ಹುಬ್ಬಳ್ಳಿ:ಗಲಾಟೆ ಪ್ರಕರಣದಲ್ಲಿ ಮಗ ಜೈಲು ಪಾಲಾಗಿದ್ದರಿಂದ ನೊಂದು ತಾಯಿಯೊಬ್ಬರು ಹುಬ್ಬಳ್ಳಿಯ ಉಣಕಲ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಗರದಲ್ಲಿ ನಡೆದಿದೆ. ಉಣಕಲ್ ನಿವಾಸಿ ಭಾರತಿ ಪಾಟೀಲ್ (ದ್ಯಾಮವ್ವ) ಎಂಬುವವರೇ ಕೆರೆಗೆ ಬಿದ್ದು ಸಾವಿಗೆ ಶರಣಾದ ತಾಯಿ.
ಉದಯನಗರದಲ್ಲಿ ಇವರ ಮಗ ವಿನಾಯಕ ಗೌಡ ಪಾಟೀಲ ಹಾಗೂ ಮಾರುತಿ ಮಾನೆ ಎಂಬುವರ ಮಗ ಸೇರಿದಂತೆ ಇತರರು ಹೊಡೆದಾಡಿಕೊಂಡಿದ್ದರು. ಇದೇ ಘಟನೆ ಸಂಬಂಧ ಪೊಲೀಸರು ವಿನಾಯಕ ಗೌಡನನ್ನು ಬಂಧಿಸಿ, ಜೈಲಿಗೆ ಕಳುಹಿಸಿದ್ದರು.