ಹುಬ್ಬಳ್ಳಿ: ಕೋವಿಡ್ ಹೆಸರಲ್ಲಿ ಭಾರಿ ವಂಚನೆ ನಡೆದಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ವೃದ್ಧೆಯೊಬ್ಬರಿಗೆ ಕೊರೊನಾ ಪಾಸಿಟಿವ್ ಆಗಿದೆ ಎಂದು ಹೇಳಿ ಆಕೆಯ ಹೆಸರಲ್ಲಿದ್ದ 20 ಲಕ್ಷ ರೂ. ಬಾಂಡ್ ಪೇಪರ್, ಎಟಿಎಂ, ಬ್ಯಾಂಕ್ ಪಾಸ್‌ಬುಕ್‌ಗಳನ್ನು ತೆಗೆದುಕೊಂಡು ಹೋಗಿ ಖದೀಮರು 15 ಲಕ್ಷ ರೂ. ವಂಚಿಸಿರುವ ಆರೋಪ ಕೇಳಿ ಬಂದಿದೆ.
ಹಳೇ ಹುಬ್ಬಳ್ಳಿಯ ವೃದ್ಧೆ ಸರೋಜಾ ಕುರಟ್ಟಿ ವಂಚನೆಗೊಳಗಾದವರು. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕು ನಿಟಗಿನಕೊಪ್ಪ ಗ್ರಾಮದ ಶಾಂತವ್ವ, ಶಂಭಯ್ಯ, ಸುಜಾತಾ, ಅರುಣ ಹಾಗೂ ವಾಸೀಂ ವಂಚಿಸಿದ ಆರೋಪಿಗಳು.
ಘಟನೆ ಹಿನ್ನೆಲೆ:
ನನ್ನ ಚಿಕ್ಕಮ್ಮ ಸರೋಜಾ ಕುರಟ್ಟಿ ಅವರಿಗೆ ಕೊರೊನಾ ಪಾಸಿಟಿವ್ ಆಗಿದೆ ಎಂದು ಮೇ. 8ರಂದು ಕರೆ ಮಾಡಿ ತಿಳಿಸಿದ್ದರು. ನಂತರ ವಾಸೀಂ ಎಂಬಾತನ ಕಾರಿನಲ್ಲಿ ಕರೆದೊಯ್ದು ಶಿಗ್ಗಾಂವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹಳೇ ಹುಬ್ಬಳ್ಳಿ ಸುಭಾಶ್ ನಗರದ ನಮ್ಮ ಮನೆಗೆ ಬಂದಿದ್ದರು. ಚಿಕ್ಕಮ್ಮ ಸರೋಜಾ ಅವರ ಹೆಸರಲ್ಲಿದ್ದ ಪಿಂಚಣಿ ಪಾಸ್ ಬುಕ್, ಎಟಿಎಂ, ಡೆಪಾಸಿಟ್ ಮಾಡಿದ್ದ 20 ಲಕ್ಷ ರೂ. ಮೌಲ್ಯದ ಬಾಂಡ್ ತೆಗೆದುಕೊಂಡು ಹೋಗಿದ್ದರು. ನಂತರ ಫೋರ್ಜರಿ ಸಹಿ ಮಾಡಿಯೋ ಅಥವಾ ಫೋನ್ ಪೇ ಮುಖಾಂತರ 15 ಲಕ್ಷ ರೂ. ಡ್ರಾ ಮಾಡಿಕೊಂಡು ವಂಚಿಸಿದ್ದಾರೆಂದು ಸಂಬಂಧಿಕರು ಆರೋಪಿಸಿದ್ದಾರೆ.
ಇದನ್ನೂ ಓದಿ:ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ.. ಮಂಡ್ಯದಲ್ಲಿ ದುರಂತ
ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.