ಕರ್ನಾಟಕ

karnataka

ETV Bharat / state

ಕೈಮಗ್ಗ ‌ಅಭಿವೃದ್ಧಿ ನಿಗಮದ ಹೊಸ ಅಧ್ಯಕ್ಷರಾಗಿ ಸಿದ್ದು ಸವದಿ ಅಧಿಕಾರ ಸ್ವೀಕಾರ - Handloom Development Corporation

ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ತೇರದಾಳ ವಿಧಾನಸಭಾ ಕ್ಷೇತ್ರದ ಶಾಸಕ ಸಿದ್ದು ಸವದಿ ವಿದ್ಯಾನಗರದ ಪ್ರಧಾನ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು.

Siddu Savidi appointed as President of State Handloom Development Corporation
ಅಧಿಕಾರ ವಹಿಸಿಕೊಂಡ ಶಾಸಕ ಸಿದ್ದು ಸವದಿ

By

Published : Aug 18, 2020, 7:42 PM IST

ಹುಬ್ಬಳ್ಳಿ: ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿರಲಿಲ್ಲ. ಪಕ್ಷದ ಓರ್ವ ನಿಷ್ಟಾವಂತ ಕಾರ್ಯಕರ್ತನಾಗಿ ಸರ್ಕಾರ ನನಗೆ ನೀಡಿದ ಸ್ಥಾನವನ್ನು ಮನಃಪೂರ್ವಕವಾಗಿ ಒಪ್ಪಿಕೊಂಡಿದ್ದೇನೆ ಎಂದು ಕರ್ನಾಟಕ‌ ಕೈಮಗ್ಗ ‌ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷ ಸಿದ್ದು ಸವದಿ ಹೇಳಿದರು.

ಅಧಿಕಾರ ವಹಿಸಿಕೊಂಡ ಶಾಸಕ ಸಿದ್ದು ಸವದಿ

ತಮಗೆ ಒಲಿದು ಬಂದ ಸ್ಥಾನದ ಕುರಿತು ನಗರದಲ್ಲಿ ಇಂದು ಪ್ರತಿಕ್ರಿಯೆ ನೀಡಿದ ಅವರು, ನೇಕಾರ ಸಮುದಾಯಕ್ಕೆ ಅವಕಾಶ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ‌ ಮಾಡಲಾಗಿತ್ತು. ಆದರೆ, ಸಚಿವ ಸ್ಥಾನ ನೀಡುವಂತೆ ಎಂದೂ ಕೇಳಿರಲಿಲ್ಲ. ಆದರೂ, ಮುಖ್ಯಮಂತ್ರಿಗಳು ನನ್ನನ್ನು ನಿಗಮದ ಅಧ್ಯಕ್ಷನನ್ನಾಗಿ ನೇಮಿಸಿದ್ದು ಸಂತೃಪ್ತಿ ತಂದಿದೆ ಎಂದರು.

ನಿಗಮದ ಆರ್ಥಿಕತೆ ಸಂಕಷ್ಟದಲ್ಲಿದೆ. ಇದನ್ನು ಪುನರುಜ್ಜೀವನ ಮಾಡುವ ಹೊಣೆ ನನ್ನ ಮೇಲಿದೆ. ನಿಗಮ 110 ಕೋಟಿ ರೂ ಸಾಲದಲ್ಲಿದೆ. ಶಿಕ್ಷಣ ‌ಇಲಾಖೆ ವಿದ್ಯಾ ವಿಕಾಸ ಯೋಜನೆಯ 20 ಕೋಟಿ ಬಾಕಿ ಹಣ ಬರಬೇಕಿದೆ. ಶಿಕ್ಷಣ ಇಲಾಖೆಯ ಜತೆಗಿನ ಒಪ್ಪಂದವನ್ನು ಐದು ವರ್ಷ ಮುಂದುವರೆಸುವಂತೆ ಸಿಎಂಗೆ ಕೊರುವೆ ಎಂದರು.

ಅಧಿಕಾರ ವಹಿಸಿಕೊಂಡ ಶಾಸಕ ಸಿದ್ದು ಸವದಿ

ಸಿಬ್ಬಂದಿಗೆ ಮೂರು ‌ತಿಂಗಳನಿಂದ ಸಂಬಳವಿಲ್ಲ. ಈ ಹಿಂದೆ ರಾಜ್ಯ, ನಿಗಮಕ್ಕೆ 30 ಕೋಟಿ ‌ಕೊಡುತ್ತಿತ್ತು. ಈಗ 15 ಕೋಟಿ‌ ಕೊಡುತ್ತಿದೆ. ಮೊದಲಿನಂತೆ 30 ಕೋಟಿ ಕೊಡುವಂತೆ ಸಿಎಂಗೆ ಒತ್ತಡ ಹೇರುವೆ ಎಂದರು.

ABOUT THE AUTHOR

...view details