ಕರ್ನಾಟಕ

karnataka

ETV Bharat / state

ಕರ್ಫ್ಯೂ ಸಮಯ ಸದ್ಬಳಕೆ: ಚುರುಕುಗೊಂಡ 'ಸ್ಮಾರ್ಟ್ ಸಿಟಿ' ಯೋಜನೆ ಕಾಮಗಾರಿ - ಹುಬ್ಬಳ್ಳಿ

ಇಷ್ಟು ದಿನ ಆಮೆ ವೇಗದಲ್ಲಿ ನಡೆಯುತ್ತಿದ್ದ ಅವಳಿ ನಗರದ ಮಹತ್ವಪೂರ್ಣ 'ಸ್ಮಾರ್ಟ್ ಸಿಟಿ' ಯೋಜನೆ ಕಾಮಗಾರಿ ಈಗ ಚುರುಕುಗೊಂಡಿದೆ. ಜನತಾ ಕರ್ಫ್ಯೂ ಸದ್ಬಳಕೆ ಮಾಡಿಕೊಂಡು ಕಾಮಗಾರಿ ಮಿಂಚಿನ ವೇಗದಲ್ಲಿ ಮುನ್ನಡೆಯುತ್ತಿದೆ.

smart city work start in hubli
ಹುಬ್ಬಳ್ಳಿಯಲ್ಲಿ ಚುರುಕುಗೊಂಡ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ

By

Published : May 5, 2021, 9:12 AM IST

ಹುಬ್ಬಳ್ಳಿ:ನಗರದಲ್ಲಿಕಳೆದ ಕೆಲವು ತಿಂಗಳುಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ 'ಸ್ಮಾರ್ಟ್ ಸಿಟಿ' ಯೋಜನೆ ಕಾಮಗಾರಿಗೆ ಜನತಾ ಕರ್ಫ್ಯೂನಿಂದ ವೇಗ ಹೆಚ್ಚಾಗಿದೆ. ಅಲ್ಲದೆ ನಗರದಲ್ಲಿನ ಇತರ ಎಲ್ಲ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ.

ಹುಬ್ಬಳ್ಳಿಯಲ್ಲಿ ಚುರುಕುಗೊಂಡ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ

ಪಟ್ಟಣದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ, ಯುಜಿಡಿ, ಉದ್ಯಾನವನ, ನೆಹರು ಮೈದಾನ, ಈಜುಕೋಳ ಕಾಮಗಾರಿ ಸೇರಿದಂತೆ ಎಲ್ಲ ಕಾಮಾಗಾರಿಗಳಿಗೂ ಕೂಡ ಜನತಾ ಕರ್ಫ್ಯೂನಿಂದ ಹೆಚ್ಚಿನ ವೇಗ ಸಿಕ್ಕಂತಾಗಿದೆ. ಪ್ರಮುಖ ರಸ್ತೆಗಳಾದ ಕೊಪ್ಪಿಕರ ರಸ್ತೆ, ಜೆ.ಸಿ.ನಗರ, ದುರ್ಗದ ಬಯಲು, ಬೆಳಗಾವಿ ಗಲ್ಲಿ, ದಾಜೀಬಾನ ಪೇಟೆ, ವೀರಾಪುರ ಓಣಿ ರಸ್ತೆ, ಅಂಚಟಗೇರಿ ಓಣಿ, ಸ್ಟೇಷನ್ ರಸ್ತೆ, ತಬೀಬ ಲ್ಯಾಂಡ್, ಮಂಟೂರ ರಸ್ತೆ, ಪ್ರಿಯದರ್ಶಿನಿ ಕಾಲೋನಿ, ಸಿಲ್ವರ ಟೌನ್, ವಿವೇಕಾನಂದನಗರ ಸೇರಿದಂತೆ ನಗರದ ಬಹುತೇಕ ಕಡೆ ನಡೆಯುತ್ತಿರುವ ಸ್ಮಾರ್ಟ್​ ಸಿಟಿ ಕಾಮಗಾರಿಗಳು ಬಿರುಸಿನಿಂದ ಸಾಗಿವೆ.‌

