ಕರ್ನಾಟಕ

karnataka

ETV Bharat / state

ಶಿವರಾಮ ಹೆಬ್ಬಾರ ಕಾರು ಅಪಘಾತ: ಸಿಎಂ ಭೇಟಿ ವೇಳೆ ಅವಘಡ! - ಶಿವರಾಮ್ ಹೆಬ್ಬಾರ್,

ಸಿಎಂ ಬಸವರಾಜ ಬೊಮ್ಮಾಯಿ ಬೆಂಗಾವಲು ಕಾರ್ ಮತ್ತು ಮಾಜಿ ಸಚಿವ ಶಿವರಾಮ ಹೆಬ್ಬಾರ ಅವರ ಕಾರುಗಳ ಮಧ್ಯೆ ಅಪಘಾತ ಸಂಭವಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

Shivaram Hebbar car accident, Shivaram Hebbar car accident in Hubli, Hubli accident news, Shivaram Hebbar, Shivaram Hebbar news, ಶಿವರಾಮ್ ಹೆಬ್ಬಾರ್ ಕಾರು ಅಪಘಾತ, ಹುಬ್ಬಳ್ಳಿಯಲ್ಲಿ ಶಿವರಾಮ್ ಹೆಬ್ಬಾರ್ ಕಾರು ಅಪಘಾತ, ಹುಬ್ಬಳ್ಳಿ ಅಪಘಾತ ಸುದ್ದಿ, ಶಿವರಾಮ್ ಹೆಬ್ಬಾರ್, ಶಿವರಾಮ್​ ಹೆಬ್ಬರ್​ ಸುದ್ದಿ,
ಶಿವರಾಮ್ ಹೆಬ್ಬಾರ್ ಕಾರು ಅಪಘಾತ

By

Published : Jul 29, 2021, 12:19 PM IST

ಹುಬ್ಬಳ್ಳಿ: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಾವಲು ಕಾರಿಗೆ ಮಾಜಿ ಸಚಿವ ಶಿವರಾಮ ಹೆಬ್ಬಾರ ಅವರ ಕಾರು​ ಗುದ್ದಿರುವ ಘಟನೆ ನಗರದ ವಿಮಾನ ನಿಲ್ದಾಣದ ಬಳಿ ನಡೆದಿದೆ.

ನೂತನ ಸಿಎಂ ಬಸವರಾಜ ಬೊಮ್ಮಾಯಿ ವಾಣಿಜ್ಯನಗರಿ ಹುಬ್ಬಳ್ಳಿಗೆ ಭೇಟಿ ನೀಡಿದ್ದಾರೆ. ಸಿಎಂ ಮತ್ತು ಮಾಜಿ ಸಚಿವರು ಕಾರಿನಲ್ಲಿ ತೆರಳುತ್ತಿದ್ದರು. ಮಾಜಿ ಸಚಿವ ಹೆಬ್ಬಾರ​ ಕಾರು ಸಿಎಂ ವಾಹನವನ್ನು ಹಿಂಬಾಲಿಸುತ್ತಿತ್ತು. ಹುಬ್ಬಳ್ಳಿ ಏರ್​ಪೋರ್ಟ್​ನಿಂದ ಮುಖ್ಯಮಂತ್ರಿ ಬೊಮ್ಮಾಯಿ ಹೊರ ಹೋಗುತ್ತಿದ್ದಾಗ ಕಾರ್​ಗಳ ಮಧ್ಯೆ ಅಪಘಾತ ಸಂಭವಿಸಿದೆ.

ಆದರೆ ಮಾಜಿ ಸಚಿವ ಶಿವರಾಮ ಹೆಬ್ಬಾರ ಅವರು ಸಿಎಂ ಕಾರಿನಲ್ಲಿದ್ದ ಕಾರಣ ಅವರಿಗೆ ಯಾವುದೇ ಗಾಯಗಳಾಗಿಲ್ಲ. ಅಲ್ಲದೆ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಿಎಂ ಕಾರು ಹಿಂಬಾಲಿಸುವ ಭರದಲ್ಲಿ ಈ ಆಪಘಾತ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ABOUT THE AUTHOR

...view details