ರೈತರ ಹೋರಾಟಕ್ಕೆ ಸಾಥ್ ಕೊಟ್ಟ ಸೈನಿಕ ಪೊಲೀಸ್ ವಶಕ್ಕೆ - Soldier support for farmers protest
10:04 December 08
ರೈತರ ಹೋರಾಟಕ್ಕೆ ಸಾಥ್ ನೀಡಿದ್ದ ಯೋಧನನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ಹುಬ್ಬಳ್ಳಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ಗೆ ನಗರದಲ್ಲಿ ಸೈನಿಕರೊಬ್ಬರು ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಿದರು.
ಕುಂದಗೋಳ ತಾಲೂಕಿನ ಬರದ್ವಾಡದ ರಮೇಶ್ ಮಾಡಳ್ಳಿ ಎನ್ನುವ ಸೈನಿಕ ರೈತರ ಹೋರಾಟಕ್ಕೆ ಸಾಥ್ ನೀಡಿದವರು. ಇವರು ಅಸ್ಸೋಂನ ಆರ್ಆರ್ ವಿಂಗ್ನ ಹವಾಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿಭಟನೆಗೆ ಹಸಿರು ಶಾಲು, ಬಾರುಕೋಲು ಮೂಲಕ ಬೆಂಬಲ ಸೂಚಿಸಿದರು. ಈ ಸಂದರ್ಭ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
ಪ್ರತಿಭಟನೆ ವೇಳೆ ಮಾತನಾಡಿದ ಅವರು, ನಾನು ರೈತನ ಮಗ. ಹೀಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾನೂನು ವಿರೊಧಿಸಿ ಹೋರಾಟಗಾರರ ಬೆಂಬಲಕ್ಕೆ ಬಂದಿರುವೆ ಎಂದರು.