ಹುಬ್ಬಳ್ಳಿ: ಕೊರೊನಾ ಬಂದ ಮೇಲೆ ಮಾಸ್ಕ್ಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಿದೆ. ಈ ನಡುವೆ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ನಿರುಪಯುಕ್ತ ಪ್ಲಾಸ್ಟಿಕ್ ಬಳಸಿ ಮಾಸ್ಕ್ ತಯಾರಿಸಿದ್ದಾರೆ. ಇದು ಎಲ್ಲರ ಗಮನ ಸೆಳೆದಿದೆ.
ಕೊರೊನಾ ಹಾವಳಿ ಹೆಚ್ಚಾಗುತ್ತಿದ್ದಂತೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ ಎಂಬ ಆದೇಶ ಹೊರಡಿಸಿದೆ. ಅದರಂತೆ ಸಾರ್ವಜನಿಕರು ಸಹ ತಮಗೆ ಅನುಕೂಲ ಹಾಗೂ ತಮ್ಮ ಆರ್ಥಿಕತೆ ನೋಡಿಕೊಂಡು ಮಾಸ್ಕ್ ಖರೀದಿಸುತ್ತಿದ್ದಾರೆ. ಈ ಮಧ್ಯೆ ಮನೆಯಲ್ಲೇ ನಿರುಪಯುಕ್ತ ವಸ್ತುಗಳನ್ನು ಬಳಸಿ ಸ್ಮಾರ್ಟ್ ಮಾಸ್ಕ್ ತಯಾರು ಮಾಡಬಹುದು ಎಂದು ನವನಗರದ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ಶ್ರೀನಿವಾಸ ಪರಡ್ಡಿ ತೋರಿಸಿಕೊಟ್ಟಿದ್ದಾರೆ.
ಸಂವಹನ ಕೊರತೆ ನೀಗಿಸುವ ಕಾರಣಕ್ಕೆ ಈ ಮಾಸ್ಕ್ಗೆ ಸ್ಪೀಕರ್ ಹಾಗೂ ಮೈಕ್ ವ್ಯವಸ್ಥೆ ಮಾಡಿದ್ದಾರೆ. ಕೊರೊನಾ ಸೋಂಕು ತಗುಲದಂತೆ ಸುರಕ್ಷತಾ ಕ್ರಮಗಳ ಜೊತೆಗೆ ಅಗತ್ಯ ಪರಿಕರಗಳ ಜೋಡಣೆ ಮಾಡಲಾಗಿದೆ. ಪ್ರಮುಖವಾಗಿ ಸೋಂಕಿನಿಂದ ದೂರವಿರಲು ಮುಖವನ್ನು ಸುರಕ್ಷಿತವಾಗಿಡಲು ಹಲವು ಸಾಮಗ್ರಿಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಆದರೆ ಎನ್ 95 ನಂತಹ ಕೆಲ ಮಾಸ್ಕ್ಗಳು ಬಲು ದುಬಾರಿಯಾಗಿದ್ದು, ಕೆಳ ಬಡವರು ಹಾಗೂ ಮಧ್ಯಮ ವರ್ಗದ ಜನರು ಅದನ್ನು ಬಳಸುವುದು ಅಷ್ಟೊಂದು ಸುಲಭವಲ್ಲ.