ಕರ್ನಾಟಕ

karnataka

ETV Bharat / state

ನಿಮ್ಮ ಹಾರೈಕೆ ಇರಲಿ ನಮ್ಮ ಮೇಲೆ... ಇದು ವಿಶೇಷ ಮದುವೆ - ಹುಬ್ಬಳ್ಳಿ ವಿಶೇಷವಾಗಿ ದಾಂಪತ್ಯಕ್ಕೆ ಕಾಲಿಟ್ಟ ಜೋಡಿ ಸುದ್ದಿ

’’ನಿಮ್ಮ ಹಾರೈಕೆ ಇರಲಿ ನಮ್ಮ ಮೇಲೆ - ನಮ್ಮ ಕಾಳಜಿ ನಿಮ್ಮ ಆರೋಗ್ಯದ ಮೇಲೆ’’ ಎಂಬುವಂತ ಸಾಮಾಜಿಕ ಕಾಳಜಿಯ ಘೋಷ ವ್ಯಾಕ್ಯದೊಂದಿಗೆ ಸಾರ್ವಜನಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮೂಲಕ ಈ ಜೋಡಿ ಹೊಸ ಜೀವನಕ್ಕೆ ಕಾಲಿಡುತ್ತಿರುವುದು ವಿಶೇಷವಾಗಿದೆ.

ಮದುವೆ ಸಮಾರಂಭದಲ್ಲಿ ಸ್ಯಾನಿಟೈಸರ್ ಹಾಗೂ ಮಾಸ್ಕ್ ವಿತರಿಸಿದ ನವ ಜೋಡಿ
ಮದುವೆ ಸಮಾರಂಭದಲ್ಲಿ ಸ್ಯಾನಿಟೈಸರ್ ಹಾಗೂ ಮಾಸ್ಕ್ ವಿತರಿಸಿದ ನವ ಜೋಡಿ

By

Published : Jul 3, 2020, 9:43 AM IST

ಹುಬ್ಬಳ್ಳಿ : ಕೊರೊನಾ ಹಾವಳಿಯಿಂದ ಎಷ್ಟೋ ಮದುವೆಗಳು ‌ನಿಂತು ಹೋಗಿವೆ.‌ ಆದರೆ, ಅಲ್ಲೊಂದು ಇಲ್ಲೊಂದು ನಡೆಯುವ ಮದುವೆ ಸಮಾರಂಭಗಳು ಅವಿಸ್ಮರಣೀಯವಾಗುತ್ತಿವೆ.‌ ಹೌದು ಅಂತಹುದೇ ಒಂದು ವಿಭಿನ್ನ ಹಾಗೂ ವಿಶೇಷವಾದ ಮದುವೆ ಗುರುವಾರ ಜರುಗಿತು.‌

ಮದುವೆ ಸಮಾರಂಭದಲ್ಲಿ ಸ್ಯಾನಿಟೈಸರ್ ಹಾಗೂ ಮಾಸ್ಕ್ ವಿತರಿಸಿದ ನವ ಜೋಡಿ

ನಗರದ ಕಮರಿಪೇಟೆಯ ನಿವಾಸಿ ಕಿರಣ ಕಲಬುರ್ಗಿ ಹಾಗೂ ಮಂಜುಶ್ರೀ ಎಂಬುವವರು ತಮ್ಮ ಮದುವೆ ಸಮಾರಂಭಕ್ಕೆ ಬರುವ ಅತಿಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ಹಾಗೂ ಸ್ಯಾನಿಟೈಸರ್ ಹಾಕುವ ವ್ಯವಸ್ಥೆ ಮಾಡಿತ್ತು. ಮದುವೆ ಬಂದ ಅತಿಥಿಗಳಿಗೆ ತಾಂಬೂಲ ನೀಡುವುದು ರೂಢಿ. ಆದರೆ, ಈ ನವ ಜೋಡಿಗಳು ತಾಂಬೂಲದ ಜೊತೆಗೆ ಸ್ಯಾನಿಟೈಸರ್ ಹಾಗೂ ಮಾಸ್ಕ್ ಅನ್ನು ಬಾಕ್ಸ್ ನಲ್ಲಿ ಹಾಕಿ ಪ್ಯಾಕಿಂಗ್ ಮಾಡಿ ಅತಿಥಿಗಳಿಗೆ ನೀಡುವ ಮೂಲಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿರುವುದು ವಿಶೇಷವಾಗಿದೆ.

ಮದುವೆ ಸಮಾರಂಭದಲ್ಲಿ ಸ್ಯಾನಿಟೈಸರ್ ಹಾಗೂ ಮಾಸ್ಕ್ ವಿತರಿಸಿದ ನವ ಜೋಡಿ

ನಿಮ್ಮ ಹಾರೈಕೆ ಇರಲಿ ನಮ್ಮ ಮೇಲೆ - ನಮ್ಮ ಕಾಳಜಿ ನಿಮ್ಮ ಆರೋಗ್ಯದ ಮೇಲೆ ಎಂಬುವಂತಹ ಸಾಮಾಜಿಕ ಕಾಳಜಿಯ ಘೋಷ ವ್ಯಾಕ್ಯದೊಂದಿಗೆ ಸಾರ್ವಜನಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮೂಲಕ ಈ ಜೋಡಿ ಹೊಸ ಜೀವನಕ್ಕೆ ಕಾಲಿಡುತ್ತಿರುವುದು ವಿಶೇಷವಾಗಿದೆ. ಹಾರ ಬದಲಾಯಿಸುವ ಬದಲು ಮಾಸ್ಕ್ ಬದಲಾಯಿಸಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

ಮದುವೆ ಸಮಾರಂಭದಲ್ಲಿ ಪೌರಕಾರ್ಮಿಕರನ್ನ ಸನ್ಮಾನಿಸಿದ ನವ ಜೋಡಿ

ಇದೇ ವೇಳೆ, ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಸನ್ಮಾನಿಸಿ ಅಭಿನಂದನೆಯನ್ನೂ ಸಲ್ಲಿಸಲಾಯಿತು.

ABOUT THE AUTHOR

...view details