ಹುಬ್ಬಳ್ಳಿ: ದೇವರಗುಡ್ಡ-ಹಾವೇರಿ ಮತ್ತು ಹುಬ್ಬಳ್ಳಿ ದಕ್ಷಿಣ-ಸಂಶಿ ವಿಭಾಗಗಳ ನಡುವೆ ನಡೆಯುತ್ತಿರುವ ಜೋಡಿ ಮಾರ್ಗದ ಕಾಮಗಾರಿ ಸಲುವಾಗಿ ಈ ಕೆಳಗಿನ ಕೆಲವು ರೈಲುಗಳ ಸೇವೆಯಲ್ಲಿ ಬದಲಾವಣೆ ಮಾಡಲಾಗುತ್ತಿದೆ.
ಎಲ್ಲೆಲ್ಲಿ ರೈಲು ಸೇವೆ ರದ್ದು?: ರೈಲು ಸಂಖ್ಯೆ 17347/48 ಎಸ್.ಎಸ್.ಎಸ್ ಹುಬ್ಬಳ್ಳಿ ಮತ್ತು ಚಿತ್ರದುರ್ಗ ನಡುವೆ ಚಲಿಸುವ ದೈನಂದಿನ ಎಕ್ಸ್‌ಪ್ರೆಸ್ ರೈಲು ಮಾರ್ಚ್ 25 ರಿಂದ 30, 2023 ರವರೆಗೆ ಮತ್ತು 07353/54 ಎಸ್.ಎಸ್.ಎಸ್ ಹುಬ್ಬಳ್ಳಿ ಮತ್ತು ಕೆ.ಎಸ್.ಆರ್ ಬೆಂಗಳೂರು ನಡುವೆ ಚಲಿಸುವ ದೈನಂದಿನ ವಿಶೇಷ ಎಕ್ಸ್‌ಪ್ರೆಸ್ ರೈಲು ಮಾರ್ಚ್ 25 ರಿಂದ ಏಪ್ರಿಲ್ 1, 2023 ರವರೆಗೆ, 07377 ವಿಜಯಪುರ-ಮಂಗಳೂರು ಜಂಕ್ಷನ್ ದೈನಂದಿನ ವಿಶೇಷ ಎಕ್ಸ್‌ಪ್ರೆಸ್ ರೈಲು ಮಾರ್ಚ್ 27 ರಿಂದ 29 ರವರೆಗೆ, 07378 ಮಂಗಳೂರು ಜಂಕ್ಷನ್ - ವಿಜಯಪುರ ಡೈಲಿ ವಿಶೇಷ ಎಕ್ಸ್‌ಪ್ರೆಸ್ ರೈಲು ಮಾರ್ಚ್ 28 ರಿಂದ 30ರ ವರೆಗೆ ರದ್ದುಗೊಳಿಸಲಾಗುತ್ತದೆ. ಹಾಗೂ ರೈಲು ಸಂಖ್ಯೆ 17391/92 ಕೆ.ಎಸ್.ಆರ್ ಬೆಂಗಳೂರು-ಎಸ್.ಎಸ್.ಎಸ್ ಹುಬ್ಬಳ್ಳಿ ನಡುವೆ ಚಲಿಸುವ ಡೈಲಿ ಎಕ್ಸ್‌ಪ್ರೆಸ್ ಮಾರ್ಚ್ 28 ಮತ್ತು 29, 2023 ರಂದು ರದ್ದುಗೊಳಿಸಲಾಗುತ್ತದೆ.
