ಕರ್ನಾಟಕ

karnataka

ETV Bharat / state

ಅವರೊಳ್ಳಿ ಮುಷ್ಟಿ ಬೀಗಕ್ಕೆ ಶ್ರಮಿಕ ರತ್ನ ಪ್ರಶಸ್ತಿ - Dharwad Latest News

ಅವರೊಳ್ಳಿ ಮುಷ್ಟಿ ಬೀಗದಲ್ಲಿ ವಿವಿಧ ಆವಿಷ್ಕಾರಗಳನ್ನು ಮಾಡಿರುವ ವೀರಭದ್ರ ಕಮ್ಮಾರ ಹಾಗೂ ಕನ್ನಡಪ್ರಭ ವರದಿಗಾರ ಬಸವರಾಜ ಹಿರೇಮಠ ಅವರಿಗೆ ಶ್ರಮಿಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Dharwad
ವೀರಭದ್ರ ಕಮ್ಮಾರ ಹಾಗೂ ಕನ್ನಡಪ್ರಭ ವರದಿಗಾರ ಬಸವರಾಜ ಹಿರೇಮಠ ಅವರಿಗೆ ಶ್ರಮಿಕ ರತ್ನ ಪ್ರಶಸ್ತಿ

By

Published : Dec 3, 2020, 6:32 PM IST

ಧಾರವಾಡ: ದೇಸಿ ಬೀಗಗಳ ಕ್ಷೇತ್ರದಲ್ಲಿ ಅವರೊಳ್ಳಿ ಬ್ರ್ಯಾಂಡ್ ಎಂಬ ಖ್ಯಾತಿ ಪಡೆದುಕೊಂಡಿರುವ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಅವರೊಳ್ಳಿಯ ಕಮ್ಮಾರ ಬೀಗಕ್ಕೆ ಅದರದ್ದೇ ಆದ ಇತಿಹಾಸವಿದೆ. ಈ ಬೀಗದ ಪ್ರವೀಣತೆಗೆ ಇದೀಗ ಶ್ರಮಿಕ ರತ್ನ ಪ್ರಶಸ್ತಿ ಲಭಿಸಿದೆ.

ವೀರಭದ್ರ ಕಮ್ಮಾರ ಹಾಗೂ ಕನ್ನಡಪ್ರಭ ವರದಿಗಾರ ಬಸವರಾಜ ಹಿರೇಮಠ ಅವರಿಗೆ ಶ್ರಮಿಕ ರತ್ನ ಪ್ರಶಸ್ತಿ ..

ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕ, ಹುಬ್ಬಳ್ಳಿ ತಾಲೂಕು ಘಟಕ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿಯಿಂದ ಹಿರಿಯ ಶಿಕ್ಷಕಿ, ಸಮಾಜ ಸೇವಕಿ ಲೂಸಿ ಸಾಲ್ಡಾನ್ ಅವದ ದತ್ತಿ ದಾನದ ಅಡಿ ಶ್ರಮಿಕ ರತ್ನ ಪ್ರಶಸ್ತಿ ನೀಡಲಾಗಿದೆ. ಈ ಪ್ರಶಸ್ತಿಯನ್ನು ಅವರೊಳ್ಳಿ ಮುಷ್ಟಿ ಬೀಗದಲ್ಲಿ ವಿವಿಧ ಆವಿಷ್ಕಾರಗಳನ್ನು ಮಾಡಿರುವ ವೀರಭದ್ರ ಕಮ್ಮಾರ ಹಾಗೂ ಕನ್ನಡಪ್ರಭ ವರದಿಗಾರ ಬಸವರಾಜ ಹಿರೇಮಠ ಅವರಿಗೆ ಪ್ರದಾನ ಮಾಡಲಾಯಿತು.

ಧಾರವಾಡ ಶಿಕ್ಷಕರ ಭವನದಲ್ಲಿ ನಡೆದ ಸಮಾರಂಭದಲ್ಲಿ ಧಾರವಾಡ ಡಿಡಿಪಿಐ ಮೋಹನಕುಮಾರ ಹಂಚಾಟೆ, ಧಾರವಾಡ ಜಿಲ್ಲಾ ಡಿವೈಪಿಸಿ ಪ್ರಮೋದ ಮಹಾಲೆ, ಕ್ಷೇತ್ರ ಸಮನ್ವಯ ಅಧಿಕಾರಿ ಎನ್. ಎಸ್. ಧಪೇದಾರ, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ABOUT THE AUTHOR

...view details