಾರವಾಡ ತಲುಪಲಿದೆ.
- ರೈಲು ಸಂಖ್ಯೆ 07373/07374 ಧಾರವಾಡ – ಎಸ್ಎಸ್ಎಸ್ ಹುಬ್ಬಳ್ಳಿ – ಧಾರವಾಡ (ಒಂದು ಟ್ರಿಪ್) ಜನವರಿ 12 ರಂದು ಧಾರವಾಡ - ಎಸ್.ಎಸ್.ಎಸ್ ಹುಬ್ಬಳ್ಳಿ (07373) ವಿಶೇಷ ರೈಲು ಮಧ್ಯಾಹ್ನ 12:30 ಗಂಟೆಗೆ ಧಾರವಾಡದಿಂದ ಹೊರಟು ಅದೇ ದಿನ ಮಧ್ಯಾಹ್ನ 1 ಗಂಟೆಗೆ ಎಸ್.ಎಸ್.ಎಸ್ ಹುಬ್ಬಳ್ಳಿ ತಲುಪಲಿದೆ. ಅದೇ ರೀತಿ ಹಿಂದಿರುಗುವಾಗ ಎಸ್.ಎಸ್.ಎಸ್ ಹುಬ್ಬಳ್ಳಿ - ಧಾರವಾಡ (07374) ವಿಶೇಷ ರೈಲು ಹುಬ್ಬಳ್ಳಿಯಿಂದ ಸಾಯಂಕಾಲ 06:30 ಗಂಟೆಗೆ ಹೊರಟು ಅದೇ ದಿನ ಸಂಜೆ 7 ಗಂಟೆಗೆ ಧಾರವಾಡ ತಲುಪಲಿದೆ.
- ರೈಲು ಸಂಖ್ಯೆ 07375/07376 ಧಾರವಾಡ – ಎಸ್.ಎಸ್.ಎಸ್ ಹುಬ್ಬಳ್ಳಿ – ಧಾರವಾಡ (ಒಂದು ಟ್ರಿಪ್) ಜನವರಿ 12 ರಂದು ಧಾರವಾಡ - ಎಸ್.ಎಸ್.ಎಸ್ ಹುಬ್ಬಳ್ಳಿ (07375) ವಿಶೇಷ ರೈಲು ಮಧ್ಯಾಹ್ನ 1 ಗಂಟೆಗೆ ಧಾರವಾಡದಿಂದ ಹೊರಟು ಅದೇ ದಿನ ಮಧ್ಯಾಹ್ನ 01:30 ಗಂಟೆಗೆ ಎಸ್.ಎಸ್.ಎಸ್ ಹುಬ್ಬಳ್ಳಿ ತಲುಪಲಿದೆ. ಅದೇ ರೀತಿ ಹಿಂದಿರುಗುವಾಗ ಎಸ್.ಎಸ್.ಎಸ್ ಹುಬ್ಬಳ್ಳಿ - ಧಾರವಾಡ (07376) ವಿಶೇಷ ರೈಲು ಹುಬ್ಬಳ್ಳಿಯಿಂದ ಸಾಯಂಕಾಲ 7 ಗಂಟೆಗೆ ಹೊರಟು ಅದೇ ದಿನ ಸಂಜೆ 7:30 ಗಂಟೆಗೆ ಧಾರವಾಡ ತಲುಪಲಿದೆ.
- ಈ ಮೇಲೆ ತಿಳಿಸಿದ ವಿಶೇಷ ರೈಲುಗಳು ಸ್ಲೀಪರ್ ಬೋಗಿಗಳು, ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು ದ್ವಿತೀಯ ದರ್ಜೆ ಲಗೇಜ್ ಕಮ್ ಬ್ರೇಕ್-ವ್ಯಾನ್ಗಳೊಂದಿಗೆ/ಅಂಗವಿಕಲ ಸ್ನೇಹಿ ಸೇರಿದಂತೆ 18 ಬೋಗಿಗಳನ್ನು ಒಳಗೊಂಡಿರುತ್ತದೆ. ಎಸ್.ಎಸ್.ಎಸ್ ಹುಬ್ಬಳ್ಳಿ ಮತ್ತು ಧಾರವಾಡ ನಡುವೆ ಸಂಚರಿಸುವ ಈ ರೈಲುಗಳು ತಡೆರಹಿತವಾಗಿವೆ. ರೈಲು ಸೇವೆಗಳ ಸದುಪಯೋಗ ಪಡೆದುಕೊಳ್ಳುವಂತೆ ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಮೆಟ್ರೋ ಪಿಲ್ಲರ್ ಕುಸಿತದಿಂದ ತಾಯಿ ಮಗ ಸಾವು.. ಸಿಎಂ ಪರಿಹಾರ ನಿಧಿಯಿಂದ ತಲಾ 10 ಲಕ್ಷ ರೂ ಘೋಷಣೆ