ಕರ್ನಾಟಕ

karnataka

ETV Bharat / state

ಗಣೇಶ ಮೂರ್ತಿಯ ಜತೆ ಅಪ್ಪುವಿಗೂ ಪೂಜೆ: ಪುನೀತ್ ಅಭಿಮಾನಿಯಿಂದ ವಿಶೇಷ ಪ್ರಯತ್ನ - ಪುನೀತ್ ರಾಜ್​ಕುಮಾರ್​ ಅಪ್ಪಟ ಅಭಿಯಾನಿ

ಹುಬ್ಬಳ್ಳಿಯಲ್ಲಿ ಅಪ್ಪು ಅಭಿಮಾನಿಯೊಬ್ಬರು ಈ ಬಾರಿ ಗಣೇಶ ಹಬ್ಬದಂದು ಪುನೀತ್ ರಾಜ್​ಕುಮಾರ್ ಅವರಿಗೆ ಪೂಜೆ ಸಲ್ಲಿಸಿದ್ದಾರೆ.

ಗಣೇಶ ಮೂರ್ತಿಯ ಜತೆ ಅಪ್ಪುವಿಗೂ ಪೂಜೆ
ಗಣೇಶ ಮೂರ್ತಿಯ ಜತೆ ಅಪ್ಪುವಿಗೂ ಪೂಜೆ

By

Published : Sep 5, 2022, 4:24 PM IST

ಹುಬ್ಬಳ್ಳಿ:ಅಭಿಮಾನಿಗಳ ಆರಾಧ್ಯ ದೈವ ಪುನೀತ್ ರಾಜ್​ಕುಮಾರ್​ ನಮ್ಮನ್ನು ಅಗಲಿ ಹತ್ತು ತಿಂಗಳು ಕಳೆದಿದೆ. ಆದರೂ ಅವರ ಅಭಿಮಾನಿಗಳಿಗೆ ಪುನೀತ್​ ರಾಜ್​ ಕುಮಾರ್​ ಮೇಲಿನ ಅಭಿಮಾನ ಮಾತ್ರ ಸ್ವಲ್ಪವೂ ಕಡಿಮೆಯಾಗಿಲ್ಲ. ಹೆಜ್ಜೆ ಹೆಜ್ಜೆಗೂ ತಮ್ಮ ಅಭಿಮಾನವನ್ನು ತೋರಿಸುತ್ತಲೇ ಬಂದಿದ್ದಾರೆ. ಈ ಬಾರಿ ಹುಬ್ಬಳ್ಳಿಯ ಅಭಿಮಾನಿಯೊಬ್ಬರು ಗಣೇಶ ಮೂರ್ತಿಯ ಜೊತೆಗೆ ಅಪ್ಪು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಅಭಿಮಾನ ಮೆರೆದಿದ್ದಾರೆ.

ಪುನೀತ್ ಅಭಿಮಾನಿ ರಘು ಬದ್ದಿಯವರು ಮಾತನಾಡಿರುವುದು

ಹೌದು, ನಗರದ ರಘು ಬದ್ದಿ ಎಂಬ ಯುವಕ ರಾಜ್​ ಕುಮಾರ್​ ಕುಟುಂಬ ಹಾಗೂ ಪುನೀತ್ ರಾಜ್​ಕುಮಾರ್​ ಅಪ್ಪಟ ಅಭಿಯಾನಿಯಾಗಿದ್ದಾರೆ. ರಾಜ ಕುಟುಂಬದ ಚಲನಚಿತ್ರ ಹಾಗೂ ಹುಟ್ಟು ಹಬ್ಬಗಳನ್ನು ಸ್ವಂತ ಖರ್ಚಿನಲ್ಲಿ ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಆದರೆ, ಪುನೀತ್ ಮೇಲಿನ ಅಭಿಮಾನವನ್ನು ಗಣೇಶ ಹಬ್ಬದಲ್ಲಿ ವ್ಯಕ್ತಪಡಿಸುವ ಮೂಲಕ ಅಭಿಮಾನವನ್ನು ತೋರಿಸುತ್ತಿದ್ದಾರೆ.

