ಕರ್ನಾಟಕ

karnataka

ETV Bharat / state

15 ಗ್ರಾಮ ಪಂಚಾಯಿತಿಗಳಿಗೆ ಘನತ್ಯಾಜ್ಯ ನಿರ್ವಹಣಾ ವಾಹನ ಹಸ್ತಾಂತರಿಸಿದ ಶೆಟ್ಟರ್​ - District Panchayat President Vijayalakshmi Patil

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಧಾರವಾಡದ 15 ಗ್ರಾ.ಪಂಗಳಿಗೆ ಘನತ್ಯಾಜ್ಯ ನಿರ್ವಹಣಾ ವಾಹನಗಳನ್ನು ಹಾಗೂ 20 ಗ್ರಾ.ಪಂ.ಮಟ್ಟದ ಸಂಜೀವಿನಿ ಸಮುದಾಯ ಬಂಡವಾಳ ನಿಧಿ ವಿತರಿಸಿದರು.

Shetter handed over solid waste management vehicle to 15 gram panchayats
15 ಗ್ರಾಮ ಪಂಚಾಯಿತಿಗಳಿಗೆ ಘನ ತ್ಯಾಜ್ಯ ನಿರ್ವಹಣಾ ವಾಹನ ಹಸ್ತಾಂತರಿಸಿದ ಶೆಟ್ಟರ್​

By

Published : Jun 8, 2020, 10:42 PM IST

ಧಾರವಾಡ:ಧಾರವಾಡ ಜಿಲ್ಲಾ ಪಂಚಾಯತ್ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರು 15 ಗ್ರಾ.ಪಂ.ಗಳಿಗೆ ಘನತ್ಯಾಜ್ಯ ನಿರ್ವಹಣಾ ವಾಹನಗಳನ್ನು ಹಾಗೂ 20 ಗ್ರಾ.ಪಂ.ಮಟ್ಟದ ಸಂಜೀವಿನಿ ಸಮುದಾಯ ಬಂಡವಾಳ ನಿಧಿ ವಿತರಣೆ ಮಾಡಿದರು.

ಗ್ರಾಮೀಣ ಅಭಿವೃದ್ಧಿ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ಶಾಸಕ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ್ಯ ವಿಜಯಲಕ್ಷ್ಮಿ ಪಾಟೀಲ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಿವಾನಂದ ಕರಿಗಾರ, ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಬಿ.ಸಿ ಸತೀಶ, ಮಹಾನಗರ ಪಾಲಿಕೆ ಆಯುಕ್ತ ಡಾ, ಸುರೇಶ ಇಟ್ನಾಳ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಬಿ.ಎಸ್. ಮೂಗನೂರಮಠ, ಜನಪ್ರತಿನಿಧಿಗಳು ಭಾಗವಹಿಸಿದ್ದರು.

ABOUT THE AUTHOR

...view details