ಧಾರವಾಡ: ಜಿಲ್ಲೆಯಲ್ಲಿ ಮಳೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿ ಕೆರೆ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.
ತುಂಬಿ ಹರಿದ ಧಾರವಾಡದ ತುಪ್ಪರಿಹಳ್ಳ: 4 ಗ್ರಾಮಗಳು ಜಲಮಯ - ಧಾರವಾಡದಲ್ಲಿ ಧಾರಕಾರ ಮಳೆ
ಧಾರವಾಡ ಜಿಲ್ಲೆಯಲ್ಲಿ ಮಳೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿ ಕೆರೆ, ಹಳ್ಳ- ಕೊಳ್ಳಗಳು ತುಂಬಿ ಹರಿಯುತ್ತಿವೆ.
ತುಂಬಿ ಹರಿದ ತುಪ್ಪರಿಹಳ್ಳ
ನವಲಗುಂದ ತಾಲೂಕಿನ ತುಪ್ಪರಿ ಹಳ್ಳ ತುಂಬಿ ಹರಿಯುತ್ತಿರುವುದರಿಂದ ಮೂರರಿಂದ ನಾಲ್ಕು ಹಳ್ಳಿಗಳು ಜಲಾವೃತಗೊಂಡಿವೆ. ತಾಲೂಕಿನ ಗುಮ್ಮಗೋಳ, ಬ್ಯಾಲ್ಯಾಳ, ಮೊರಬ ಹಾಗೂ ಶಿರಕೊಳ ಗ್ರಾಮಗಳು ಜಲಾವೃತಗೊಂಡಿದ್ದು, ಜನರು ಪದಾಡುತ್ತಿದ್ದಾರೆ.
ಗ್ರಾಮಗಳ ಮನೆ, ಅಂಗಡಿಗಳಲ್ಲಿ ನೀರು ನುಗ್ಗಿರುವ ಪರಿಣಾಮ ಜನರು ಮನೆ ಬಿಟ್ಟು ಹೊರ ಬಾರದಷ್ಟು ಸಂಕಷ್ಟ ಎದುರಾಗಿದೆ.
Last Updated : Aug 8, 2019, 1:07 PM IST