ಕರ್ನಾಟಕ

karnataka

ETV Bharat / state

ಉತ್ತರ ಕರ್ನಾಟಕ ಮಂದಿಯ ಅಚ್ಚುಮೆಚ್ಚಿನ ಹುಬ್ಬಳ್ಳಿ-ಬೆಂಗಳೂರು ಸೂಪರ್ ಫಾಸ್ಟ್ ರೈಲು ರದ್ದು - ಉತ್ತರ ಕರ್ನಾಟಕ ಜನ

ಹುಬ್ಬಳ್ಳಿ-ಬೆಂಗಳೂರು ಸೂಪರ್ ಫಾಸ್ಟ್ ರೈಲು ಸಂಚಾರ ರದ್ದುಮಾಡಿ ನೈರುತ್ಯ ರೈಲ್ವೆ ಆದೇಶ ಹೊರಡಿಸಿದೆ. ಮಧ್ಯರಾತ್ರಿ 11.55 ಬಿಟ್ಟು ಮರುದಿನ ಬೆಳಗ್ಗೆ 7.30 ಕ್ಕೆ ಬೆಂಗಳೂರಿಗೆ ತಲುಪುತಿತ್ತು. ಕೆಲಸ‌ ಮುಗಿಸಿ ಜನ ಮತ್ತೆ ರಾತ್ರಿ ರಾಜಧಾನಿಯಿಂದ ಬಿಡುವ ಸೂಪರ್ ಫಾಸ್ಟ್​​ ರೈಲು ಬೆಳಗ್ಗೆ ಹುಬ್ಬಳ್ಳಿಗೆ ಬಂದು ಸೇರಲು ಅನುಕೂಲಕರವಿತ್ತು.

Hubli railway station
ಹುಬ್ಬಳ್ಳಿ ಸಿದ್ಧಾರೂಢ ಸ್ವಾಮಿ ರೈಲ್ವೆ ಸ್ಟೇಶನ್

By ETV Bharat Karnataka Team

Published : Nov 21, 2023, 6:17 PM IST

Updated : Nov 21, 2023, 10:21 PM IST

ಸಾರ್ವಜನಿಕ ಸಂಪರ್ಕಾಧಿಕಾರಿ‌ ಅನೀಶ್ ಹೆಗಡೆ ಈಟಿವಿ ಭಾರತದೊಂದಿಗೆ ಮಾತನಾಡಿದರು.

ಹುಬ್ಬಳ್ಳಿ:ಉತ್ತರ ಕರ್ನಾಟಕ ಜನರ ಅಚ್ಚುಮೆಚ್ಚಿನ ರೈಲು ಎಂದೇ ಖ್ಯಾತಿ ಗಳಿಸಿದ್ದ ಹುಬ್ಬಳ್ಳಿ-ಬೆಂಗಳೂರು ಸೂಪರ್ ಫಾಸ್ಟ್ ರೈಲಿನ ಸಂಚಾರ ರದ್ದು ಮಾಡಲಾಗಿದೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ವೇಗದೂತದಂತೆ ಬರುತ್ತಿದ್ದ ಈ ರೈಲು ಅಂದರೆ ಎಲ್ಲರಿಗೂ ಅಚ್ಚು-ಮೆಚ್ಚು. ಆದರೆ, ಏಕಾಏಕಿ ಈ ರೈಲು ಸಂಚಾರವನ್ನು ರದ್ದು ಮಾಡಿ ನೈರುತ್ಯ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ.

ಬೆಂಗಳೂರು-ಹುಬ್ಬಳಿ ಸೂಪರ್ ಫಾಸ್ಟ್ ರೈಲು ಉತ್ತರ ಕರ್ನಾಟಕ ಮಂದಿಗೆ ಅತಿ ವೇಗದ ರೈಲು. ಈ ರೈಲು ಅಂದ್ರೆ ಈ ಭಾಗದ ಜನರಿಗೆ ಒಂದು ತರಹದ ಖುಷಿ. ವೇಗವಾಗಿ ಬೆಂಗಳೂರಿನಿಂದ ಹುಬ್ಬಳ್ಳಿ ಪ್ರಯಾಣಿಕರನ್ನು ಹೊತ್ತು ತರಲು ಹೆಸರಾಗಿತ್ತು. ಆದರೆ ಇದು ತನ್ನ ಸಂಚಾರ ಸೇವೆಯನ್ನು ಏಕಾಏಕಿ ನಿಲ್ಲಿಸಿದೆ.

ಉತ್ತರ ಕರ್ನಾಟಕ ಜನರಿಗೆ ಅನುಕೂಲವಾಗಿದ್ದ ರೈಲು: ರೈಲು ನಂ 07340/07339 ಇನ್ಮುಂದೆ ಪ್ರಯಾಣಿಕರಿಗೆ ಅಲಭ್ಯ ಅಂತ ರೈಲು ಸಂಚಾರ ರದ್ದು ಮಾಡಿ ಎಸ್ ಡಬ್ಲೂಆರ್ ಆದೇಶ ಹೊರಡಿಸಿದೆ. ಪ್ರಯಾಣಿಕರ ಬೇಡಿಕೆಗೆ ಈ ವರ್ಷದ ಮಾರ್ಚ್​ನಿಂದ ಹುಬ್ಬಳ್ಳಿ-ಬೆಂಗಳೂರು, ಬೆಂಗಳೂರು- ಹುಬ್ಬಳ್ಳಿ ಮಾರ್ಗವಾಗಿ ಸೂಪರ್ ಫಾಸ್ಟ್ ರೈಲು ಸಂಚಾರವನ್ನು ಆರಂಭಿಸಿತ್ತು.

