ಕರ್ನಾಟಕ

karnataka

ETV Bharat / state

ನಾಲ್ಕು ತಿಂಗಳು ಪೂರೈಸಿದ ಶಕ್ತಿ ಯೋಜನೆ: ವಾಯವ್ಯ ಸಾರಿಗೆ ಸಂಸ್ಥೆಯ ಬಸ್​​ಗಳಲ್ಲಿ 17.47 ಕೋಟಿ ಮಹಿಳೆಯರಿಂದ ಉಚಿತ ಪ್ರಯಾಣ - ಮಹಿಳಾ ಸಬಲೀಕರಣ

ನಾಲ್ಕು ತಿಂಗಳುಗಳಲ್ಲಿ ಶಕ್ತಿ ಯೋಜನೆಯಯಲ್ಲಿ 17.47 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, ಟಿಕೆಟ್ ಮೌಲ್ಯ ರೂ. 441.29 ಕೋಟಿಗಳಾಗಿದೆ.

Shakthi project completed four months
ನಾಲ್ಕು ತಿಂಗಳು ಪೂರೈಸಿದ ಶಕ್ತಿ ಯೋಜನೆ

By ETV Bharat Karnataka Team

Published : Oct 12, 2023, 2:04 PM IST

ಹುಬ್ಬಳ್ಳಿ:ಮಹಿಳೆಯರಿಗೆ ಸರ್ಕಾರಿ ಬಸ್​​​ಗಳಲ್ಲಿ ಉಚಿತ ಪ್ರಯಾಣದ 'ಶಕ್ತಿ' ಯೋಜನೆ ನಾಲ್ಕು ತಿಂಗಳು ಪೂರೈಸಿದೆ. ವಾ. ಕ. ರ. ಸಾ. ಸಂಸ್ಥೆಯ ಬಸ್​ ಗಳಲ್ಲಿ ಒಟ್ಟು 17.47 ಕೋಟಿ ಮಹಿಳೆಯರು ಉಚಿತ ಸಂಚಾರ ಮಾಡಿದ್ದು, ಪ್ರಯಾಣದ ಟಿಕೆಟ್ ಮೌಲ್ಯ ರೂ. 441.29 ಕೋಟಿ ಗಳಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ಮಾಹಿತಿ ನೀಡಿದ್ದಾರೆ.

ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದಿಂದ ಆರಂಭಿಸಲಾಗಿರುವ ಕರ್ನಾಟಕದ ಮಹಿಳೆಯರಿಗೆ ಸರ್ಕಾರಿ ಬಸ್ಸಿನಲ್ಲಿ ರಾಜ್ಯದೊಳಗೆ ಉಚಿತ ಪ್ರಯಾಣದ 'ಶಕ್ತಿ' ಯೋಜನೆಗೆ ನಿರೀಕ್ಷೆಗೂ ಮೀರಿ ಭಾರಿ ಸ್ಪಂದನೆ ವ್ಯಕ್ತವಾಗಿದೆ. ಸಾರ್ವಜನಿಕರ ಸಹಭಾಗಿತ್ವ ಹಾಗೂ ಸಹಕಾರದಿಂದ ಯಶಸ್ವಿಯಾಗಿ ಮುಂದುವರೆದಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಆರು ಜಿಲ್ಲೆಗಳ 9 ಸಾರಿಗೆ ವಿಭಾಗಗಳ ಬಸ್ಸುಗಳಲ್ಲಿ ಜೂನ್ 11ರಿಂದ ಸಪ್ಟೆಂಬರ್ 10 ರವರೆಗೆ ನಾಲ್ಕು ತಿಂಗಳ ಅವಧಿಯಲ್ಲಿ ಒಟ್ಟು 17.47 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್​ಗಳ ಮೌಲ್ಯ ರೂ.441.29 ಕೋಟಿಗಳಾಗಿವೆ.

