ಹುಬ್ಬಳ್ಳಿ:ಲಾಕ್‌ಡೌನ್ ಸಮಯದಲ್ಲಿ ಪ್ರಯಾಣಿಕರ ರೈಲು ಸೇವೆಗಳನ್ನು ರದ್ದುಗೊಳಿಸಿದರೂ, ಸರಕು ರೈಲುಗಳು ಮತ್ತು ಪಾರ್ಸೆಲ್ ರೈಲುಗಳು ಚಾಲನೆಯಲ್ಲಿ ಮುಂದುವರಿಯುತ್ತಿವೆ. ಅಲ್ಲದೇ ಸಾರ್ವಜನಿಕರ ಅಗತ್ಯ ವಸ್ತುಗಳನ್ನು ಸರಬರಾಜು ಮಾಡುವಲ್ಲಿ ನೈರುತ್ಯ ರೈಲ್ವೆ ವಲಯ ಶ್ರಮಿಸಿದೆ ಎಂದು ಡಿವಿಜನಲ್ ಮ್ಯಾನೇಜರ್ ಅರವಿಂದ ಮಲ್ಖಡೆ ಹಾಗೂ ಡಿಜಿಎಂ ಸಿಪಿಆರ್ಒಇ ವಿಜಯಾ ಹೇಳಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ಪತ್ರಿಕಾಗೋಷ್ಠಿ ನೈರುತ್ಯ ರೈಲ್ವೆ ವಲಯದ ಕಚೇರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪತ್ರಿಕಾಗೋಷ್ಠಿಯಲ್ಲಿ ಜಂಟಿಯಾಗಿ ಮಾತನಾಡಿದ ಅವರು, ಲಾಕ್‌ಡೌನ್ ಸಮಯದಲ್ಲಿ ಕೂಲಿ ಕಾರ್ಮಿಕರು ಮತ್ತು ನಿರ್ಗತಿಕರಿಗೆ ದಿನಸಿ ಸಾಮಗ್ರಿಗಳನ್ನು ಹುಬ್ಬಳ್ಳಿ ವಿಭಾಗ ವಿತರಿಸಿದೆ. ಅಗತ್ಯ ಇರುವವರಿಗೆ 76 ಸಾವಿರಕ್ಕೂ ಹೆಚ್ಚು ಜನರಿಗೆ ಆಹಾರ ವಿತರಿಸಲಾಗಿದೆ. 47 ಲಕ್ಷ ಕ್ವಿಂಟಾಲ್‌ಗೆ ಸಮಾನವಾದ 188 ರಸಗೊಬ್ಬರಗಳು ಮತ್ತು 57 ಲಕ್ಷ ಕ್ವಿಂಟಾಲ್‌ಗೆ ಸಮಾನವಾದ 230 ಆಹಾರ ಧಾನ್ಯಗಳನ್ನು ಹುಬ್ಬಳ್ಳಿ ವಿಭಾಗ ನಿರ್ವಹಿಸಿದೆ ಎಂದರು.
ಹುಬ್ಬಳ್ಳಿ ವಿಭಾಗವು 30 ಸಾವಿರ ವಲಸೆ ಕಾರ್ಮಿಕರನ್ನು ಹೊತ್ತ 21 ಶ್ರಮಿಕ್ ವಿಶೇಷ ರೈಲುಗಳನ್ನು ನಡೆಸಿದೆ ಮತ್ತು ಒಟ್ಟಾರೆ ಎಸ್‌ಡಬ್ಲ್ಯುಆರ್ 267 ಶ್ರಮಿಕ್ ಸ್ಪೆಷಲ್‌ಗಳನ್ನು ಬಿಡಲಾಗಿದೆ. 3.9 ಲಕ್ಷ ವಲಸಿಗರು ತಮ್ಮ ಮನೆಗೆ ತಲುಪಲು ಅನುವು ಮಾಡಿಕೊಟ್ಟಿದೆ. ರೈಲ್ವೆ ಸಿಬ್ಬಂದಿಗಳ ಬಳಕೆಗಾಗಿ ವಿಭಾಗವು 15,397 ಫೇಸ್ ಮಾಸ್ಕ್ ಮತ್ತು 6,090 ಲೀಟರ್ ಹ್ಯಾಂಡ್ ಸ್ಯಾನಿಟೈಜರ್‌ಗಳನ್ನು ತಯಾರಿಸಿದೆ ಎಂದು ಅವರು ಹೇಳಿದರು.
ಹುಬ್ಬಳ್ಳಿ ವಿಭಾಗವು 35 ಐಸಿಎಫ್ ಬೋಗಿಗಳನ್ನು ಕೋವಿಡ್ ರೋಗಿಗಳಿಗೆ ಪ್ರತ್ಯೇಕ ಕೋಚ್‌ಗಳಾಗಿ ಪರಿವರ್ತಿಸಿದೆ. ಒಟ್ಟಾರೆ ಎಸ್‌ಡಬ್ಲ್ಯುಆರ್ 320 ಬೋಗಿಗಳನ್ನು ಐಸೊಲೇಷನ್ ಕೋಚ್‌ಗಳಾಗಿ ಪರಿವರ್ತಿಸಲಾಗಿದೆ ಎಂದರು.
ರೈಲ್ವೆ ಪುನಾರಂಭ ಕುರಿತು ಮಾತನಾಡಿದ ಅವರು, ರೈಲ್ವೆ ಸಚಿವಾಲಯವು ಗೃಹ ಸಚಿವಾಲಯ ಮತ್ತು ಆರೋಗ್ಯ ಸಚಿವಾಲಯದೊಂದಿಗೆ ಸಮಾಲೋಚಿಸಿ, ಈ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.