ಧಾರವಾಡ: ಕಾಡು ನಾಶದಿಂದ ಕಾಂಕ್ರೀಟ್ ಕಾಡಿಗೆ ನುಗ್ಗುತ್ತಿರುವ ಕಾಡು ಪ್ರಾಣಿಗಳು ವಾಸಿಸಲು ಸ್ಥಳವಿಲ್ಲದೆ ಸಾವನ್ನಪ್ಪುತ್ತಿವೆ. ಅದೇ ರೀತಿ ಪೇಡಾ ನಗರಿಯಲ್ಲಿ ಆಹಾರ ಅರಸಿ ಬಂದ ನಾಗಪ್ಪನಿಗೆ ವಾಸಿಸಲು ಸ್ಥಳ ಸಿಗದೆ ಹೀಲ್ಡ್ ಚಪ್ಪಲಿಯಲ್ಲಿ ಅಡಗಿ ಕುಳಿತಿತ್ತು.
ಧಾರವಾಡ: ಚಪ್ಪಲಿಯಲ್ಲಿ ಅಡಗಿ ಕೂತಿದ್ದ ನಾಗರಾಜ! - ಧಾರವಾಡ ಸತ್ತೂರು ನಗರದಲ್ಲಿ ಹಾವು ರಕ್ಷಣೆ ಸುದ್ದಿ
ಸತ್ತೂರಿನ ಮನೆಯೊಂದರಲ್ಲಿ ಇಟ್ಟಿದ್ದ ಚಪ್ಪಲಿನಲ್ಲಿ ಹಾವು ಅವಿತುಕೊಂಡಿದ್ದು, ವಿಷಯ ತಿಳಿದ ಮನೆಯವರು ಉರಗ ಪ್ರೇಮಿ ಯಲ್ಲಪ್ಪ ಜೋಡಳ್ಳಿ ಅವರಿಗೆ ತಿಳಿಸಿದ್ದಾರೆ. ಮನಗೆ ಬಂದ ಯಲ್ಲಪ್ಪ, ಹಾವನ್ನು ಸುರಕ್ಷಿತವಾಗಿ ಹಿಡಿದು ರಕ್ಷಣೆ ಮಾಡಿದ್ದಾರೆ.
ಚಪ್ಪಲಿಯಲ್ಲಿದ್ದ ನಾಗರಹಾವು ರಕ್ಷಣೆ
ನಗರದ ಸತ್ತೂರಿನ ಬಿ.ಎಚ್.ಇಟಗಿ ಎಂಬುವವರ ಮನೆಯಲ್ಲಿ ಪಾದರಕ್ಷೆಯ್ಲಲಿ ಹಾವು ಅವಿತುಕೊಂಡಿತ್ತು. ವಿಷಯ ತಿಳಿದ ಮನೆಯವರು ಉರಗ ಪ್ರೇಮಿ ಯಲ್ಲಪ್ಪ ಜೋಡಳ್ಳಿ ಅವರಿಗೆ ತಿಳಿಸಿದ್ದಾರೆ. ಮನಗೆ ಬಂದ ಯಲ್ಲಪ್ಪ ಜೋಡಳ್ಳಿ, ನಾಗರಾಜನನ್ನು ಸುರಕ್ಷಿತವಾಗಿ ಹಿಡಿದು ರಕ್ಷಣೆ ಮಾಡಿದ್ದಾರೆ.