ಅದರಂತೆ ಮಧ್ಯ ರಾತ್ರಿ 11.55 ಬಿಟ್ಟು ಮರುದಿನ ಬೆಳಗ್ಗೆ 7.30 ಕ್ಕೆ ಹುಬ್ಬಳ್ಳಿ ತಲುಪುತಿತ್ತು. ರಾಜಧಾನಿಯಲ್ಲಿ ಕೆಲಸ‌ ಮುಗಿಸಿ ಜನ ಬೆಳಗ್ಗೆ ಬೇಗ ಹುಬ್ಬಳ್ಳಿಗೆ ಬಂದು ಸೇರಲು ಈ ಟ್ರೈನ್ ಬಹಳಷ್ಟು ಸಹಾಯವಾಗಿತ್ತು. ಆದರೆ ಪ್ರಯಾಣಿಕರ ಕೊರತೆ ನೆಪಯೊಡ್ಡಿ ನೈರುತ್ಯ ರೈಲ್ವೆ ವಿಭಾಗ ಈಗ ಈ ರೈಲಿನ ಸಂಚಾರ ಸೇವೆಯನ್ನು ರದ್ದುಗೊಳಿಸಿದೆ.

ಸದ್ಯ ರೈಲು ಪ್ರಯೋಜನ ಪಡೆದುಕೊಳ್ಳಲು ಪ್ರಯಾಣಿಕರ ನಿರಾಸಕ್ತಿ ಹಿನ್ನೆಲೆ ಸಂಚಾರ ರದ್ದು ಮಾಡಲಾಗಿದೆ ಎನ್ನುವುದು ರೈಲ್ವೆ ಅಧಿಕಾರಿಗಳ ಮಾತು. ಅಲ್ಲದೇ ಇದು ತಾತ್ಕಾಲಿಕ ನಿರ್ಧಾರವಾಗಿದ್ದು, ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ಮತ್ತೆ ಸಂಚಾರ ಮಾಡುವ ಚಿಂತನೆ ಹೊಂದಿದೆ ಎನ್ನಲಾಗ್ತಿದೆ.

ಪ್ರಯಾಣಿಕರ ಬೇಡಿಕೆ ಬಂದ್ರೆ ಪರಿಶೀಲನೆ: ಈ ಕುರಿತಂತೆ ನೈರುತ್ಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ‌ ಅನೀಶ್ ಹೆಗಡೆ ಈಟಿವಿ ಭಾರತದೊಂದಿಗೆ ಮಾತನಾಡಿ, ಇದು ರೈಲ್ವೆ ಸ್ಪೇಷನ್ ಆಡಳಿತದ ನಿರ್ಧಾರದಂತೆ ಸಂಚರಿಸುವ ರೈಲು ಆಗಿದ್ದು, ಪ್ರಯಾಣಿಕರ ಅಗತ್ಯಕ್ಕೆ ಅನುಗುಣವಾಗಿ ಮತ್ತೆ ಓಡಿಸಲಾಗುತ್ತದೆ. ಈಗ ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ರಜಾ ದಿನಗಳು, ದೀಪಾವಳಿಯಂತ ಹಬ್ಬಗಳ ಸೀಜನ್​ನಲ್ಲಿ ಇಂತ ರೈಲುಗಳನ್ನು ದೇಶದ ನಾನಾ ಭಾಗಗಳಿಗೆ ‌ಓಡಿಸುತ್ತೇವೆ. ಅದರಂತೆ ಇದು ಒಂದು ಪ್ರಯಾಣಿಕರ ದಟ್ಟಣೆ ಆಧಾರದ ಮೇಲೆ ಮತ್ತೆ ಆರಂಭಿಸಲಾಗುತ್ತದೆ. ಆದ್ರೆ ಈ ಭಾಗದಲ್ಲಿ ‌ಪ್ರಸ್ತುತ ಎಕ್ಸ್ ಪ್ರೆಸ್ ರೈಲುಗಳು, ಪ್ಯಾಸೆಂಜರ್ ಹಾಗೂ ಹಗಲು ರಾತ್ರಿ ರೈಲುಗಳು ಓಡಾಡುತ್ತಿವೆ. ಹೀಗಾಗಿ ಪ್ರಯಾಣಿಕರ ಬೇಡಿಕೆ ಬಂದ್ರೆ ಮತ್ತೆ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಇದೊಂದು ತಾತ್ಕಾಲಿಕ ನಿರ್ಧಾರವಾಗಿದೆ. ನೈರುತ್ಯ ರೈಲ್ವೆ ಲಾಭ ನಷ್ಟದಲ್ಲಿ‌ ಓಡುವುದಿಲ್ಲ. ಆದ್ರೆ ಆರ್ಥಿಕತೆಗಿಂದಲೂ ಜನರ ದಟ್ಟಣೆ ತಗ್ಗಿಸುವುದು ಹಾಗೂ ಪ್ರಯಾಣಿಕರ ಅನುಕೂಲ ದೃಷ್ಟಿಯಿಂದ ಕೆಲಸ ಮಾಡುತ್ತದೆ ಎಂದಿದ್ದಾರೆ.

ಇದನ್ನೂಓದಿ:ಶಬರಿಮಲೆ ಅಯ್ಯಪ್ಪನ ಭಕ್ತರಿಗೆ ಗುಡ್​ ನ್ಯೂಸ್​: 22 ವಿಶೇಷ ರೈಲು ಸೇವೆ ನೀಡಲಿರುವ ದಕ್ಷಿಣ ಮಧ್ಯ ರೈಲ್ವೆ

Last Updated : Nov 21, 2023, 10:21 PM IST

ABOUT THE AUTHOR

...view details