ಧಾರವಾಡ:ರಕ್ಷಾ ಬಂಧನ ಅಥವಾ ರಾಖಿ ಹಬ್ಬ ಅಂದರೆ ಅಕ್ಕ- ತಂಗಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟುವುದು ಸಾಮಾನ್ಯ. ಆದರೆ , ಇಲ್ಲೊಬ್ಬಳು ಯುವತಿ ತನ್ನ ಸಹೋದರನಿಗೆ ರಾಖಿ ಬದಲು ಮಾಸ್ಕ್ ತೊಡಿಸಿದ್ದಾಳೆ.
ರಾಖಿ ಬದಲು ಮಾಸ್ಕ್ ತೊಡಿಸಿ ವಿಶಿಷ್ಟವಾಗಿ ರಕ್ಷಾ ಬಂಧನ ಆಚರಿಸಿದ ಸಹೋದರಿ - Rakhi festival
ರಕ್ಷಾ ಬಂಧನ ಪ್ರಯುಕ್ತ ಅಣ್ಣನಿಗೆ ರಾಖಿ ಕಟ್ಟುವ ಬದಲು ಮಾಸ್ಕ್ ತೊಡಿಸಿ ಯುವತಿಯೊಬ್ಬಳು ಗಮನ ಸೆಳೆದಿದ್ದಾಳೆ.
ರಾಖಿ ಬದಲು ಮಾಸ್ಕ್ ತೊಡಿಸಿದ ಸಹೋದರಿ
ನಗರದ ಮದಿಹಾಳದ ಜ್ಯೋತಿಕಾ ತನ್ನ ಸಹೋದರ ಅಮಿತ್ಗೆ ರಾಖಿ ಹಬ್ಬದ ಹಿನ್ನೆಲೆ ಆರತಿ ಬೆಳಗಿ ರಾಖಿ ಬದಲು ಮಾಸ್ಕ್ ತೊಡಿಸಿದ್ದಾಳೆ. ಈ ಮೂಲಕ ಕೊರೊನಾ ಜಾಗೃತಿಯೊಂದಿಗೆ ವಿಶಿಷ್ಟವಾಗಿ ರಕ್ಷಾ ಬಂಧನ ಆಚರಿಸಿಕೊಂಡಿದ್ದಾಳೆ.
ಇನ್ನು, ತಂಗಿ ರಾಖಿ ಬದಲು ಮಾಸ್ಕ್ ಕೊಟ್ರೆ ಅಣ್ಣ ಅಮಿತ್ ಕೂಡ ಸ್ಯಾನಿಟೈಸರ್ ಬಾಟಲಿ ಕೊಟ್ಟು ವಿಶಿಷ್ಟತೆ ಮೆರೆದಿದ್ದಾನೆ.