ಹುಬ್ಬಳ್ಳಿ:ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹುಬ್ಬಳ್ಳಿಗೆ ಆಗಮಿಸುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ ಅದ್ದೂರಿಯಾಗಿ ಬರಮಾಡಿಕೊಂಡರು.
ಓದಿ: ಪ್ರಧಾನಿ ಮೋದಿ ಹೇಡಿ ಎಂದ ರಾಹುಲ್ ಗಾಂಧಿ
ಸಭಾಪತಿ ಸ್ಥಾನಕ್ಕೆ ಆಯ್ಕೆಯಾದ ನಂತರ ಮೊದಲ ಬಾರಿ ನಗರಕ್ಕೆ ಆಗಮಿಸಿದ ಬಸವರಾಜ ಹೊರಟ್ಟಿ, ನಂತರ ಸಿದ್ಧಾರೂಡ ಮಠಕ್ಕೆ ಮೊದಲ ಭೇಟಿ ನೀಡಿ ಸಿದ್ದರೂಡ ಅಜ್ಜನವರ ಆರ್ಶೀವಾದ ಪಡೆದರು.
ನಂತರ ಮಾತನಾಡಿದ ಅವರು, ಬೆಳಗಾವಿಯಲ್ಲಿ ಅಧಿವೇಶನ ನಡೆಸುವಂತೆ ಸೂಚಿಸುತ್ತೇನೆ. ಸರ್ಕಾರ ನಿರ್ಧರಿಸಿರುವ ರಾಜ್ಯ ಮಟ್ಟದ ಕಚೇರಿಗಳನ್ನು ಸುವರ್ಣ ಸೌಧಕ್ಕೆ ಶಿಫ್ಟ್ ಮಾಡಲು ಹೇಳುತ್ತೇನೆ ಎಂದರು. ಮೇಲ್ಮನೆಯಲ್ಲಿ ಮುಂದೆ ಶಿಸ್ತಿನಿಂದ ಅಧಿವೇಶನ ನಡೆಸುತ್ತೇವೆ. ಈ ವಿಚಾರವಾಗಿ ಎಲ್ಲ ಸದಸ್ಯರಿಗೂ ಪತ್ರ ಬರೆಯುತ್ತೇನೆ ಎಂದರು.
ಡಿ.15ರ ಪರಿಷತ್ ಕಹಿ ಘಟನೆ ಮರೆಯುತ್ತೇವೆ. ಮತ್ತೊಮ್ಮೆ ಆ ರೀತಿ ಆಗಲು ಬಿಡುವುದಿಲ್ಲ. ಸದನದ ಹೆಡ್ ಮಾಸ್ತರ್ ಆಗಿ ಕೆಲಸ ಮಾಡುತ್ತೇನೆ. ಸದನ ಹೇಗೆ ನಡೆಸಬೇಕು ಎನ್ನುವ ಬಗ್ಗೆ ಪ್ರತಿವಾರ ಎಲ್ಲ ಪಕ್ಷಗಳ ನಾಯಕರ ಜೊತೆ ಸಭೆ ನಡೆಸಲಾಗುತ್ತದೆ ಎಂದು ಹೇಳಿದರು.
ಬಿಜೆಪಿಯರು ನಮಗೆ ಸದುದ್ದೇಶದಿಂದ ಬೆಂಬಲ ನೀಡಿದ್ದಾರೆ. ಯಾರಿಗೂ ಸ್ವತಂತ್ರವಾಗಿ ಆಯ್ಕೆಯಾಗಲು ಬರುತ್ತಿರಲಿಲ್ಲ. ಹೀಗಾಗಿ ಎಲ್ಲರ ಅಪೇಕ್ಷೆ ಮೇರೆಗೆ ನನ್ನನ್ನು ಆಯ್ಕೆ ಮಾಡಿದ್ದಾರೆ ಎಂದರು.