ಹುಬ್ಬಳ್ಳಿ: ಪಾಲಿಕೆ ಆವರಣದಲ್ಲಿದ್ದ ಶಿವಾಜಿ ಮೂರ್ತಿ ಬಿದ್ದಿರುವುದರ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ ಹೇಳಿದ್ದಾರೆ.
ಶಿವಾಜಿ ಮೂರ್ತಿ ಕುಸಿತ ಪ್ರಕರಣ: ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮದ ಭರವಸೆ ನೀಡಿದ ಪಾಲಿಕೆ ಆಯುಕ್ತ - Shivaji Murthy collapse case
ಮಹಾನಗರ ಪಾಲಿಕೆ ಆವರಣದಲ್ಲಿರುವ ಶಿವಾಜಿ ಮೂರ್ತಿ ನೆಲಕ್ಕೆ ಉರುಳಿದ ಹಿನ್ನೆಲೆ ಮಹಾನಗರ ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ ಸ್ಥಳಕ್ಕೆ ಭೇಟಿ ನೀಡಿ, ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವು ಎಂದರು.
ಶಿವಾಜಿಮೂರ್ತಿ ಕುಸಿತ
ಮಹಾನಗರ ಪಾಲಿಕೆ ಆವರಣದಲ್ಲಿರುವ ಶಿವಾಜಿ ಮೂರ್ತಿ ನೆಲಕ್ಕೆ ಉರುಳಿದ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಮಂಗಳವಾರ ಆಗಿದ್ದರಿಂದ ನಾನು ಧಾರವಾಡದಲ್ಲಿ ಇದ್ದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ್ದೇನೆ. ಶಿವಾಜಿ ಕಾಮಗಾರಿ ಕುರಿತು ಕೂಲಂಕಷವಾಗಿ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಅಲ್ಲದೇ ನೂತನ ಶಿವಾಜಿ ಮೂರ್ತಿ ಪ್ರತಿಷ್ಠಾಪನೆಗೆ ಕಾರ್ಯ ಪ್ರವೃತ್ತರಾಗುವ ಭರವಸೆ ನೀಡಿದರು.
ಓದಿ:ಮಾಸ್ಕ್ ಹಾಕಿಲ್ಲ ಎಂದು ಅಪರಾಧಿಯಂತೆ ಕೊಂಡೊಯ್ದ ಪೊಲೀಸರು.. ವಿಡಿಯೋ ವೈರಲ್