ಇಲ್ಲಿ ರೈಲು ಸೇವೆ ಭಾಗಶಃ ರದ್ದು: 1. ಕೆ.ಎಸ್.ಆರ್ ಬೆಂಗಳೂರು -ಎಸ್.ಎಸ್.ಎಸ್ ಹುಬ್ಬಳ್ಳಿ ನಿಲ್ದಾಣಗಳ ನಡುವೆ ಚಲಿಸುವ ಜನಶತಾಬ್ದಿ ಡೈಲಿ ಎಕ್ಸ್‌ಪ್ರೆಸ್ (12079/12080) ರೈಲು ಮಾರ್ಚ್ 25 ರಿಂದ ಏಪ್ರಿಲ್ 1 ರವರೆಗೆ ರಾಣಿಬೆನ್ನೂರು-ಹುಬ್ಬಳ್ಳಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತದೆ. ಈ ರೈಲು ರಾಣೆಬೆನ್ನೂರು-ಬೆಂಗಳೂರು ನಡುವೆ ಮಾತ್ರ ಸಂಚರಿಸಲಿದೆ.
2. ಮೈಸೂರು- ಬೆಳಗಾವಿ ನಿಲ್ದಾಣಗಳ ನಡುವೆ ಚಲಿಸುವ ವಿಶ್ವಮಾನವ ಡೈಲಿ ಎಕ್ಸ್‌ಪ್ರೆಸ್ (17326/17325) ರೈಲು ಮಾರ್ಚ್ 25 ರಿಂದ ಏಪ್ರಿಲ್ 1 ರವರೆಗೆ ಬೀರೂರು-ಬೆಳಗಾವಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತದೆ. ಈ ರೈಲು ಬೀರೂರು- ಮೈಸೂರು ನಡುವೆ ಮಾತ್ರ ಸಂಚರಿಸಲಿದೆ.
3. ಮಾರ್ಚ್ 30ರಂದು ಕೊಚುವೇಲಿಯಿಂದ ಹೊರಡುವ ರೈಲು ಸಂಖ್ಯೆ 12778 ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ರಾಣಿಬೆನ್ನೂರು-ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣದ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತದೆ. ಈ ರೈಲು ರಾಣಿಬೆನ್ನೂರು ನಿಲ್ದಾಣದಲ್ಲಿ ತನ್ನ ಪ್ರಯಾಣ ಕೊನೆಗೊಳಿಸುತ್ತದೆ.
ರೈಲು ಮಾರ್ಗ ಬದಲಾವಣೆ: 1. ಮಾರ್ಚ್ 23 ರಂದು ಬಾರ್ಮರ್‌ದಿಂದ ಬಿಡುವ ರೈಲು ಸಂಖ್ಯೆ 14806 ಬಾರ್ಮರ್-ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಹುಬ್ಬಳ್ಳಿ ಮಾರ್ಗದ ಬದಲು ಗದಗ, ಹೊಸಪೇಟೆ ಬೈಪಾಸ್, ಕೊಟ್ಟೂರು, ಅಮರಾವತಿ ಕಾಲೋನಿ, ದಾವಣಗೆರೆ ಮಾರ್ಗದ ಮೂಲಕ ಚಲಿಸಲಿದೆ.
2. ಮಾರ್ಚ್ 25 ರಂದು ಜೋಧ್‌ಪುರದಿಂದ ಬಿಡುವ ರೈಲು ಸಂಖ್ಯೆ 16507 ಜೋಧ್‌ಪುರ-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಹಾವೇರಿ, ರಾಣಿಬೆನ್ನೂರು, ಹರಿಹರ ನಿಲ್ದಾಣಗಳ ಬದಲು ಎಸ್‌ಎಸ್‌ಎಸ್ ಹುಬ್ಬಳ್ಳಿ, ಹೊಸಪೇಟೆ ಬೈಪಾಸ್, ಕೊಟ್ಟೂರು, ಅಮರಾವತಿ ಕಾಲೋನಿ, ದಾವಣಗೆರೆ ಮಾರ್ಗದ ಮೂಲಕ ಚಲಿಸಲಿದೆ.