ರಘು ವದ್ದಿ ಪ್ರತಿವರ್ಷದಂತೆ ತಮ್ಮ ಮನೆಯಲ್ಲಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಮಾಡಿದ್ದಾರೆ. ಆದರೆ, ಈ ವರ್ಷ ವಿಶಿಷ್ಠವಾಗಿ ಪುನೀತ್ ರಾಜ್​ಕುಮಾರ್​ ಅವರ ಜೀವನದ ಹಲವಾರು ಘಟನಾವಳಿ ಆಧಾರಿತ ಚಿತ್ರಪಟಗಳನ್ನು ಮನೆಯಲ್ಲಿ ಅಳವಡಿಸುವ ಮೂಲಕ ಗಣೇಶ ಚತುರ್ಥಿ ಆಚರಣೆ ಮಾಡಿದ್ದಾರೆ.

ಇನ್ನು ಗಣೇಶ ಮೂರ್ತಿಯ ಜೊತೆಗೆ ಅಪ್ಪು ಅವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಗಣೇಶ ಮೂರ್ತಿಗೆ ಕೊಡುವ ಸ್ಥಾನಮಾನವನ್ನು ಪುನೀತ್ ಅವರಿಗೂ ನೀಡಿದ್ದಾರೆ. ಕಳೆದ ಐದು ದಿನಗಳಿಂದಲೂ ಕೂಡಾ ನಿತ್ಯ ಪೂಜೆ ಪುನಸ್ಕಾರಗಳನ್ನು ಸಲ್ಲಿಸುತ್ತಿದ್ದಾರೆ. ಇದಕ್ಕೆ ಅವರ ಕುಟುಂಬ ಹಾಗೂ ನೆರೆಹೊರೆಯ ಸ್ನೇಹಿತ ಬಂಧುಗಳು ಕೂಡಾ ಕೈಜೋಡಿಸಿದ್ದಾರೆ. ಇದಲ್ಲದೇ ನಗರದಲ್ಲಿ ಹತ್ತಾರು ಪುನೀತ್ ಅಭಿಮಾನಿಗಳು ಗಣೇಶ ಪ್ರತಿಷ್ಠಾಪನೆ ವೇಳೆ ಅಪ್ಪು ಉತ್ಸವ ನಡೆಸಿದ್ದಾರೆ.

ದೇವರು ಎಂದು ಭಾವಿಸಿದ್ದೇವೆ: 'ನನ್ನ ದೇವರಾದ ಅಪ್ಪು ಸರ್ ಅವರ ದೊಡ್ಡ ಅಭಿಮಾನಿ. ಪ್ರತಿವರ್ಷ ನಾವು ಗಣಪತಿ ತಂದು ಮನೆಯಲ್ಲಿಟ್ಟು ಆಚರಣೆ ಮಾಡುತ್ತಿದ್ದೆವು. ಅಕ್ಟೋಬರ್ 29 ನೇ ತಾರೀಖಿಗೆ ಅಪ್ಪು ಸರ್ ನಿಧನರಾಗಿ ಒಂದು ವರ್ಷವಾಗುತ್ತದೆ ಎಂಬುದು ನಮಗೆ ಬಹಳ ದುಃಖವಾಗುತ್ತದೆ. ಈಗ ಅವರು ಇಲ್ಲ ಎಂದು ಅನ್ನಿಸಲೇಬಾರದು. ಹೀಗಾಗಿ, ನಾವು ಈ ವರ್ಷ ಅವರನ್ನೇ ಹೋಲುವ ಮೂರ್ತಿಯನ್ನು ಮನೆಯಲ್ಲಿ ನಿರ್ಮಿಸಿದ್ದೇವೆ. ನಮ್ಮ ಫ್ಯಾಮಿಲಿಯ ಎಲ್ಲರೂ ಅಪ್ಪು ಸರ್ ಅವರನ್ನು ದೇವರು ಎಂದು ಭಾವಿಸಿದ್ದೇವೆ.

