ಕರ್ನಾಟಕ

karnataka

ETV Bharat / state

ಧಾರವಾಡದಲ್ಲಿ ಸದ್ದು ಮಾಡಿದ ಶೂಟೌಟ್​: ಕಾರಲ್ಲಿ ಬರುತ್ತಿದ್ದ ವ್ಯಕ್ತಿಗೆ ಗುಂಡು ಹಾರಿಸಿ ಕೊಲೆ! - ಗುಂಡು ಹಾರಿಸಿ ಕೊಲೆ

ಇತ್ತೀಚೆಗಷ್ಟೇ ಹುಬ್ಬಳ್ಳಿಯಲ್ಲಿ ನಡೆದಿದ್ದ ಶೂಟೌಟ್​ ಪ್ರಕರಣದಿಂದ ಜನ ಬೆಚ್ಚಿಬಿದ್ದಿದ್ದರು. ಇದೀಗ ವಿದ್ಯಾ ಕಾಶಿ ಧಾರವಾಡದಲ್ಲೂ ಅಂತಹದ್ದೇ ಮತ್ತೊಂದು ಪ್ರಕರಣ ಸದ್ದು ಮಾಡಿದೆ. ನಗರದ ಹೊರವಲಯದ ನಿಗದಿ ರಸ್ತೆ ಬಳಿ ವ್ಯಕ್ತಿವೋರ್ವನನ್ನು ಗುಂಡು ಹಾರಿಸಿ ಕೊಲೆ ಮಾಡಲಾಗಿದೆ.

ಕೊಲೆ

By

Published : Sep 25, 2019, 11:52 AM IST

Updated : Sep 25, 2019, 2:30 PM IST

ಧಾರವಾಡ: ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿಯಿಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ವಿದ್ಯಾ ಕಾಶಿಯ ಜನರು ಬೆಚ್ಚಿಬಿದ್ದಿದ್ದಾರೆ.

ದಾಂಡೇಲಿಯಿಂದ ಧಾರವಾಡಕ್ಕೆ ಬರುತ್ತಿದ್ದ ದಾಂಡೇಲಿ ಮೂಲದ ಶ್ಯಾಮ್(40) ಎಂಬುವವರ ಮೇಲೆ ಈ ಗುಂಡಿನ ದಾಳಿ ನಡೆದಿದೆ. ಬೈಕ್ ಮೇಲೆ ಬಂದಿದ್ದ ಮೂವರು ಅಪರಿಚಿತರು ಕಾರಿನಲ್ಲಿ ಬರುತ್ತಿದ್ದ ಶ್ಯಾಮ್​ ಮೇಲೆ ಏಕಾಏಕಿ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ.

ಕಾರಲ್ಲಿ ಬರುತ್ತಿದ್ದ ವ್ಯಕ್ತಿಗೆ ಗುಂಡು ಹಾರಿಸಿ ಕೊಲೆ

ಶೂಟ್​ ಮಾಡಿದ ದುಷ್ಕರ್ಮಿಗಳು ಪಲ್ಸರ್ ಬೈಕ್ ಮೇಲೆ ಬಂದಿದ್ದರು ಎಂದು ಕಾರು ಚಾಲಕ ತಿಳಿಸಿದ್ದಾರೆ. ಇನ್ನು ಶ್ಯಾಮ್ ಮೃತದೇಹವನ್ನು ಜಿಲ್ಲಾಸ್ಪತ್ರೆಯಲ್ಲಿ ಇರಿಸಲಾಗಿದ್ದು, ಧಾರವಾಡ ಗ್ರಾಮೀಣ ಠಾಣೆ ಹಾಗೂ ಉಪನಗರ ಪೊಲೀಸ್ ಠಾಣೆ ಪೊಲೀಸರು ಕಾರು ಚಾಲಕನನ್ನು ವಿಚಾರಣೆಗೊಳಪಡಿಸಿದ್ದಾರೆ.

ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Last Updated : Sep 25, 2019, 2:30 PM IST

ABOUT THE AUTHOR

...view details