ಹುಬ್ಬಳ್ಳಿ:ನಾನು ಮೊದಲಿಂದಲೂ ಆರ್ಎಸ್ಎಸ್ ವಿರೋಧಿ. ಅವರ ಕೆಲಸವನ್ನು ನಾನು ವಿರೋಧಿಸುತ್ತೇನೆ. ನನ್ನ ಪ್ರಶ್ನೆಗೆ ಅವರು ಯಾರು, ಯಾಕೆ ಉತ್ತರ ನೀಡಲ್ಲ ಅಂದ್ರೆ ಸತ್ಯವನ್ನು ಅಷ್ಟು ಸುಲಭವಾಗಿ ತಳ್ಳಿಹಾಕೋಕೆ ಆಗಲ್ಲ. ಹೀಗಾಗೇ ಆರ್ಎಸ್ಎಸ್ ನವರು ಮಾತನಾಡುತ್ತಿಲ್ಲ. 1920 ರಿಂದ RSS ನಲ್ಲಿ ಸರಸಂಗ ಸಂಚಾಲಕರು ಯಾರಾಗಿದ್ದಾರೆ. ಇಲ್ಲಿಯವರೆಗೂ ಒಂದೇ ಜಾತಿಯವರಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿಂದು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಎಸ್ವೈ ನಾನೂ ಆಕಸ್ಮಿಕವಾಗಿ ಭೇಟಿಯಾಗಿದ್ದೇವೆ. ಇಬ್ಬರ ಮಧ್ಯೆ ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ ಎಂದರು. ರಾಜ್ಯಸಭೆಯಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ. ನಾವು ಅಲ್ಪಸಂಖ್ಯಾತರಿಗೆ ಸೀಟು ನೀಡಿದ್ದೇವೆ. ಕೋಮುವಾದಿ ಪಕ್ಷದ ಅಭ್ಯರ್ಥಿ ಸೋಲಿಸುವುದೇ ನಮ್ಮ ಗುರಿ. ದೇವೇಗೌಡರು ನಿಂತಾಗ ನಾವು ಅಭ್ಯರ್ಥಿ ಹಾಕಲಿಲ್ಲ. ಅವರು ಗೆಲ್ಲುವ ಸಲುವಾಗಿ ಹಾಗೆ ಮಾಡಿದ್ದೆವು. ಈಗ ಅವರು ಕ್ಯಾಂಡಿಡೇಟ್ ಹಾಕಬಾರದಿತ್ತು. ಕೋಮುವಾದಿ ಬಿಜೆಪಿಯನ್ನು ಸೋಲಿಸುವುದಕ್ಕೆ ನಮ್ಮನ್ನು ಬೆಂಬಲಿಸಬೇಕಿತ್ತು ಎಂದು ಹೇಳಿದರು.