ಅಪ್ಪು ಸರ್ ಅಜರಾಮರ: ಈ ಗಣೇಶ ಹೇಗೆ ದೇವರೋ ಹಾಗೆಯೇ ಅಪ್ಪು ಸರ್ ಕೂಡಾ ನಮಗೆ ದೇವರು. ಹಾಗಾಗಿ ಈ ಬಾರಿ ಗಣೇಶ ದೇವರ ಪಕ್ಕದಲ್ಲಿ ಅಪ್ಪು ಸರ್ ಅವರ ಭಾವಚಿತ್ರಗಳಿಂದ ಅಲಂಕಾರ ಮಾಡಿದ್ದೇವೆ. ಅವರು ಎಲ್ಲೂ ಹೋಗಿಲ್ಲ. ಇಲ್ಲೇ ಇದ್ದಾರೆ. ನಮ್ಮ ಜೊತೆಯಲ್ಲಿಯೇ ಇರುತ್ತಾರೆ ಎಂದು ಭಾವಿಸಿ ನಾವು ವರ್ಷ ಗಣಪತಿಯ ಮೂರ್ತಿ ಪಕ್ಕದಲ್ಲಿ ಅಪ್ಪು ಸರ್ ಅವರ ಆರಾಧನೆ ಮಾಡಿದ್ದೇವೆ. ಈ ಕಾರಣಕ್ಕಾಗಿ ನಾನು ಕರ್ನಾಟಕದ ಜನರನ್ನು ಕೇಳಿಕೊಳ್ಳುವುದಿಷ್ಟೇ. ಅಪ್ಪು ಸರ್ ಅವರನ್ನು ಯಾರೂ ಮರೆಯಲು ಹೋಗಬೇಡಿ. ಅಪ್ಪು ಸರ್ ಯಾವತ್ತೂ ಅಮರ. ಏಕೆಂದರೆ ಅವರು ಎಲ್ಲೂ ಹೋಗಿಲ್ಲ. ಅವರು ನಮ್ಮ ಜೊತೆಯಲ್ಲೇ ಇದ್ದಾರೆ. ಮೇಲೆ ಕುಳಿತುಕೊಂಡು ಇಡೀ ಕರ್ನಾಟಕದ ಜನತೆಯನ್ನೇ ನೋಡುತ್ತಿದ್ದಾರೆ' ಅಂತಾರೆ ಪುನೀತ್ ರಾಜ್​ಕುಮಾರ್​ ಅಭಿಮಾನಿ ರಘು ಬದ್ದಿ.

ಒಟ್ಟಿನಲ್ಲಿ ಅಭಿಮಾನಿಯ ಅಭಿಮಾನಕ್ಕೆ ಪುನೀತ್ ಗಣೇಶನ ಸ್ಥಾನದಲ್ಲಿ ಪೂಜಿಸಲ್ಪಡುವ ಮೂಲಕ ಅಪ್ಪುವಿನಲ್ಲಿಯೇ ದೇವರು ಕಂಡಿದ್ದಾರೆ. ಈ ಮೂಲಕ ಪುನೀತ್ ಅಗಲಿದರೂ ಅವರನ್ನು ಪೂಜನೀಯ ಸ್ಥಾನದಲ್ಲಿ ಇಟ್ಟಿರುವುದು ವಿಶೇಷವಾಗಿದೆ.

ಓದಿ:ಕೊಪ್ಪಳದ ಗಣೇಶೋತ್ಸವದಲ್ಲಿ ಅಪ್ಪುವಿನ ಜೀವನ ಚರಿತ್ರೆ ಪ್ರದರ್ಶನ

ABOUT THE AUTHOR

...view details