3. ಮಾರ್ಚ್ 25 ಮತ್ತು ಏಪ್ರಿಲ್ 1ರಂದು ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಬಿಡುವ ರೈಲು ಸಂಖ್ಯೆ 20656 ಎಸ್‌ಎಸ್‌ಎಸ್ ಹುಬ್ಬಳ್ಳಿ - ಯಶವಂತಪುರ ಎಕ್ಸ್‌ಪ್ರೆಸ್ ರೈಲು ಹಾವೇರಿ ಮತ್ತು ಹರಿಹರ ನಿಲ್ದಾಣಗಳ ಬದಲು ಎಸ್‌ಎಸ್‌ಎಸ್ ಹುಬ್ಬಳ್ಳಿ, ಹೊಸಪೇಟೆ ಬೈಪಾಸ್, ಕೊಟ್ಟೂರು, ಅಮರಾವತಿ ಕಾಲೋನಿ, ದಾವಣಗೆರೆ ಮಾರ್ಗದ ಮೂಲಕ ಚಲಿಸಲಿದೆ
4. ಮಾರ್ಚ್ 25, 28 ಮತ್ತು 29 ರಂದು ದಾದರ್‌ನಿಂದ ಬಿಡುವ ರೈಲು ಸಂಖ್ಯೆ 11021 ದಾದರ್- ಯಶವಂತಪುರ ಎಕ್ಸ್‌ಪ್ರೆಸ್ ರೈಲು ಹಾವೇರಿ, ರಾಣಿಬೆನ್ನೂರು ಮತ್ತು ಹರಿಹರ ನಿಲ್ದಾಣಗಳ ಬದಲು ಎಸ್‌ಎಸ್‌ಎಸ್ ಹುಬ್ಬಳ್ಳಿ, ಹೊಸಪೇಟೆ ಬೈಪಾಸ್, ಕೊಟ್ಟೂರು, ಅಮರಾವತಿ ಕಾಲೋನಿ, ದಾವಣಗೆರೆ ಮಾರ್ಗದ ಮೂಲಕ ಚಲಿಸಲಿದೆ.
5. ಮಾರ್ಚ್ 26 ರಂದು ಪುದುಚೇರಿಯಿಂದ ಬಿಡುವ ರೈಲು ಸಂಖ್ಯೆ 11006 ಪುದುಚೇರಿ - ದಾದರ್ ಎಕ್ಸ್‌ಪ್ರೆಸ್ ರೈಲು ಹರಿಹರ, ರಾಣಿಬೆನ್ನೂರು ಮತ್ತು ಹಾವೇರಿ ನಿಲ್ದಾಣಗಳ ಬದಲು ದಾವಣಗೆರೆ, ಅಮರಾವತಿ ಕಾಲೋನಿ, ಕೊಟ್ಟೂರು, ಹೊಸಪೇಟೆ ಬೈಪಾಸ್ ಮತ್ತು ಎಸ್‌ಎಸ್‌ಎಸ್ ಹುಬ್ಬಳ್ಳಿ ಮಾರ್ಗದ ಮೂಲಕ ಚಲಿಸಲಿದೆ.
6. ಮಾರ್ಚ್ 26 ರಂದು ಮೈಸೂರಿನಿಂದ ಬಿಡುವ ರೈಲು ಸಂಖ್ಯೆ 11036 ಮೈಸೂರು-ದಾದರ್ ಶರಾವತಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಹರಿಹರ, ರಾಣಿಬೆನ್ನೂರು ಮತ್ತು ಹಾವೇರಿ ನಿಲ್ದಾಣಗಳ ಬದಲು ದಾವಣಗೆರೆ, ಅಮರಾವತಿ ಕಾಲೋನಿ, ಕೊಟ್ಟೂರು, ಹೊಸಪೇಟೆ ಬೈಪಾಸ್ ಮತ್ತು ಎಸ್‌ಎಸ್‌ಎಸ್ ಹುಬ್ಬಳ್ಳಿ ಮಾರ್ಗದ ಮೂಲಕ ಚಲಿಸಲಿದೆ.