ಹುಬ್ಬಳ್ಳಿ : ಶಾಮಿಯಾನ ಸಪ್ಲೈಯರ್ಸ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಆಹಾರ ಸಾಮಗ್ರಿ ವಿತರಣಾ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಅಸೋಸಿಯೇಷನ್ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ಈ ಕಾರ್ಯಕ್ರಮಕ್ಕೆ ಅನುಮತಿ ನೀಡಿದಕ್ಕೆ ಕಾಂಗ್ರೆಸ್ ಪಕ್ಷ ಆಕ್ಷೇಪ ವ್ಯಕ್ತಪಡಿಸಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಶ್ರೀನಿವಾಸ ಗಾರ್ಡ್ನ್ ನಲ್ಲಿ 500 ಜನ ಶಾಮಿಯಾನ ಸಪ್ಲೈಯರ್ಸ್ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆಗೆ ಜಿಲ್ಲಾಡಳಿತ ಅನುಮತಿ ನೀಡಿದೆ.
ಶಾಮಿಯಾನ ಸಪ್ಲೈಯರ್ಸ್ ಅಸೋಸಿಯೇಷನ್ ಪ್ರಕಟಣೆ ಆದರೆ ನಾಲ್ಕು ಲಕ್ಷ ಮುಸ್ಲಿಂ ಸಮುದಾಯದ ಜನರನ್ನು ಪ್ರತಿನಿಧಿಸುವ ಹುಬ್ಬಳ್ಳಿಯ ಅಂಜುಮನ್ ಇಸ್ಲಾಂ ಸಂಸ್ಥೆಯ ನಿಯೋಗಕ್ಕೆ ರಂಜಾನ್ ಹಬ್ಬದ ಪ್ರಯುಕ್ತ ಈದ್ಗಾ ಮೈದಾನಗಳಲ್ಲಿ ಕೇವಲ ಐದು ಜನರಿಗೆ ಮಾತ್ರ ಈದ್-ಉಲ್-ಫೀತರ್ ನಮಾಜ್ ಮಾಡಲು ಅನುಮತಿಯನ್ನು ನೀಡಲು ನಿರಾಕರಿಸಿದ್ದಾರೆ ಎಂದು ಆರೋಪಿಸಿದ್ದರು.
ಈ ಕುರಿತುಧಾರವಾಡ ಜಿಲ್ಲಾಡಳಿತ ಸಭೆ ಸಮಾರಂಭಗಳಿಗೆ ಅನುಮತಿ ನೀಡಲು ತಾರತಮ್ಯ ಆರೋಪ ಎಂಬ ಸುದ್ದಿಯನ್ನು "ಈಟಿವಿ ಭಾರತ" ಪ್ರಕಟಿಸಿತ್ತು. ವಿವಾದ ಸೃಷ್ಟಿಯಾಗುವದನ್ನು ಅರಿತ ಅಸೋಸಿಯೇಷನ್, ಕಾರ್ಯಕ್ರಮವನ್ನೇ ಮುಂದೂಡಿದೆ.