ಹುಬ್ಬಳ್ಳಿ: ನಡುರಸ್ತೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಕಾರು ನಿಲ್ಲಿಸಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಕುಂದಗೋಳದಲ್ಲಿ ನಡೆದಿದೆ.
ಸತೀಶ್ ಜಾರಕಿಹೊಳಿ ಕಾರು ನಿಲ್ಲಿಸಿ ಶಿವಾನಂದ ಬೆಂತೂರು ಅಭಿಮಾನಿಗಳ ಆಕ್ರೋಶ - ಅಭಿಮಾನಿ
ಕುಂದಗೋಳದಲ್ಲಿ ಸಭೆ ಮುಗಿಸಿ ಬರುವಾಗ ಶಿವಾನಂದ ಬೆಂತೂರು ಅವರ ಅಭಿಮಾನಿಗಳು ಸಚಿವರ ಮುಂದೆಯೇ ಚುನಾವಣೆ ಹೇಗೆ ಮಾಡುತ್ತೀರಾ, ನಾವೂ ನೋಡುತ್ತೇವೆ ಎಂದು ಸವಾಲು ಹಾಕಿದರು.
ಬೆಂತೂರು ಅಭಿಮಾನಿಗಳ ಆಕ್ರೋಶ
ಕುಂದಗೋಳದಲ್ಲಿ ಸಭೆ ಮುಗಿಸಿ ಬರುವಾಗ ಕಾಂಗ್ರೆಸ್ ಮುಖಂಡ ಶಿವಾನಂದ ಬೆಂತೂರು ಅವರ ಅಭಿಮಾನಿಗಳು ಸಚಿವರ ಮುಂದೆಯೇ ಚುನಾವಣೆ ಹೇಗೆ ಮಾಡುತ್ತೀರಾ ನಾವೂ ನೋಡುತ್ತೇವೆ ಎಂದು ಸವಾಲು ಹಾಕಿದರು.
ಸಿ ಎಸ್ ಶಿವಳ್ಳಿ ಪತ್ನಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದಕ್ಕೆ ಅಸಮಾಧಾನ ಹೊರಹಾಕಿದ ಬೆಂತೂರು ಅಭಿಮಾನಿಗಳು, ಗುಪ್ತ ಸಭೆ ಮುಗಿಸಿ ಹೊರ ಹೋಗುವಾಗ ಸಚಿವರ ವಾಹನ ನಿಲ್ಲಿಸಿ ಕಿಡಿಕಾರಿದರು. ಸಚಿವಸತೀಶ್ ಜಾರಕಿಹೊಳಿ ಎಲ್ಲವೂ ಸರಿಹೋಗಿದೆ ಅಂತಾ ಹೇಳಿದ ಮೇಲೂ ಶಿವಾನಂದ ಬೆಂತೂರು ಬೆಂಬಲಿಗರ ಆಕ್ರೋಶ ತಣ್ಣಗಾಗಲಿಲ್ಲ.