ನೆಹರು ಮೈದಾನ, ತೋಳನಕೆರೆ, ಇಂದಿರಾ ಗಾಜಿನ ಮನೆ ಉದ್ಯಾನವನ, ಉಣಕಲ್ಲ ಕೆರೆ ಉದ್ಯಾನವನ ಕಾಮಗಾರಿಗಳು ವೇಗ ಪಡೆದುಕೊಂಡಿವೆ. ನಗರದಲ್ಲಿ ಹಲವು ಪ್ರದೇಶಗಳಲ್ಲಿ ಹೆಚ್ಚಿನ ವಾಹನ ಸಂಚಾರ ಹಾಗೂ ಜನದಟ್ಟಣೆ ಇರುವುದರಿಂದ ಕಾಮಗಾರಿಗಳು ನಡೆಸುವುದು ಕಷ್ಟಕರವಾಗಿತ್ತು. ಆದರೆ ಜನತಾ ಕರ್ಫ್ಯೂ ಹಿನ್ನೆಲೆ ಅಂತಹ ಎಲ್ಲ ಸಮಸ್ಯೆಗಳಿಗೆ ಇದೀಗ ಪರಿಹಾರ ಸಿಕ್ಕಂತಾಗಿದೆ.

ಸ್ಟೇಷನ್ ರಸ್ತೆಯ ಚಂದ್ರಕಲಾ ಚಿತ್ರಮಂದಿರದ ಪಕ್ಕ ಚರಂಡಿ ಕಾಮಗಾರಿ, ಗಣೇಶ ಪೇಟೆ ಸರ್ಕಲ್ ವೃತ್ತದಲ್ಲಿ ಚರಂಡಿ ಕಾಮಗಾರಿ, ಮರಾಠ ಗಲ್ಲಿ ಸಿಬಿಟಿ ರಸ್ತೆ ಚರಂಡಿ ಕಾಮಗಾರಿ, ಕೊಪ್ಪಿಕರ ರಸ್ತೆ-ಕೋಯಿನ್ ರಸ್ತೆ ಚರಂಡಿ ಕಾಮಗಾರಿ ಸೇರಿದಂತೆ ಹಲವು ಕಾಮಗಾರಿಗಳನ್ನು ಶುಕ್ರವಾರ ಒಂದೇ ದಿನ ಕೈಗೊಂಡಿದ್ದು, ಜನ ಹಾಗೂ ವಾಹನ ಸಂಚಾರ ಇಲ್ಲದೇ ಇರುವುದು ಕಾಮಗಾರಿಗೆ ವರದಾನವಾಗಿದೆ.

ಈ ಹಿಂದೆ ಒಂದು ಕಾಮಗಾರಿ ಒಂದು ಪ್ರದೇಶದಲ್ಲಿ ಕೈಗೊಳ್ಳಬೇಕಾದರೆ ವಾಹನ ಸಂಚಾರ, ಜನ ಸಂಚಾರ ಇಲ್ಲದೆ ಇರುವ ಸಮಯ ನೋಡಿಕೊಂಡು ಹಂತ ಹಂತವಾಗಿ ಕಾಮಗಾರಿ ಕೈಗೊಳ್ಳಬೇಕಾಗಿತ್ತು. ಆದರೆ ಇದೀಗ ಎಲ್ಲದಕ್ಕೂ ಅವಕಾಶ ಸಿಕ್ಕಂತಾಗಿದೆ. ಈ ಹಿಂದೆ ಶೇ. 100ರಷ್ಟು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು. ಆದರೆ ಜನತಾ ಕರ್ಫ್ಯೂ ಹಿನ್ನೆಲೆ ಸ್ಥಳೀಯ ಕಾರ್ಮಿಕರು ಕೆಲಸಕ್ಕೆ ಆಗಮಿಸಲು ತೊಂದರೆಯಾಗಿದ್ದರ ಪರಿಣಾಮ ಶೇ. 70ರಷ್ಟು ಕಾರ್ಮಿಕರು ಕೆಲಸದಲ್ಲಿ ಪಾಲ್ಗೊಂಡು ಕಾಮಗಾರಿಗೆ ವೇಗ ನೀಡಿದ್ದಾರೆ.

ABOUT THE AUTHOR

...view details