ಹುಬ್ಬಳ್ಳಿ: ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ವಿಶಾಖಪಟ್ಟಣಂ ನಿಲ್ದಾಣಗಳ ನಡುವೆ ವಿಶೇಷ ಏಕಮುಖ ಎಕ್ಸ್‌ಪ್ರೆಸ್ (07305) ರೈಲು ಓಡಿಸಲು ನಿರ್ಧರಿಸಲಾಗಿದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್ ಹೆಗಡೆ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ರೈಲುಗಳ ಮಾಹಿತಿ:ಈ ವಿಶೇಷ ರೈಲು ಜೂನ್ 17 ರಂದು ಮಧ್ಯಾಹ್ನ 2 ಗಂಟೆಗೆ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು ಗದಗ (03:03/03:05pm), ಕೊಪ್ಪಳ (03:48/03:50pm), ಹೊಸಪೇಟೆ (04:20/04:25pm), ತೋರಣಗಲ್ಲು (04:53/04:55pm), ಬಳ್ಳಾರಿ (06:25/06:30pm), ಆದೋನಿ (08:43/08:45pm), ರಾಯಚೂರು (09:43/09:45pm), ಕೃಷ್ಣಾ (10:05/10:10pm), ಚಿತ್ತಾಪುರ (12:15/12:17am), ವಿಕಾರಾಬಾದ್ (02:15/02:17am), ಲಿಂಗಂಪಲ್ಲಿ (03:00/03:02am), ಸಿಕಂದರಾಬಾದ್ (03:45/04:00am), ನಲಗೊಂಡ (05:30/05:32am), ಗುಂಟೂರು (08:00/08:10am), ವಿಜಯವಾಡ (09:35/09:45am), ಏಲೂರು (10:39/10:40am), ತಾಡೆಪಲ್ಲಿಗುಡಂ (11:13/11:15am), ರಾಜಮಂಡ್ರಿ (11:59am/12:00pm), ಸಾಮಲಕೋಟ್ (12:49/12:50pm), ತುನಿ (01:50/01:51pm) ಈ ನಿಲ್ದಾಣಗಳ ಮೂಲಕ ಮರುದಿನ ಸಂಜೆ 4:30 ಗಂಟೆಗೆ ವಿಶಾಖಪಟ್ಟಣಂ ನಿಲ್ದಾಣವನ್ನು ತಲುಪಲಿದೆ.
ಎಸಿ ಟು ಟೈಯರ್ ಬೋಗಿ (1), ಎಸಿ ತ್ರಿ ಟೈಯರ್ ಬೋಗಿಗಳು (4), ಸ್ಲೀಪರ್ ಕ್ಲಾಸ್ ಬೋಗಿಗಳು (9), ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು (3) ಮತ್ತು ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರೇಕ್ ವ್ಯಾನ್ ಬೋಗಿಗಳು (2) ಸೇರಿದಂತೆ ಒಟ್ಟು 19 ಬೋಗಿಗಳ ಸಂಯೋಜನೆಯನ್ನು ರೈಲು ಹೊಂದಿದೆ.