ಹುಬ್ಬಳ್ಳಿ :ರೈಲ್ವೆ ಸ್ಟೇಷನ್ ಹತ್ತಿರದ ಜೆ ಸಿ ನಗರದ ಬಡಾವಣೆಯ ಮನೆಯೊಂದರಲ್ಲಿ ಹಾವು ಪ್ರತ್ಯಕ್ಷ್ಯವಾಗಿತ್ತು. ಉರಗ ತಜ್ಞ ನಾಗರಾಜ ಹಾವನ್ನು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.
ಬಡಾವಣೆಯ ಜನ ಹಾವನ್ನು ಕಂಡು ಆತಂಕಗೊಂಡಿದ್ದರು. ಈ ವೇಳೆ ಉರುಗ ತಜ್ಞ ನಾಗರಾಜ ಅಪ್ಪಣ್ಣವರ ಅವರಿಗೆ ಕರೆ ಮಾಡಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅವರು ಹಾವನ್ನು ಸುರಕ್ಷಿತವಾಗಿ ಹಿಡಿದು ಬಡಾವಣೆಯ ಜನರಲ್ಲಿದ್ದ ಆತಂಕ ದೂರವಾಗಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಹಾವು ಪ್ರತ್ಯಕ್ಷ.. ಉರಗತಜ್ಞರಿಂದ ರಕ್ಷಣೆ.. ಇದಕ್ಕೂ ಮುನ್ನ ಅಮರಗೋಳದಲ್ಲಿನ ಜಡ್ಜ್ ಕ್ವಾಟರ್ಸ್ನಲ್ಲಿ ನಾಗರಹಾವು ಪ್ರತ್ಯಕ್ಷವಾಗಿತ್ತು. ಅದನ್ನೂ ಸಹಿತ ಸುರಕ್ಷಿತವಾಗಿ ಹಿಡಿದು ಎರಡೂ ಹಾವುಗಳನ್ನು ಅರಣ್ಯಕ್ಕೆ ಬಿಟ್ಟಿದ್ದಾರೆ ಹಾಗೂ ಸ್ಥಳೀಯರಿಗೆ ಹಾವನ್ನು ಹೊಡೆಯದಂತೆ ಉರಗ ತಜ್ಞ ಅಪ್ಪಣ್ಣವರ ಮನವಿ ಮಾಡಿದರು. ಹಾವುಗಳು ಪ್ರಕೃತಿಯ ಸಮತೋಲನಕ್ಕೆ ಎಷ್ಟು ಮುಖ್ಯ ಅನ್ನೋದರ ಕುರಿತಂತೆ ಜಾಗೃತಿ ಮೂಡಿಸಿದ್ದಾರೆ.
ನಾಗರಾಜ ಅಪ್ಪಣ್ಣವರ ಅವರು ಈವರೆಗೆ ಒಟ್ಟಾರೆ ಸುಮಾರು 8000 ಹಾವುಗಳನ್ನು ಹಿಡಿದು ಸೈ ಎನಿಸಿಕೊಂಡಿದ್ದಾರೆ. ಹಾವುಗಳು ಬಂದರೆ ಅಮರಗೋಳ ಸ್ನೇಕ್ ನಾಗರಾಜ್ ಅಪ್ಪಣ್ಣವರ ಮೊಬೈಲ್ ನಂ. 9164446147, 9019386147ಗೆ ಸಂಪರ್ಕಿಸಬಹುದು.