ಹುಬ್ಬಳ್ಳಿ: ಸೌರಶಕ್ತಿ ಮೂಲಕ ರೈಲು ನಿಲ್ದಾಣದಲ್ಲಿ ವಿದ್ಯುತ್ ಪೂರೈಕೆ ಮಾಡಿ ನೂರು ಕೋಟಿ ರೂ.ಗೂ ಹೆಚ್ಚು ಉಳಿತಾಯ ಮಾಡಿದ್ದ ನೈಋತ್ಯ ರೈಲ್ವೆ ಈಗ ಮತ್ತೊಂದು ಕಾರ್ಯಕ್ಕೆ ಮುಂದಾಗಿದೆ. ಇಷ್ಟು ದಿನ ಕಲ್ಲಿದ್ದಲು, ಡೀಸೆಲ್ ಮೂಲಕ ರೈಲು ಚಾಲನೆ ಮಾಡಿದ್ದ ಭಾರತೀಯ ರೈಲ್ವೆ, ಇದೀಗ ವಿದ್ಯುತ್ ಚಾಲಿತ ರೈಲು ಚಾಲನೆ ಮಾಡುವ ಇಂಧನ ಉಳಿತಾಯದೊಂದಿಗೆ ಪರಿಸರ ರಕ್ಷಣೆಯ ಹೊಣೆ ಹೊತ್ತಿದೆ.
ಇದನ್ನೂ ಓದಿ:ಸಂಪಾದನೆಯಲ್ಲಿ ಐತಿಹಾಸಿಕ ದಾಖಲೆ ಬರೆದ ನೈಋತ್ಯ ರೈಲ್ವೆ
ಹಸಿರು ರೈಲ್ವೆಯಾಗುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆಯು ಚಿಂತನೆ ನಡೆಸಿದ್ದು, ಈಗಾಗಲೇ ದ್ವಿಪಥ ಕಾಮಗಾರಿ ಜೊತೆಗೆ ಹಸಿರೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಇಂಧನದ ಮೇಲಿನ ಅವಲಂಬನೆ ಕೈ ಬಿಟ್ಟು ಪರಿಸರಸ್ನೇಹಿ ರೈಲ್ವೆಯಾಗುವತ್ತ ಸಾಗುತ್ತಿದೆ. ಈಗಾಗಲೇ 3,600 ಕಿಲೋ ಮೀಟರ್ ರೈಲ್ವೆ ರೂಟ್ ಟ್ರ್ಯಾಕ್ನಲ್ಲಿ ಸುಮಾರು 50% ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಂಡಿದೆ. 2024ರ ಮಾರ್ಚ್ ಹೊತ್ತಿಗೆ ಸಂಪೂರ್ಣ ವಿದ್ಯುದ್ದೀಕರಣ ಆಗುವ ಮೂಲಕ ಪರಿಸರ ಸ್ನೇಹಿಯಾಗಿ ನೈಋತ್ಯ ರೈಲ್ವೆ ಹೊರ ಹೊಮ್ಮಲಿದೆ.