ಹುಬ್ಬಳ್ಳಿ:ಸ್ವಚ್ಛತೆ ಕಾಪಾಡಿಕೊಳ್ಳಲು ಮಹಾನಗರ ಪಾಲಿಕೆ ಅವಳಿನಗರದ ವಿವಿಧ ಕಡೆಗಳಲ್ಲಿ ನಿರ್ವಹಣೆರಹಿತ 85 ಪ್ರದೇಶಗಳಲ್ಲಿ ಮೂತ್ರಾಲಯಗಳ ಅಳವಡಿಕೆಗೆ ಮುಂದಾಗಿದೆ.
ವಾಣಿಜ್ಯ ನಗರಿಗೆ ಬರುತ್ತಿವೆ ವಿಶೇಷ ಸಾರ್ವಜನಿಕ ಶೌಚಾಲಯಗಳು ಅಭಿವೃದ್ಧಿ ಯೋಜನೆಗಳ ನಿಟ್ಟಿನಲ್ಲಿ ಈ ಹಿಂದೆ ಶೌಚಾಲಯ ಹಾಗೂ ಮೂತ್ರಿಗಳನ್ನು ತೆರವುಗೊಳಿಸಲಾಗಿತ್ತು. ಹಾಗಾಗಿ ಇವು ಸಾರ್ವಜನಿಕರಿಗೆ ಅಲಭ್ಯವಾಗಿದ್ದವು. ಈ ಕೊರತೆ ನೀಗಿಸುವ ನಿಟ್ಟಿನಲ್ಲಿ ವಿಶೇಷ ವಿನ್ಯಾಸದ ಮೂತ್ರಿಗಳನ್ನು ಅಳವಡಿಸಲು ಪಾಲಿಕೆ ಚಿಂತನೆ ನಡೆಸಿದೆ.
ಈ ವ್ಯವಸ್ಥೆಯನ್ನು ಜನರು ಮೂಲ ಉದ್ದೇಶದಂತೆ ಸದ್ಭಳಕೆ ಮಾಡಿಕೊಂಡರೆ, ಸ್ವಚ್ಛ ಹಾಗೂ ಸುಂದರ ನಗರವಾಗಲಿದೆ ಎನ್ನುವುದು ಪಾಲಿಕೆ ಅಧಿಕಾರಿಗಳ ಅಭಿಪ್ರಾಯ.
ಇದನ್ನೂ ಓದಿ: ಹುಬ್ಬಳ್ಳಿ - ಧಾರವಾಡದ 9 ಪ್ರಮುಖ ಸರ್ಕಲ್ ಅಭಿವೃದ್ಧಿಗೆ ನಿರ್ಧಾರ
ಜನನಿಬಿಡ ಪ್ರದೇಶಗಳಲ್ಲಿ ಮಹಾನಗರಕ್ಕೆ ಪ್ರತಿನಿತ್ಯ ಸುಮಾರು 1 ಲಕ್ಷಕ್ಕೂ ಹೆಚ್ಚು ಜನರು ಬಂದು ಹೋಗುತ್ತಿದ್ದಾರೆಂದು ಅಂದಾಜಿಸಲಾಗಿದೆ. ಮಾರುಕಟ್ಟೆ, ಸರ್ಕಾರಿ ಕಚೇರಿಗಳು, ಬಸ್ ನಿಲ್ದಾಣಗಳಲ್ಲಿ ಜನರ ಹೆಚ್ಚಿನ ಓಡಾಟ ಇರುತ್ತದೆ. ಮಹಾನಗರ ಪಾಲಿಕೆ ಕಚೇರಿ, ಚನ್ನಮ್ಮ ವೃತ್ತ, ಲ್ಯಾಮಿಂಗ್ಟನ್ ರಸ್ತೆ ಸೇರಿದಂತೆ ಹಲವಾರು ಪ್ರದೇಶಗಳನ್ನು ಗುರುತಿಸಿ ಸಾರ್ವಜನಿಕರಿಗೆ ಸುಲಭ ಶೌಚಾಲಯಕ್ಕೆ ಅನುಕೂಲ ಮಾಡಿಕೊಡುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.