ಹುಬ್ಬಳ್ಳಿ:ಕಿವಿ ಕೇಳದಿರುವ ಐದು ವರ್ಷದ ಒಳಗಿನ ಮಕ್ಕಳಿಗೆ ವಿಶೇಷ ತರಬೇತಿ ನೀಡುವ ಮೂಲಕ ಅವರು ಕೂಡ ಸಾಮಾನ್ಯ ಮಕ್ಕಳಂತೆ ಜೀವಿಸುವ ಸದುದ್ದೇಶದಿಂದ ಶ್ರೀರತ್ನಾ ರಿಹ್ಯಾಬಿಲಿಟೇಷನ್ ಸೆಂಟರ್ ವತಿಯಿಂದ ನೂತನ ತರಬೇತಿ ಕೇಂದ್ರ ಮಾರ್ಚ್ 3ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಡಾ. ರತ್ನಾ ತಳವಾರ ಹೇಳಿದರು.
ಮಾ. 3ರಂದು ಕಿವಿ ಕೇಳದ ಮಕ್ಕಳಿಗೆ ವಿಶೇಷ ತರಬೇತಿ ಕೇಂದ್ರ ಆರಂಭ - Special training center for deaf children
ಐದು ವರ್ಷಕ್ಕಿಂತಲೂ ಕೆಳಗಿನ ಕಿವಿ ಕೇಳದಿರುವ ಮಕ್ಕಳು ಕೂಡ ಸಾಮಾನ್ಯರಂತೆ ಬದುಕುವ ಉದ್ದೇಶದಿಂದ ಶ್ರೀರತ್ನಾ ರಿಹ್ಯಾಬಿಲಿಟೇಷನ್ ಸೆಂಟರ್ ಕಿವುಡು ಮಕ್ಕಳಿಗೆ ಮಾ. 3ರಂದು ವಿಶೇಷ ತರಬೇತಿ ಕೇಂದ್ರವನ್ನು ಆರಂಭಗೊಳಿಸಲಿದೆ.
![ಮಾ. 3ರಂದು ಕಿವಿ ಕೇಳದ ಮಕ್ಕಳಿಗೆ ವಿಶೇಷ ತರಬೇತಿ ಕೇಂದ್ರ ಆರಂಭ Ratna Talavaraa](https://etvbharatimages.akamaized.net/etvbharat/prod-images/768-512-6248177-thumbnail-3x2-vicky.jpg)
ಡಾ.ರತ್ನಾ ತಳವಾರ
ಡಾ. ರತ್ನಾ ತಳವಾರ
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಮುಖವಾಗಿ ಕಿವಿ ಕೇಳದಿರುವ ಮಕ್ಕಳು ತಮ್ಮ ಕಲಿಕಾ ರಂಗದಲ್ಲಿ ಸಾಕಷ್ಟು ಗೊಂದಲಗಳನ್ನು ಅನುಭವಿಸುತ್ತಾರೆ. ಅಲ್ಲದೆ ಪಾಲಕರಲ್ಲಿ ಈ ಬಗ್ಗೆ ಭಯವಿರುವುದು ಸಾಮಾನ್ಯವಾಗಿರುತ್ತದೆ. ಇದೆಲ್ಲವನ್ನೂ ಕೂಡ ನಿವಾರಣೆ ಮಾಡುವ ದೃಷ್ಟಿಕೋನದಿಂದ ಹೊಸ ಪ್ರಯೋಗವೊಂದನ್ನು ಕೈಗೆತ್ತಿಕೊಂಡಿದ್ದು, ರಾಜ್ಯದಲ್ಲಿಯೇ ಇದು ಮೊದಲ ತರಬೇತಿ ಕೇಂದ್ರವಾಗಿದೆ ಎಂದರು.