ಹುಬ್ಬಳ್ಳಿ: ನೈರುತ್ಯ ರೈಲ್ವೆ ವಲಯ ಈಗ ಮತ್ತಷ್ಟು ಉತ್ಕೃಷ್ಟ ಮಟ್ಟದಲ್ಲಿ ಸಾರ್ವಜನಿಕರಿಗೆ ಸೇವೆ ನೀಡಲು ಸಿದ್ದವಾಗುತ್ತಿದೆ.
ಹೌದು. ಸದಾ ಒಂದಿಲ್ಲೊಂದು ಸಾಧನೆ ಮಾಡುವ ನೈರುತ್ಯ ರೈಲ್ವೆ ವಲಯ ಈಗ ಸೇವೆಯಲ್ಲಿ ಮತ್ತಷ್ಟು ವೇಗದೊಂದಿಗೆ ಹಾಗೂ ಆಧುನಿಕ ತಂತ್ರಜ್ಞಾನದ ಮೂಲಕ ಉತ್ಕೃಷ್ಟ ಮಟ್ಟದ ಸೇವೆ ನೀಡಲು ಮುಂದಾಗಿದೆ. ಎಷ್ಟೇ ವೇಗವಾಗಿ ಚಲಿಸಿದರೂ ಟ್ರೈನ್ ಕೊಂಚ ಅಲುಗಾಡದಂತೆ ಹಾಗೂ ಸ್ವಲ್ಪ ಕೂಡ ಜರ್ಕ್ ಹೊಡೆಯದಂತೆ ರೈಲ್ವೆಯನ್ನು ಉನ್ನತೀಕರಿಸಲಾಗಿದೆ.
ನೈರುತ್ಯ ರೈಲ್ವೆ ಮಹತ್ವದ ಸಾಧನೆ: ರೈಲು ವೇಗ ಎಷ್ಟಿದ್ದರೂ ಕಲಕದ ಹನಿ ನೀರು.. ನೈರುತ್ಯ ರೈಲ್ವೆ ವಲಯದ ಲೋಂಡಾ ಹಾಗೂ ಮಿರಜ್ ನಡುವಿನ ರೈಲ್ವೆ ಮಾರ್ಗದಲ್ಲಿ ಗಂಟೆಗೆ ಸುಮಾರು 125 ಕಿ. ಮೀ ಅಧಿಕ ವೇಗವಾಗಿ ಚಲಿಸಿ ಅದರಲ್ಲಿ ಒಂದು ನೀರು ತುಂಬಿದ ಗ್ಲಾಸ್ ಇಟ್ಟಿದ್ದು, ಸ್ವಲ್ಪ ಕೂಡ ಗ್ಲಾಸ್ ಅಲುಗಾಡಿಲ್ಲ. ಅಲ್ಲದೇ ಒಂದು ಹನಿ ನೀರು ಕೂಡ ಗ್ಲಾಸಿನಿಂದ ಕೆಳ ಚೆಲ್ಲಲಿಲ್ಲ. ರೈಲ್ವೆ ಇಲಾಖೆಯು ಸಾಕಷ್ಟು ಪರಿಶ್ರಮದ ಫಲವಾಗಿ ಈ ಯಶಸ್ಸು ಸಾಧ್ಯವಾಗಿದೆ.
ಲಾಕ್ ಡೌನ್ ಸಂದರ್ಭದಲ್ಲಿ ಕೂಡ ಸಾಕಷ್ಟು ಜನಹಿತ ಕಾರ್ಯಗಳಲ್ಲಿ ತೊಡಗಿಕೊಂಡಿದ್ದ ರೈಲ್ವೆ ಇಲಾಖೆ ಈಗ ಇಂತಹದೊಂದು ಯಶಸ್ಸಿನ ಪ್ರಾಯೋಗಿಕ ಚಾಲನೆ ಮಾಡಿದೆ. ಕೇಂದ್ರ ಸಚಿವ ಪಿಯುಷ್ ಗೋಯಲ್ ನೈರುತ್ಯ ರೈಲ್ವೆ ಇಲಾಖೆಯ ಕಾರ್ಯದಕ್ಷತೆಯನ್ನು ಮೆಚ್ಚಿದ್ದಾರೆ. ನೈರುತ್ಯ ರೈಲ್ವೆ ವಲಯದ ವ್ಯವಸ್ಥಾಪಕ ನಿರ್ದೆಶಕರ ಕಾರ್ಯ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ.