ಕರ್ನಾಟಕ

karnataka

ETV Bharat / state

ನಾದಬ್ರಹ್ಮ ಹಂಸಲೇಖ ಅವರೇ..'ಪ್ರೀತಿಯ ಪಾರಿವಾಳ ಹಾರಿಹೋಯ್ತೋ..' ಹಾಡಿದ್ದು ಇವರೇ ನೋಡ್ರೀ.. - hamsalekha

ಸುಮಾರು 20 ವರ್ಷದ ಹಿಂದಿನ ಪ್ರೀತಿಯ ಪಾರಿವಾಳ ಹಾಡನ್ನು ಹಾಡಿದ್ದು ಧಾರವಾಡ ತಾಲೂಕಿನ ಕುರುಬಗಟ್ಟಿ ಕಲಾವಿದ ರಮೇಶ ಮಲ್ಲೇದಿ. ಆದರೆ, ಇತ್ತೀಚೆಗೆ ಖಾಸಗಿ ವಾಹಿನಿಯೊಂದರ ರಿಯಾಲಿಟಿ ಶೋನಲ್ಲಿ ಪ್ರೀತಿಯ ಪಾರಿವಾಳ ಹಾಡಿದವರು ಬೆಂಗಳೂರಿನವರು ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದ್ದಾರೆ. ಇದರಿಂದ ಮೂಲ ಕಲಾವಿದ ಸೇರಿದಂತೆ, ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನ ಹೊರ ಹಾಕುತ್ತಿದ್ದಾರೆ.

ಹಂಸಲೇಖ ವಿರುದ್ಧ ಗಾಯಕನ ಆಕ್ರೋಶ

By

Published : Jul 13, 2019, 10:40 PM IST

ಧಾರವಾಡ: ಉತ್ತರ ಕರ್ನಾಟಕದ ಭಗ್ನ ಪ್ರೇಮ ಗೀತೆ ಎಂದು ಪ್ರಸಿದ್ದಿ ಪಡೆದಿರುವ ಪ್ರೀತಿಯ ಪಾರಿವಾಳ ಹಾರಿ ಹೋತೊ ಗೆಳೆಯಾ.. ಎನ್ನುವ ಹಾಡು ಸೋಶಿಯಲ್ ಮೀಡಿಯಾದಲ್ಲಿ ಬಹಳ ಫೇಮಸ್ ಆಗಿತ್ತು. ಸುಮಾರು 20 ವರ್ಷದ ಹಿಂದಿನ ಈ ಹಾಡನ್ನು ಹಾಡಿದ್ದು ಧಾರವಾಡ ತಾಲೂಕಿನ ಕುರುಬಗಟ್ಟಿ ಕಲಾವಿದ ರಮೇಶ ಮಲ್ಲೇದಿ. ಆದರೆ, ಬೆಂಗಳೂರು ಭಾಗದವರು ಈ ಕಲಾವಿದನನ್ನು ಮರೆತಂತಿದೆ. ಇತ್ತೀಚೆಗೆ ನಡೆದ ಹಾಡಿನ ಕಾರ್ಯಕ್ರಮವೊಂದರಲ್ಲಿ ಪ್ರೀತಿಯ ಪಾರಿವಾಳ ಹಾಡಿದವರು ಬೆಂಗಳೂರಿನವರು ಎಂದು ನಾದಬ್ರಹ್ಮ ಹಂಸಲೇಖ ಹೇಳಿಕೆ ನೀಡಿರೋದ್ರಿಂದ ಹಾಡು ರಚಿಸಿ, ಅದಕ್ಕೆ ಸಂಗೀತ ಸಂಯೋಜಿಸಿ ಹಾಡಿದ್ದ ಮೂಲ ಕಲಾವಿದ ಸೇರಿ, ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನ ಹೊರ ಹಾಕುತ್ತಿದ್ದಾರೆ.

ಹಂಸಲೇಖ ವಿರುದ್ಧ ಗಾಯಕನ ಆಕ್ರೋಶ

ಈ ಜಾನಪದ ಶೈಲಿಯ ಹಾಡನ್ನು ರಮೇಶ ಮಲ್ಲೇದಿ ಎಂಬುವರು ತಾವೇ ಬರೆದು ಹಾಡನ್ನು ರಾಗ ಸಂಯೋಜಿಸಿ, ಆಡಿಯೋ ಕಂಪನಿಯೊಂದರ ಕ್ಯಾಸೆಟ್‌ ಸಹ ಮಾಡಿದ್ದರು. ಈ ಹಾಡು ಇಡೀಉತ್ತರ ಕರ್ನಾಟಕದಾದ್ಯಂತ ಈಗಲೂ ತುಂಬಾ ಫೇಮಸ್‌. ಇದೇ ಹಾಡಿನಿಂದ ರಮೇಶ್‌ ಖ್ಯಾತ ಗಾಯಕರಾಗಿ ಹೊರಹೊಮ್ಮಿದ್ದರು.

ಆದರೆ, ಮೊನ್ನೆ ನಡೆದ ಖಾಸಗಿ ವಾಹಿನಿಯಲ್ಲಿನ ಹಾಡಿನ ರಿಯಾಲಿಟಿ ಶೋವೊಂದರಲ್ಲಿಸ್ಫರ್ಧಿಯೊಬ್ಬರು ಹಾಡಿದ ಈ ಹಾಡಿಗೆ ಹಂಸಲೇಖ ಉತ್ತರ ಕೊಡುತ್ತಾ, ಬೆಂಗಳೂರು ಮೂಲದವರು ಈ ಹಾಡನ್ನು ಸಂಗ್ರಹ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹೀಗಾಗಿ ಹಂಸಲೇಖ ಅವರ ಕಮೆಂಟ್‌ಗೆ ಕಲಾವಿದ ರಮೇಶ ಮಲ್ಲೇದಿ ಅಭಿಮಾನಿಗಳು ಸಿಟ್ಟಾಗಿದ್ದಾರೆ. ಈ ಮೂಲಕ ಸೋಶಿಯಲ್ ಮೀಡಿಯಾಗಳ ಮೂಲಕ ಹಂಸಲೇಖ ಅವರಿಗೆ ತಕ್ಕ ಉತ್ತರ ಕೊಡುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹಂಸಲೇಖ ವಿರುದ್ದ ಆಕ್ರೋಶ

ನಿಜಕ್ಕೂ ಕೂಡ ಹಾಡು ಬರೆದು, ಹಾಡಿದ ಕಲಾವಿದನಿಗೆ ಈ ರೀತಿಯ ಕಾರ್ಯಕ್ರಮದಲ್ಲಿ ಹೆಸರು ಹೇಳದಿದ್ದರೆ ಅದು ಅವರಿಗೆ ಮಾಡಿದ ದೊಡ್ಡ ಅವಮಾನ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ನನ್ನ ಹೆಸರು ಹೇಳಿದ್ದರೆ ಸಾಕಿತ್ತು. ಅದರ ಬದಲಾಗಿ, ಇನ್ಯಾರದೋ ಹೆಸರು ಹೇಳುವುದು ಎಷ್ಟರ ಮಟ್ಟಿಗೆ ಸರಿ ಅಂತಾರೆ ಕಲಾವಿದ ರಮೇಶ ಮಲ್ಲೇದಿ.

ಕಲಾವಿದ ರಮೇಶ ಮಲ್ಲೇದಿ ಅವರು ಸಾಕಷ್ಟು ಜಾನಪದ ಗೀತೆಗಳನ್ನು ತಾವೇ ರಚನೆ ಮಾಡಿ ಹಾಡಿದ್ದಾರೆ.‌ ಅವರು ಜಾನಪದ ಕಲಾವಿದರಷ್ಟೇ ಅಲ್ಲದೇ ಭಜನಾ ಪದಗಳನ್ನೂ ಸಹ ಹಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಂಸಲೇಖ ಅವರು ಮೂಲ ಗಾಯಕನಿಗೆ ಇನ್ನಾದರೂ ಮನ್ನಣೆ ಕೊಡಬೇಕು ಅನ್ನೋದು ಕಲಾವಿದ ರಮೇಶ್‌ ಅಭಿಮಾನಿಗಳ ಒತ್ತಾಯ.

ABOUT THE AUTHOR

...view details