ಕರ್ನಾಟಕ

karnataka

ETV Bharat / state

ಆಂಧ್ರದ ಸಿರಿಷಾ ಅಮೆರಿಕದಿಂದ ಅಂತರಿಕ್ಷಯಾನ: ಶುಭ ಕೋರಿದ ಧಾರವಾಡ ಕಲಾವಿದರು - ಸಿರಿಷಾ ಬಾಂಡ್ಲಾ ,

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಸಿರಿಷಾ ಬಾಂಡ್ಲಾ ಅಂತರಿಕ್ಷಯಾನ ಕೈಗೊಳ್ಳಲಿದ್ದು, ಅವರಿಗೆ ಧಾರವಾಡದ ಕೆಲಗೇರಿ ಗಾಯತ್ರಿಪುರದ ಕಲಾವಿದರಾದ ಮಂಜುನಾಥ ಹಿರೇಮಠ ಹಾಗೂ ಅವರ ಮಕ್ಕಳಾದ ಕಾಂತೇಶ ಮತ್ತು ವಿನಾಯಕ, ಅವರ ಚಿತ್ರ ರಚನೆ ಮಾಡಿ ಶುಭಾಶಯ ಕೋರಿದ್ದಾರೆ.

Dharwad
ಧಾರವಾಡದ ಕಲಾವಿದರಿಂದ ಗೌರವ

By

Published : Jul 11, 2021, 6:31 AM IST

Updated : Jul 11, 2021, 7:02 AM IST

ಧಾರವಾಡ:ಅಮೆರಿಕದಲ್ಲಿರುವ ಅನಿವಾಸಿ ಭಾರತೀಯ ಮಹಿಳೆ ಹೊಸ ಮೈಲಿಗಲ್ಲನ್ನು ಸ್ಥಾಪಿಸಲು ಮುಂದಾಗಿದ್ದಾರೆ. ಇಂದು ಅಂತರಿಕ್ಷಯಾನ ಕೈಗೊಳ್ಳಲಿರುವ ಸಿರಿಷಾ ಬಾಂಡ್ಲಾ ಅವರಿಗೆ ಧಾರವಾಡದ ಕಲಾವಿದರು ಶುಭ ಹಾರೈಸಿದ್ದಾರೆ. ಅವರ ಭಾವಚಿತ್ರ ರಚನೆ ಮಾಡಿ ಶುಭಾಶಯ ಕೋರಿದ್ದಾರೆ.

ಧಾರವಾಡದ ಕಲಾವಿದರಿಂದ ಗೌರವ

ಕೆಲಗೇರಿ ಗಾಯತ್ರಿಪುರದ ಕಲಾವಿದರಾದ ಮಂಜುನಾಥ ಹಿರೇಮಠ ಹಾಗೂ ಅವರ ಮಕ್ಕಳಾದ ಕಾಂತೇಶ ಮತ್ತು ವಿನಾಯಕ ಅವರು ಸಿರಿಷಾ ಬಾಂಡ್ಲಾ ಅವರ ಭಾವಚಿತ್ರ ರಚಿಸಿ ಶುಭಾಶಯ ಕೋರಿದ್ದಾರೆ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ 34 ವರ್ಷದ ಸಿರಿಷಾ ಅವರು ನ್ಯೂ ಮೆಕ್ಸಿಕೋದ ವರ್ಜಿನ್ ಗೆಲ್ಯಾಕ್ಟಿಕ್​ನಿಂದ ಅಂತರಿಕ್ಷಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಒಟ್ಟು ಆರು ಜನರು ಇರುವ ತಂಡದಲ್ಲಿ ಇವರೂ ಒಬ್ಬರಾಗಿದ್ದು, ಭಾರತೀಯರಿಗೆ ಹೆಮ್ಮೆಯ ವಿಷಯ ಎಂದು‌ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ಹಲ್ಲು ನೋವೆಂದು ಸ್ನೇಹಿತನ ಕ್ಲಿನಿಕ್​ಗೆ ಹೋದವ ಮಸಣ ಸೇರಿದ

ಸಿರಿಷಾ ಬಾಂಡ್ಲಾ ಅವರು ಅಂತರಿಕ್ಷಯಾನ ಸಾಹಸಕ್ಕೆ ಮುಂದಾಗಿದ್ದು, ಅವರಿಗೂ ಹಾಗೂ ಆ ತಂಡದಲ್ಲಿರುವ ಎಲ್ಲ ಗಗನಯಾತ್ರಿಗಳಿಗೂ ಒಳ್ಳೆಯದಾಗಲಿ ಎಂದು ಹಾರೈಸೋಣ.

Last Updated : Jul 11, 2021, 7:02 AM IST

ABOUT THE AUTHOR

...view details