ತಿಂಗಳು ವಾರು ಉಚಿತ ಪ್ರಯಾಣ ಮಾಡಿದ ಮಹಿಳೆಯರು ಹಾಗೂ ಪ್ರಯಾಣದ ಟಿಕೆಟ್ ಮೌಲ್ಯ:

ತಿಂಗಳು ಮಹಿಳೆಯರು (ಕೋಟಿಗಳಲ್ಲಿ) ಪ್ರಯಾಣದ ಟಿಕೆಟ್ ಮೌಲ್ಯ
ಜೂನ್ 11ರಿಂದ 30 2.55 ಕೋಟಿ 65.15 ಕೋಟಿ ರೂ.
ಜುಲೈ 1ರಿಂದ 31 4.47 ಕೋಟಿ 111.78 ಕೋಟಿ ರೂ.
ಆಗಸ್ಟ್1ರಿಂದ 31 4.61 ಕೋಟಿ 115.42 ಕೋಟಿ ರೂ.
ಸಪ್ಟೆಂವರ್ 1ರಿಂದ 30 4.42 ಕೋಟಿ 112.80 ಕೋಟಿ ರೂ.
ಅಕ್ಟೋಬರ್ 1ರಿಂದ10 1.40 ಕೋಟಿ 36.14 ಕೋಟಿ ರೂ.

ಸಂಸ್ಥೆಯ ವ್ಯಾಪ್ತಿಯ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ವ್ಯಾಪ್ತಿಯ ಆರು ಜಿಲ್ಲೆಗಳಲ್ಲಿನ ಒಂಬತ್ತು ವಿಭಾಗಗಳ ಬಸ್ಸುಗಳಲ್ಲಿ ಉಚಿತ ಪ್ರಯಾಣ ಮಾಡಿದ ಮಹಿಳೆಯರು ಹಾಗು ಪ್ರಯಾಣದ ಟಿಕೆಟ್ ಮೌಲ್ಯದ ಮಾಹಿತಿ.

ವಿಭಾಗ ಮಹಿಳೆಯರು(ಕೋಟಿಗಳಲ್ಲಿ) ಪ್ರಯಾಣದ ಟಿಕೆಟ್ ಮೌಲ್ಯ
ಹು- ಧಾ ನಗರ ಸಾರಿಗೆ 2.33 ಕೋಟಿ 28.43 ಕೋಟಿ ರೂ.
ಹುಬ್ಬಳ್ಳಿ ಗ್ರಾಮಾಂತರ 1.17 ಕೋಟಿ 41.96 ಕೋಟಿ ರೂ.
ಧಾರವಾಡ 1.40 ಕೋಟಿ 37.63 ಕೋಟಿ ರೂ.
ಬೆಳಗಾವಿ 2.70 ಕೋಟಿ 55.46 ಕೋಟಿ ರೂ.
ಚಿಕ್ಕೋಡಿ 2.40 ಕೋಟಿ 60.04 ಕೋಟಿ ರೂ.
ಬಾಗಲಕೋಟೆ 2.19 ಕೋಟಿ 68.47 ಕೋಟಿ ರೂ.
ಗದಗ 1.74 ಕೋಟಿ 52.63 ಕೋಟಿ ರೂ.
ಹಾವೇರಿ 1.93 ಕೋಟಿ 53.08 ಕೋಟಿ ರೂ.
ಉತ್ತರ ಕನ್ನಡ 1.60 ಕೋಟಿ 43.60 ಕೋಟಿ ರೂ.

ಜೂನ್ 11 ರಂದು ಶಕ್ತಿ ಯೋಜನೆ ಜಾರಿಯಾಗಿದ್ದು ಸಾರ್ವಜನಿಕರ ಸಹಭಾಗಿತ್ವ ಹಾಗೂ ಸಹಕಾರದಿಂದ ನಾಲ್ಕು ತಿಂಗಳು ಪೂರೈಸಿ ಯಶಸ್ವಿಯಾಗಿ ಮುಂದುವರೆದಿದೆ ಎಂದು ವಾ. ಕ. ರ. ಸಾ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ :ಮಲೆ ಮಾದಪ್ಪನ ಹುಂಡಿ ಎಣಿಕೆ: 39 ದಿನಗಳಲ್ಲಿ 2.28 ಕೋಟಿ ರೂ. ಕಾಣಿಕೆ ಸಂಗ್ರಹ

ABOUT THE AUTHOR

...view details