ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕಲುಕರ್ಣಿ ಅವರು ಮಾತನಾಡಿದರು ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಪ್ರತಿ ಬಾರಿ ಚುನಾವಣೆಗೆ ಧಾರವಾಡ ಜಿಲ್ಲೆಯ ಶಿವಳ್ಳಿ ಗ್ರಾಮದ ದುರ್ಗಾದೇವಿಗೆ ಪೂಜೆ ಸಲ್ಲಿಸಿಯೇ ಪ್ರಚಾರ ಆರಂಭ ಮಾಡ್ತಿದ್ರು. ಅದೇ ರೀತಿ ನಾವು ಕೂಡಾ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದ್ದೇವೆ ಎಂದು ಪತ್ನಿ ಶಿವಲೀಲಾ ಹೇಳಿದ್ದಾರೆ.
ತಾಲೂಕಿನ ಶಿವಳ್ಳಿ ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿಂದು ಪೂಜೆ ಸಲ್ಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿನಯ ಕುಲಕರ್ಣಿ ಅವರು ಜಿಲ್ಲೆ ಪ್ರವೇಶಿಸುವ ಬಗ್ಗೆ ಕಾನೂನು ಹೋರಾಟ ಮಾಡುತ್ತಿದ್ದೇವೆ. ಪಾರ್ಟಿಯವರು ಕೂಡ ಅವರ ಮೇಲೆ ನಂಬಿಕೆ ಇಟ್ಟಿದ್ದಾರೆ. ಕ್ಷೇತ್ರದ ಜನರಿಗೆ ಅವರು ಅಭ್ಯರ್ಥಿಯಾಗಿ ಬರಬೇಕೆಂಬ ಇಚ್ಛೆ ಇತ್ತು. ಎಲ್ಲವೂ ಅಂದುಕೊಂಡಂತೆಯೇ ಸಾಹೇಬ್ರಿಗೆ ಟಿಕೆಟ್ ಸಿಕ್ಕಿದೆ ಎಂದರು.
ಹೀಗಾಗಿ ಅವರೇ ಅಭ್ಯರ್ಥಿಯಾಗಿದ್ದಾರೆ. ವಿನಯ್ ಅವರನ್ನು ರಾಜಕೀಯವಾಗಿ ಹತ್ತಿಕ್ಕಲು ಪ್ರಯತ್ನ ನಡೆದಿತ್ತು. ಕ್ಷೇತ್ರದ ಜನ ಹಾಗೂ ಕುಟುಂಬದವರು ಅವರು ಕ್ಷೇತ್ರದ ಹೊರಗಿದ್ದರೂ ಚುನಾವಣೆಗೆ ತಯಾರಿ ಮಾಡಿದ್ದೇವೆ. ಕಾರ್ಯಕರ್ತರು ಒಂದೇ ನಿರ್ಧಾರ ತೆಗೆದುಕೊಂಡಿದ್ದಾರೆ. ಕಾನೂನಿನ ಮೇಲೆ ನಂಬಿಕೆ ಇದೆ. ಅವರು ಜಿಲ್ಲೆಗೆ ಬರ್ತಾರೆ ಎಂದು ಹೇಳಿದರು. ಇದೇ ವೇಳೆ, ಅವರು ಬಂದು ನಾಮಪತ್ರ ಸಲ್ಲಿಸಿ ಹೋದರೂ ನಾವು ಚುನಾವಣೆ ಮಾಡ್ತೇವೆ. ಜಿಲ್ಲೆಗೆ ಬರುವುದಕ್ಕೆ ಕೋರ್ಟ್ಗೆ ಅರ್ಜಿ ಹಾಕಿದ್ದೇವೆ. ಮುಂದಿನ ಪ್ರಕ್ರಿಯೆ ನಡೆದಿದೆ ಎಂದರು.
ಕುಲಕರ್ಣಿ ಶಿಗ್ಗಾಂವಿ ಸ್ಪರ್ಧೆ ವಿಚಾರ:ಈ ಹಿಂದೆಸಚಿವ ವಿನಯ್ ಕುಲಕರ್ಣಿ ಶಿಗ್ಗಾಂವಿಯಿಂದ ಸ್ಪರ್ಧಿಸಲಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ವಿರುದ್ಧ ಶಿವಲೀಲಾ ಕುಲಕರ್ಣಿ (ಮಾರ್ಚ್ 30-2023)ರಂದು ಸಿಡಿಮಿಡಿಗೊಂಡಿದ್ದರು. ಹೈಕಮಾಂಡ್ ಹೇಳಿಲ್ಲ. ವಿನಯ್ ಕುಲಕರ್ಣಿ ಅವರೂ ಹೇಳಿಲ್ಲ, ಎಲ್ಲವನ್ನೂ ಮಾಧ್ಯಮಗಳೇ ಸೃಷ್ಟಿ ಮಾಡುತ್ತಿವೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ :ವಿನಯ್ ಕುಲಕರ್ಣಿ ಶಿಗ್ಗಾಂವಿ ಸ್ಪರ್ಧೆ ವಿಚಾರ: ಪತ್ನಿ ಶಿವಲೀಲಾ ಕುಲಕರ್ಣಿ ಹೇಳಿದ್ದೇನು?