ಹುಬ್ಬಳ್ಳಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ನಗರದಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತಿ ಅಂಗವಾಗಿ ಏ.26ರಂದು ನಡೆಯಬೇಕಿದ್ದ ಶ್ರೀ ಬಸವ, ಶ್ರೀ ಶಂಕರ, ಶ್ರೀ ಶಿವಾಜಿ ಶೋಭಾ ಯಾತ್ರೆಯನ್ನು ರದ್ದುಪಡಿಸಲಾಗಿದೆ.
ಲಾಕ್‌ಡೌನ್ ಎಫೆಕ್ಟ್: ಹುಬ್ಬಳ್ಳಿಯಲ್ಲಿ ನಡೆಯಬೇಕಿದ್ದ ಶೋಭಾ ಯಾತ್ರೆ ರದ್ದು - ಹುಬ್ಬಳ್ಳಿ ಲಾಕ್‌ಡೌನ್ ಹಿನ್ನೆಲೆ ಶೋಭಾ ಯಾತ್ರೆ ರದ್ದು
ವೀರಶೈವ ಸಮಾಜ, ಬ್ರಾಹ್ಮಣ ಸಮಾಜ, ಮರಾಠ ಸಮಾಜ ಸಂಯುಕ್ತ ಆಶ್ರಯದಲ್ಲಿ ಆಚರಿಸಲ್ಪಡುವ ಈ ಶೋಭಾ ಯಾತ್ರೆಯನ್ನು ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿದೆ.

ಶೋಭಾ ಯಾತ್ರೆ ರದ್ದು
ನಗರದ ವೀರಶೈವ ಸಮಾಜ, ಬ್ರಾಹ್ಮಣ ಸಮಾಜ, ಮರಾಠ ಸಮಾಜ ಸಂಯುಕ್ತ ಆಶ್ರಯದಲ್ಲಿ ಆಚರಿಸಲ್ಪಡುವ ಈ ಶೋಭಾ ಯಾತ್ರೆಯನ್ನು ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿದೆ.
ಇನ್ನು, ಭಕ್ತರು ತಮ್ಮ ಮನೆಗಳಲ್ಲಿಯೇ ಸರಳವಾಗಿ ಬಸವ ಜಯಂತಿ ಆಚರಣೆ ಮತ್ತು ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಪ್ರಾರ್ಥನೆ ಮಾಡಬೇಕು ಎಂದು ವಿ.ವಿ. ಸೋಗಿ, ನರೇಂದ್ರ ಕುಲಕರ್ಣಿ, ಪಿ ಗಾಯಕ್ವಾಡ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.