ಕರ್ನಾಟಕ

karnataka

ETV Bharat / state

ರೈಲು ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆ ಕಾಮಗಾರಿ ಹಿನ್ನೆಲೆ ತಾತ್ಕಾಲಿಕವಾಗಿ ಕೆಲ ರೈಲು ಸಂಚಾರ ರದ್ದು - hubli news

ನೈಋತ್ಯ ರೈಲ್ವೆ ವಲಯದ‌ಲ್ಲಿ ವಿವಿಧ ಕಾಮಗಾರಿ ನಡೆಸುವ ಹಿನ್ನೆಲೆಯಲ್ಲಿ ಕೆಲವು ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

some-of-southwestern-train-stop
some-of-southwestern-train-stop

By

Published : Feb 12, 2020, 4:07 AM IST

ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯದ‌ಲ್ಲಿ ವಿವಿಧ ಕಾಮಗಾರಿ ನಡೆಸುವ ಹಿನ್ನೆಲೆಯಲ್ಲಿ ಕೆಲವು ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ಅಧಿಕೃತವಾಗಿ ರೈಲ್ವೆ ಅಧಿಕಾರಿಗಳು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ದ್ವಿಪಥ ಹಾಗೂ ಇಂಟರ್ ಲಾಕ್ ಕಾಮಗಾರಿ ನಡೆಸುವ ಹಿನ್ನೆಲೆಯಲ್ಲಿ ಗಾಡಿ ಸಂಖ್ಯೆ-57133 ವಿಜಯಪುರ-ರಾಯಚೂರ ಪ್ಯಾಸೆಂಜರ್ ರೈಲು, ಗಾಡಿ ಸಂಖ್ಯೆ- 57134 ರಾಯಚೂರು-ವಿಜಯಪುರ ಪ್ಯಾಸೆಂಜರ್ ರೈಲು, ಗಾಡಿ ಸಂಖ್ಯೆ-57129 ವಿಜಯಪುರ ಮಾರ್ಗವಾಗಿ ಬಲೋರಾಮ್ ತಲುಪುವ ಪ್ಯಾಸೆಂಜರ್ ರೈಲು, ಗಾಡಿ ಸಂಖ್ಯೆ- 57130 ಹೈದ್ರಾಬಾದ್ - ವಿಜಯಪುರ ರೈಲುಗಳನ್ನು ಫೆ.11ರಿಂದ 25ರ ವರೆಗೆ ರದ್ದುಪಡಿಸಲಾಗಿದೆ.

ರೈಲು ಪ್ರಯಾಣಿಕರ ಗಮನಕ್ಕೆ

ಫೆ.11ರಿಂದ 25ರ ವರೆಗೆ ಕಾಮಗಾರಿ ಹಿನ್ನಲೆಯಲ್ಲಿ ರದ್ದುಗೊಳಿಸಿ ನೈಋತ್ಯ ರೈಲ್ವೇ ವಲಯ ಆದೇಶ ನೀಡಿದೆ. ಆದ್ದರಿಂದ ಪ್ರಯಾಣಿಕರು ಸಹಕರಿಸಬೆಕಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ABOUT THE AUTHOR

...view details