ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ಆರಾಧ್ಯ ದೈವ ಸದ್ಗುರು ಸಿದ್ದಾರೂಢ ಮಠದ ಟ್ರಸ್ಟ್ನಿಂದ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಆಟೋ ಮಾಲೀಕರು ಹಾಗೂ ಚಾಲಕರಿಗೆ ಆಹಾರ ಪದಾರ್ಥಗಳ ಕಿಟ್ಗಳನ್ನು ವಿತರಿಸಲಾಯಿತು.
ಸಿದ್ದಾರೂಢ ಮಠದ ಟ್ರಸ್ಟ್ನಿಂದ ಆಟೋ ಚಾಲಕರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ - ಸಿದ್ದಾರೂಡ ಮಠದ ಟ್ರಸ್ಟ್
ಹುಬ್ಬಳ್ಳಿಯ ಆರಾಧ್ಯ ದೈವ ಸದ್ಗುರು ಸಿದ್ದಾರೂಢ ಮಠದ ಟ್ರಸ್ಟ್ ಆಟೋ ಚಾಲಕರ ನೆರವಿಗೆ ನಿಂತಿದೆ. ಟ್ರಸ್ಟ್ ವತಿಯಿಂದ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಆಟೋ ಮಾಲೀಕರು ಹಾಗೂ ಚಾಲಕರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಿ ಮಾನವೀಯತೆ ಮೆರೆದಿದೆ.

ಸಿದ್ದಾರೂಡ ಮಠದ ಟ್ರಸ್ಟ್ನಿಂದ ಆಟೋ ಚಾಲಕರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ
ಸಿದ್ದಾರೂಢ ಮಠದ ಟ್ರಸ್ಟ್ನಿಂದ ಆಟೋ ಚಾಲಕರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ
ಸಿದ್ದಾರೂಢರ ಜಾತ್ರೆಗೆ ಉಚಿತವಾಗಿ ಆಟೋ ಸೇವೆಯನ್ನು ಸಲ್ಲಿಸುವ ಹುಬ್ಬಳ್ಳಿ ಆಟೋ ಮಾಲೀಕರ ಹಾಗೂ ಚಾಲಕರ ಸಂಘ ಮತ್ತು ಲಕ್ಷ್ಮಣ ಹಿರೇಕೆರೂರ ಆಟೋ ಚಾಲಕರ ಸಂಘದ ಸದಸ್ಯರಿಗೆ ಅಗತ್ಯ ದಿನಸಿ ವಸ್ತುಗಳ ಕಿಟ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶೇಖರಯ್ಯ ಮಠಪತಿ, ಪ್ರಕಾಶ ಉಳ್ಳಾಗಡ್ಡಿ, ಮಹಾವೀರ ಬಿಲಾನ್ ಸೇರಿದಂತೆ ಮತ್ತಿತರರು ಇದ್ದರು.
Last Updated : Apr 30, 2020, 6:21 PM IST